ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೋ ಗ್ರೀನ್ ಜೆರ್ಸಿಯಲ್ಲಿ ಅಕ್ಟೋಬರ್ 25 ರಂದು ಕಣಕ್ಕೆ
ದುಬೈ: ಆರ್ ಸಿಬಿ ಆಟಗಾರರು ತಮ್ಮ ಎಂದಿನ ಕೆಂಪು, ಕಪ್ಪು ಬಣ್ಣದ ಜೆರ್ಸಿ ಬಿಟ್ಟು ಪಂದ್ಯಕ್ಕೆ ಮಾತ್ರ ಜೆರ್ಸಿ ತೊಟ್ಟು ಪ್ರತಿ ವರ್ಷದಂತೆ ಈ ವರ್ಷವೂ ಸಹ ಗೋ ಗ್ರೀನ್ ಅಭಿಯಾನಕ್ಕೆ ಒತ್ತು ನೀಡಲಿದೆ. ದುಬೈ ಇಂಟರ್ನ್ಯಾಷ್ನಲ್ ಸ್ಟೇಡಿಯಂನಲ್ಲಿ ಅಕ್ಟೋಬರ್ 25 ರಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಗ್ರೀನ್ ಜರ್ಸಿ ತೊಟ್ಟು ಕಣಕ್ಕಿಳಿಯಲಿದೆ.
ಐಪಿಎಲ್ ಭಾರತದ ದೇಶದ ಮನರಂಜನೆಯ ಹಬ್ಬವಾಗಿ ಬದಲಾಗಿದೆ.ಕೋಟ್ಯಾಂತರ ಜನ ಇದನ್ನ ವೀಕ್ಷಣೆ ಮಾಡುತ್ತಾರೆ ಈ ವರ್ಷ ಜಗತ್ತಿನಲ್ಲಿ ಕೊರೊನಾ ಮಾಹಾಮಾರಿಗೆ ಜನಜೀವನ ಅಸ್ತ ವ್ಯಸ್ತ ವಾಗಿದೇ ಅದರ ಕೂರಿತು ಜಾಗೃತಿ ಮೂಡಿಸುವ ಮೂಲಕ ಹಾಗೂ ಪರಿಸರ ಸಂರಕ್ಷಣೆ ಹಾಗೂ ತಾಜ್ಯಗಳ ಮರುಬಳಕೆಗೆ ಒತ್ತು ನೀಡವು ಉದ್ದೇಶದಿಂದ ಪ್ರತಿ ಆವೃತ್ತಿಯಲ್ಲಿ RCB ಗೋ ಗ್ರೀನ್ ಅಭಿಯಾನವನ್ನ ಪಾಲಿಸಿಕೊಂಡು ಬಂದಿದೆ.ಐಪಿಎಲ್ ಇತಿಹಾಸದಲ್ಲಿ ಆರ್ ಸಿ ಬಿಗೆ ಇದಕ್ಕಿಂತ ಒಳ್ಳೆ ವೇದಿಕೆ ಇನ್ನೊಂದಿಲ್ಲ.
ಹೀಗಾಗಿ ಹಸಿರು ಬಣ್ಣದ ಜರ್ಸಿ ತೊಡುವ ಮೂಲಕ ಪರಿಸರ ಸ್ನೇಹಿ ಜೀವನ ಶೈಲಿಗೆ ಒಗ್ಗಿಕೊಳ್ಳುವಂತೆ ತಿಳಿಸುವ ಪಯತ್ನ ನಮ್ಮ ಆರ್ ಸಿಬಿ ತಂಡದ್ದು. ಗೋ ಗ್ರೀನ್ ಪಂದ್ಯದ ಕುರಿತು ಆರ್ಸಿಬಿ ಆಟಗಾರರು ಪರಿಸರ ಸಂರಕ್ಷಣಾ ಜಾಗೃತಿ ಕುರಿತು ಸಂದೇಶವನ್ನು ಈ ವರ್ಷವೂ ಸಾರಲಿದ್ದಾರೆ.