ಬೆಂಗಳೂರು :ರಾಜ್ಯದಲ್ಲಿ ಇವತ್ತು ಕೊರೊನಾ ರಣಕೆಕೆಯನ್ನು ಹಾಕುತ್ತಿದೆ ರಾಜ್ಯದಲ್ಲಿ ಒಂದೇ ದಿನಾ ಕೋರೊನಾ ಸ್ಫೋಟವಾಗಿದ್ದು , ಬರೋಬ್ಬರಿ 388 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ . ರಾಜ್ಯದಲ್ಲಿ ಇವತ್ತು ಒಂದೇ ದಿನ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿರುವುದು ಆತಂಕ ಮೂಡಿಸಿದೆ .
ಇಷ್ಟು ದಿನ ನೂರು , ಇನ್ನೂರರ ಸಂಖ್ಯೆಯಲ್ಲಿದ್ದ ಕೊರೊನಾ ಸೋಂಕಿತರ ಸಂಖ್ಯೆ ಇವತ್ತು ಇಷ್ಟೊಂದು ಸಂಖ್ಯೆಯಲ್ಲಿ ಏರಿಕೆಯಾಗಿರುವುದು ರಾಜ್ಯದ ಜನರನ್ನು ಬೆಚ್ಚಿಬೀಳಿಸಿದೆ . ಪತ್ತೆಯಾಗಿರುವ ಸೋಂಕಿತರಲ್ಲಿ ಬಹುತೇಕರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ .