Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಂಡರೆ ಮಾತ್ರ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಸಾಧ್ಯ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

localview news

ಘಟಪ್ರಭ: ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡೆದಾಗ ಮಾತ್ರ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದರು.

ಪಟ್ಟಣದ ಡಾ. ಎನ್.‌ಎಸ್.‌ ಹರ್ಡೇಕರ್‌ ಮಂಜಪ್ಪ ತರಬೇತಿ ಕೇಂದ್ರದಲ್ಲಿ ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ವತಿಯಿಂದ ನಡೆಯುತ್ತಿರುವ ಉಚಿತ ಆರ್ಮಿ, ಪೊಲೀಸ್‌ ತರಬೇತಿ ಮತ್ತು ಸ್ವಯಃ ಉದ್ಯೋಗ ತರಬೇತಿ ನೀಡುತ್ತಿರುವುದನ್ನು ಪರಿಶೀಲಿಸಿ, ನೂನತವಾಗಿ ಹಮ್ಮಿಕೊಂಡಿದ್ದ 'ಕಲೆಗಳ ಕಲರವ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವಕರು ಉನ್ನತ ಜೀವನ ಕಟ್ಟಿಕೊಳ್ಳಲಿ ಎಂಬ ಉದ್ದೇಶದಿಂದ ನಾವು ವಿವಿಧ ತರಬೇತಿಗಳನ್ನು ನೀಡುತ್ತಿದ್ದು, ಈ ತರಬೇತಿಯಲ್ಲಿ ಪಡೆದ ಜ್ಞಾನದಿಂದ ನೀವು ಜೀವನ ರೂಪಿಸಿಕೊಂಡರೆ ನಾವು ಖರ್ಚು ಮಾಡಿದ ಹಣ ಸ್ವಾರ್ಥಕವಾಗುತ್ತದೆ ಎಂದು ತಿಳಿಸಿದರು.

ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಹೇಳಿದಾಗೆ ಇತಿಹಾಸ ಗೊತ್ತಿಲ್ಲದೇ ಇತಿಹಾಸವನ್ನು ನಿರ್ಮಿಸಲು ಸಾಧ್ಯವಿಲ್ಲ. ಹೀಗಾಗಿ ಇಲ್ಲಿ ದೇಶದ ಇತಿಹಾಸ, ರಾಜಕೀಯ ಬೆಳವಣಿಗಳು, ಯುವ ಸಮುದಾಯವನ್ನು ಎಚ್ಚರಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಯುವಕರು ಕ್ರೀಡೆ, ಓದು, ಕಲೆಗಳಿಗೆ ಆದ್ಯತೆ ನೀಡಿ, ಹಾಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆ ಗಮನ ಹರಿಸಬೇಕು. ಕಾರಣ ಯುವಕರಿಗಾಗಿಯೇ ತರಬೇತಿ ಕೇಂದ್ರದಲ್ಲಿ "ಕಲೆಗಳ ಕಲರವ" ಎಂಬ ನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮ ಮೂಲಕ ಜೀವನ ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದರು.

ಸರ್ಕಾರಿ ನೌಕರಿ ಎಲ್ಲರಿಗೂ ದೊರಕಲು ಸಾಧ್ಯವಿಲ್ಲ. ಹೀಗಾಗಿ ಎಲ್ಲ ರಂಗಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದ ಅವರು, ಅದಕ್ಕೆ ಬೇಕಾದ ಎಲ್ಲ ಸೌಕರ್ಯಗಳನ್ನು ನಾವು ವಿದ್ಯಾರ್ಥಿಗಳಿಗೆ ಒದಗಿಸಲು ಬದ್ಧರಿದ್ದೇವೆ ಎಂದು ತಿಳಿಸಿದರು.

ಇನ್ನು ಸಮಾನತೆಗಾಗಿ ನಾವು ಮಾನವ ಬಂಧುತ್ವ ವೇದಿಕೆ ಮೂಲಕ ರಾಜ್ಯಾದ್ಯಂತ ಹೋರಾಟ, ಜಾಗೃತಿ, ತರಬೇತಿ ನೀಡುತ್ತಿದ್ದು, ಅವುಗಳಲ್ಲಿ ನೀವು ಭಾಗಿಯಾಗಿ, ಜನರನ್ನು ಜಾಗೃತಗೊಳಿಸಬೇಕೆಂದು ಸೂಚಿಸಿದರು.

ಇದೇ ವೇಳೆ ಶಿಬಿರಾರ್ಥಿಗಳು ಮಾತನಾಡಿ, ಶಾಸಕರಾದ ಸತೀಶ್ ಜಾರಕಿಹೊಳಿ ಅವರು ಮಾಡುತ್ತಿರುವ ಸಾಮಾಜಿಕ ಕಾರ್ಯವನ್ನು ನಮ್ಮ ದೇಶದಲ್ಲಿ ಯಾವ ರಾಜಕಾರಣಿ ಮಾಡುತ್ತಿಲ್ಲ. ಸದಾ ಬಡವರು, ಹಿಂದುಳಿದ ಯುವಕರು, ಮಹಿಳೆಯರನ್ನು ಆರ್ಥಿಕವಾಗಿ ಬಲಿಷ್ಠವಾಗಲು ಹಲವು ಕಾರ್ಯಕ್ರಮ ಹಮ್ಮಿಕೊಂಡು ಯುವಕರಗೆ ಆದರ್ಶವಾಗಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಯುವ ನಾಯಕ ರಾಹುಲ್‌ ಜಾರಕಿಹೊಳಿ, ಯುವ ನಾಯಕಿ ಪ್ರಿಯಂಕಾ ಜಾರಕಿಹೊಳಿ, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್‌, ಡಾ. ಎನ್.‌ಎಸ್.‌ ಹರ್ಡೇಕರ್‌ ಮಂಜಪ್ಪ ತರಬೇತಿ ಕೇಂದ್ರದ ಸಿಬ್ಬಂದಿ ಸೇರಿದಂತೆ ಉಚಿತ ಆರ್ಮಿ, ಪೊಲೀಸ್‌ ತರಬೇತಿ ಮತ್ತು ಸ್ವಯಃ ಉದ್ಯೋಗ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳು ಇದ್ದರು.