Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ವಿಶ್ವ ಯೋಗ ದಿನಾಚರಣೆ ಅಂಗವಾಗಿ ಬೆಳಗಾವಿ ‌ಹುಕ್ಕೇರಿ ಹಿರೇಮಠದಲ್ಲಿ ಉಚಿತ ಯೋಗ ಶಿಬಿರ ಮತ್ತು ಆರೋಗ್ಯ ಸಲಹೆ ಕಾರ್ಯಕ್ರಮ

localview news

ಬೆಳಗಾವಿ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಬೆಳಗಾವಿ ‌ನಗರದ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಶ್ರೀ ಗುರುಶಾಂತೇಶ್ವರ ಕಲ್ಯಾಣ ಪ್ರತಿಷ್ಠಾನ ಹಿರೇಮಠ ಹುಕ್ಕೇರಿ, ಚಿರಾಯು ಪ್ರಕೃತಿ ಮತ್ತು ಯೋಗ ಚಿಕಿತ್ಸಾಲಯ ಬೆಳಗಾವಿ ‌ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಯೋಗ ಶಿಬಿರ ಹಾಗೂ ಆರೋಗ್ಯ ಸಲಹಾ ಕಾರ್ಯಕ್ರಮ‌ ಶುಕ್ರವಾರದಿಂದ ಐದು‌ ದಿನಗಳ ಕಾಲ ನಡೆಯಲಿದೆ. ಜೂ.17 ರಿಂದ‌ 21 ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಡಾ. ಪದ್ಮನಾಭ ದರ್ಬಾರೆ ಅವರು ಯೋಗ ತರಬೇತಿ ಮತ್ತು ಉಚಿತ ಆರೋಗ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ‌ಶಿವಾಚಾರ್ಯ ಸ್ವಾಮೀಜಿ ‌ಮಾತನಾಡಿ, ರಂಭಾಪುರಿ ಜಗದ್ಗುರುಗಳ ಆಜ್ಞೆಯಂತೆ ಶ್ರೀಮಠದಲ್ಲಿ ಉಚಿತ ಯೋಗ ಹಾಗೂ ಆರೋಗ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಲಾಭವನ್ನು ಪಡೆದುಕೊಳ್ಳುವ ಅವಶ್ಯಕತೆ ಎಲ್ಲರಿಗೆ ಇದೆ ಎಂದ ಅವರು, ಇದೇ 21 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಆಗಮಿಸಿ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ಸಂತಸ ತಂದಿದೆ ಎಂದರು. ಡಾ. ಪದ್ಮನಾಭ ದರ್ಬಾರೆ ಮಾತನಾಡಿ, ಹುಕ್ಕೇರಿ ಶ್ರೀಗಳ ಆಶೀರ್ವಾದದಂತೆ ಐದು ದಿನಗಳ ಯೋಗ ತರಬೇತಿಯನ್ನು ಹಮ್ಮಿಕೊಂಡಿದ್ದೇವೆ. ಜನರು ಇದರ ಉಪಯೋಗ ಪಡೆದುಕೊಳ್ಳುವುದು ಅಷ್ಟೆ ಅಲ್ಲದೆ, ನಮ್ಮ‌ ಸನಾತನ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕಟಕೋಳ ಎಂ ಚಂದರಗಿ ಹಿರೇಮಠದ ರೇಣುಕ ಗಡದೇಶ್ವರ ದೇವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಹಾಂತೇಶ ಶಿವಪೂಜೆ, ಜ್ಯೋತಿ ಪಟ್ಟಣಶೆಟ್ಟಿ, ಪಾಂಡುರಂಗ ನಂದ್ಯಾಳಕರ, ಸುಮೀತಾ ಪಟ್ಟಣಶೆಟ್ಟಿ, ಶಿವಬಸವ ಕಂಬಾರ, ಶೈಲಾ ಚಿಕಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.