Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಿ: ಕೊಳೆಕರ

localview news

ಮುರಗೋಡ: ಕೃಷಿಕರು ವೈಜ್ಞಾನಿಕ ಪದ್ದತಿಯನ್ನು ಅಳವಡಿಸಿಕೊಂಡು ವಿಜ್ಞಾನಿಗಳ ರೀತಿಯಲ್ಲಿ ಕೃಷಿ ಚಟುವಟಿಕೆಗಳನ್ನು ಹಮ್ಮಿಕೊಂಡಾಗ ಕೃಷಿ ಲಾಭದಾಯಕವಾಗಿ ರೈತರ ಆದಾಯ ದ್ವಿಗುಣವಾಗಲಿದೆ ಎಂದು ಜಿಲ್ಲಾ ಕೃಷಿ ಉಪನಿರ್ದೇಶಕ ಎಚ್.ಡಿ.ಕೊಳೆಕರ ಹೇಳಿದರು. ಸಮೀಪದ ಚಚಡಿ ವಾಡೆಯಲ್ಲಿ ಬುಧವಾರ ಸರ್.ವಿ.ಜಿ.ದೇಸಾಯಿ ಪೌಂಡೇಶನ್, ಚಾಮುಂಡೇಶ್ವರಿ ಅತ್ಮಾ ಸಂಘ ಮರಕುಂಬಿ ಹಾಗೂ ಕೃಷಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಮುಂಗಾರು ಬೇಳೆಗಳಲ್ಲಿ ಕೀಟ ಹತೋಟಿ ಹಾಗೂ ಕಬ್ಬು ಬೇಳೆಗೆ ತಗಲುವ ಡೊಣ್ಣೆ ಹುಳದ ನಿಯಂತ್ರಣದ ಕೃಷಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕೃಷಿ ಇಂದು ರಾಷ್ಟ್ರೀಯ ಜಿಡಿಪಿಯಲ್ಲಿ ಪ್ರತಿಶತ 22 ರಷ್ಟು ತನ್ನ ಪಾಲನ್ನು ಹೆಚ್ಚಿಸಿಕೊಳ್ಳುವ ಮೂಲಕ ಪ್ರಪಂಚದಲ್ಲಿ ಹಾಲು, ಕಬ್ಬು, ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗಣನೀಯವಾಗಿ ಸಾಧನೆಗೈದಿದ್ದು ಬರುವದಿನಗಳಲ್ಲಿ ರಕ್ಷಣಾ ಸಾಮಾಗ್ರಿಗಳು, ಎಣ್ಣೆ ಕಾಳುಗಳ ಸ್ವಾವಲಂಭಣೆ ಸಾಧಿಸಲಿದ್ದೆವೆ.‌

8 ನೇ ತರಗಿತಿಯಿಂದ 10ನೇ ತರಗತಿಯಲ್ಲಿ ಕಲಿಯುತ್ತಿರುವ ರೈತರ ಹೆಣ್ಣು ಮಕ್ಕಳಿಗೆ ವಾರ್ಷಿಕ 2 ಸಾವಿರ ರೂಪಾಯಿ ಶಿಷ್ಯ ವೇತನವನ್ನು ಸರಕಾರ ನೀಡುತಿದ್ದು ವಿಧ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದೆರು.

ಹೊಸೂರ ಭಾಗದ ಎಪಿಎಂಸಿ ಸದಸ್ಯ ಎಫ್‌ಎಸ್.ಸಿದ್ದನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ, ರೈತರಿಗೆ ತರಬೇತಿ ಹಾಗೂ ಬೆಳೆಗಳ ಪೋಷಣೆಯ ಬಗ್ಗೆ ಕಾಲ ಕಾಲಕ್ಕೆ ತಕ್ಕಂತಹ ಸಲಹೆ ಸೂಚನೆ ನೀಡಲು ಸಿದ್ದರಾಗಿರುವ ಕೃಷಿ ಅಧಿಕಾರಿಗಳನ್ನು ರೈತರು ಸಂಪರ್ಕಿಸಿ ಅವರ ಸಲಹೆ ಪಡೆದು ಕೃಷಿ ಚಟುವಟಿಕೆ ಕೈಗೊಂಡಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಬಹುದಾಗಿದ್ದು ಈ ನಿಟ್ಟಿನಲ್ಲಿ ರೈತರು ನಿರಂತರ ಸಂಪರ್ಕದಲ್ಲಿರಬೇಕೆಂದರು.

ಮುರಗೋಡ ಠಾಣೆಯ ಸಿಪಿಆಯ್ ಮೌನೇಶ ಮಾಳಿಪಾಟೀಲ ಮಾತನಾಡಿ, ರೈತರು ತಮ್ಮ ಜಮಿನುಗಳಲ್ಲಿ ಕಬ್ಬು ತೊಗರಿ ಹತ್ತಿ ಬೇಳೆಗಳನ್ನು ಬೆಳೆಯುವಾಗ ಗೊತ್ತಿಲ್ಲದೆಯೊ ಗೊತ್ತಿದ್ದೊ ಗಾಂಜಾ ಅಫೀಮು ಬೇಳೆಯಬಾರದು. ಹಾಗೂ ಮುರಗೊಡ ಹೋಬಳಿ ಮಟ್ಟದಲ್ಲಿ ರೈತರು ತಮ್ಮ ಹೆಣ್ಣುಮಕ್ಕಳನ್ನು ಬಾಲ್ಯವಿವಾಹ ಮಾಡಿಕೊಡುವ ದುಸ್ಸಾಹಸಕ್ಕೆ ಕೈ ಹಾಕಿ ಕಾನೂನಿನಲ್ಲಿ ಬಂದಿತರಾಗುತಿದ್ದಾರೆ ಎಂದು ಎಚ್ಚರಿಸಿದರು.

ಸವದತ್ತಿ ತಾಲೂಕಾ ಕೃಷಿ ಸಹಾಯಕ ನಿರ್ದೇಶಕ ಶಿವಪ್ರಕಾಶ್ ಪಾಟೀಲ ಹಾಗೂ ಮುರಗೋಡ ಹೊಬಳಿ ಕೃಷಿ ಅಧಿಕಾರಿ ನಾಗೇಶ್ ವಿರಕ್ತಮಠ ಮಾತನಾಡಿ, ಮುಂಗಾರು ಬೆಳೆಗಳಿಗೆ ಬರಬಹುದಾದ ರೋಗಗಳು ,ಕೀಟಗಳ ಹತೋಟಿ ಮತ್ತು ಕಬ್ಬು ಬೆಳೆಯಲ್ಲಿ ಕಾಣಿಸಿಕೊಳ್ಳುವ ಡೊಣ್ಣೆ ಹೂಳಗಳ ಬಾಧೆ ತಡೆಗಟ್ಟಬಹುದಾದ ಕ್ರಮಗಳ ಬಗ್ಗೆ ವಿವರಿಸಿ, ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಸಿಗಬಹುದಾದ ಸವಲತ್ತುಗಳ ಬಗ್ಗೆ ತಿಳುಸುವದರೊಂದಿಗೆ ರೈತರಿಗೆ ಕೃಷಿಯಲ್ಲಿ ಬರುವ ಎಲ್ಲ ಸಮಸ್ಯೆಗಳಿಗೆ ನಮ್ಮ ಅಧಿಕಾರದ ಇತಿಮಿತಿಯೊಳಗೆ ಪ್ರಾಮಾಣಿಕವಾಗಿ ಪರಿಹರಿಸುವ ಭರವಸೆ ನೀಡಿದರು.

ರೈತರು ರಸಾಯನಿಕ ಅಂಗಡಿಕಾರರ ಹೇಳಿಕೆಯಂತೆ ಅತಿ ಹೆಚ್ಚು ಬೆಲೆಉಳ್ಳ ರಾಸಾಯನಿಕಗಳ ಬಳಕೆ ಮಾಡದೆ ಬೆಳೆಗಳಿಗೆ ಅವಶ್ಯಕವಿರುವ ರಸಾಯನಿಕಗಳ ಬಳಕೆ ಮಾಡುವಂತೆ ಸಲಹೆ ನೀಡಿದರು. ನಾಗರಾಜ್ ದೇಸಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉತ್ತಮ ಕೃಷಿ ಚಟುವಟಿಕೆಗಳನ್ನು ಮಾಡಿದ ರೈತರನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಧಿಕಾರಿಗಳನ್ನು ವೇದಿಕೆಯ ಮೇಲೆ ಸತ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಮಧುಸುದನ ಅಮ್ಟೆ, ರಾಜಶೇಖರ ಯರಗಟ್ಟಿ, ವೃಷಭಕುಮಾರ ಚರಲಿಂಗಮಠ, ಬಸವರಾಜ ತೋಟಗೆ, ಮಹಾಂತೇಶ ಕಡಬಿ, ಬಸವರಾಜ ತಿಗಡಿ, ಹಣಮಂತ ಹುಂಡೆಕಾರ, ಅವಿನಾಶ ದೇಸಾಯಿ, ಬಸನಗೌಡ ಪಾಟೀಲ, ಆನಂದ ವಾಲಿ, ಮಲ್ಲಿಕಾರ್ಜುನ ಬೈಲವಾಡ, ಸೋಮಶೇಖರ್ ವಣ್ಣುರ, ರಾಜು ಹಂಪಿಹೊಳಿ, ಶಿವಪ್ರಕಾಶ್ ಯಕ್ಕುಂಡಿ, ಶ್ವೇತಾ ಕೋಟಗಿ ಹಾಗೂ ನೂರಾರು ರೈತರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು