Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಛಲದಂಕ ಮಲ್ಲ ಹುಕ್ಕೇರಿ

localview news

ವರದಿ: ಮಹೇಶ ಕೆ.ಎಚ್.

ಬೆಳಗಾವಿ: ಹಿರಿಯ ರಾಜಕಾರಣಿ, ಕೆಲಸದ ಮೂಲಕವೆ ಜನಪ್ರಿಯ ಗಳಿಸಿರುವ ವಾಯವ್ಯ ಶಿಕ್ಷಕ‌ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರ ವಯಸ್ಸನ್ನ ಗುರಿಯಾಗಿಸಿದ್ದ ಬಿಜೆಪಿಗೆ ಈ ಚುನಾವಣೆಯಲ್ಲಿ ಭಾರಿ ಮುಖಭಂಗವಾಗಿದೆ.

ಬೆಳಗಾವಿ ಜಿಲ್ಲೆಗೆ ಬಿಮ್ಸ್ ಬರಲು ಪ್ರಕಾಶ ಹುಕ್ಕೇರಿ ಅವರೇ ಕಾರಣ. ಯಾವುದೇ ಕ್ಷೇತ್ರದಲ್ಲಾಗಲಿ ಸಮಸ್ಯೆ ಬಗೆ ಹರಿಸಲು ಪ್ರಕಾಶ ಹುಕ್ಕೇರಿ ಮಂಚೂಣಿಯಲ್ಲಿರುತ್ತಾರೆ. ಬಿಜೆಪಿಯ ಸಾಧನೆ ಬಗ್ಗೆ ಮಾತನಾಡಿಕೊಳ್ಳದ ನಾಯಕರು ಪ್ರಕಾಶ ಹುಕ್ಕೇರಿ ಅವರ ವಯಸ್ಸನ್ನು ಮುಂದೆ ಇಟ್ಟು ಕೊಂಡು ಪ್ರಚಾರ ನಡೆಸಿದ್ದು ಬಾರಿ ಬೆಲೆ ಕಟ್ಟುವಂತಾಗಿದೆ.

ಬಿಜೆಪಿ ಅಭ್ಯರ್ಥಿಯಾಗಿದ್ದ ಅರುಣ ಶಹಾಪುರ ಅವರು ಎರಡೂ ಬಾರಿ ಆಯ್ಕೆಯಾದರೂ ಶೈಕ್ಷಣಿಕ, ಶಿಕ್ಷಕರ ಸಮುದಾಯಕ್ಕೆ ಮಾಡಿದ್ದಾದರೂ ಏನು ? ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಚುನಾವಣೆಯ ಪ್ರಚಾರ ನಡೆಸಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಿದ್ದ ಬನ್ನೂರ ಆರೋಪಿಸಿದ್ದರು.

ಅರುಣ ಶಹಾಪುರ ಸಂಘ ಪರಿವಾರ, ಬಿಜೆಪಿ ಶಿಸ್ತಿನ ಸಿಪಾಯಿ. ಇದರಲ್ಲಿ ಎರಡು ಮಾತಿಲ್ಲ. ಆದರೆ ಅವರು ಯಡವಿದ್ದು ಎಲ್ಲಿ ? ಎನ್ನುವುದು ಆತ್ಮಾವಲೋಕನ ಮಾಡುವ‌ ಮೊದಲು ಅವರು ಸ್ಪಷ್ಟವಾಗಿ ಅರಿತರೆ ಸಾಕು. ಅರುಣ ಶಹಾಪುರ ಪಕ್ಷದ ಪ್ರಾಮಾಣಿಕ ವ್ಯಕ್ತಿ. ಆದರೆ ಬಿಜೆಪಿ ಸಮಾವೇಶದಲ್ಲಿ, ಯಡಿಯೂರಪ್ಪನವರು ಆಗಮಿಸಿದಾಗ ಕಾಂಗ್ರೆಸ್ ಅಭ್ಯರ್ಥಿ 37 ಹೆಜ್ಜೆ ನಡೆದು ತೋರಿಸಲಿ ಎಂದು ಸವಾಲ್ ಹಾಕಿದ್ದರು. ಸಮಾವೇಶದಲ್ಲಿ ಭಾಗಿಯಾದವರಲ್ಲಿ ಕಾಂಗ್ರೆಸ್ ನ ಮತದಾರರು ಇದ್ದರು ಎನ್ನುವುದನ್ನು ಶಹಾಪುರ‌ ಅರಿಯದೆ ಮಾತನಾಡಿದ್ದು ವಿಪರ್ಯಾಸದ ಸಂಗತಿ.

ಪ್ರಕಾಶ ಹುಕ್ಕೇರಿ ಅವರಿಗೆ ವಯಸ್ಸಾದಷ್ಟು ಶಹಾಪುರಗೆ ಅನುಭವ ಇಲ್ಲ. ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದು ಶಿಕ್ಷಕ ಹಾಗೂ ಮತದಾರರನ್ನು ಕೆರಳಿಸುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.

ಪ್ರಕಾಶ ಹುಕ್ಕೇರಿ ವರ್ಕರ್. ಯಾವುದೇ ಕ್ಷೇತ್ರ ಇರಲಿ. ಅವರ ರಾಜಕೀಯ ಅನುಭವ, ಸರಳತೆ, ಬಡವರ ಬಗ್ಗೆ ಕಾಳಜಿ ವಹಿಸುವ ಅವರ ಗೆಲವು ಇಡೀ ಕರ್ನಾಟಕವೇ ಹೆಮ್ಮೆ ಪಡುತ್ತಿದೆ.