ಲಾಭ ನಷ್ಟದ ಲೆಕ್ಕಾಚಾರದಲ್ಲಿ ಸರ್ಕಾರ ! ಮಧ್ಯಪ್ರಿಯರು ಹರೋಹರ

  • shivaraj bandigi
  • 23 Feb 2024 , 11:48 PM
  • Belagavi
  • 510

ಬೈಲಹೊಂಗಲ :  ಸರ್ಕಾರವೆನೋ ಗ್ಯಾರಂಟಿ ಇಲ್ಲದೆ ಯೋಜನೆಗಳನ್ನು ನೀಡಿದೆ. ಜನರೂ ಕೂಡಾ ಅದನ್ನು ಸ್ವಾಗತಿಸಿದ್ದಾರೆ. ಆದರೆ ಸರ್ಕಾರದ ಲಾಭ ನಷ್ಟದ ಲೆಕ್ಕಾಚಾರದಲ್ಲಿ ಬಡವನಾಗಿದ್ದು ಮಾತ್ರ ಮದ್ಯಪ್ರಿಯ.

ಪಾಕೇಟ್ ಸರಾಯಿ ನಿಷೇಧವಾದ ಕೂಡಲೇ ಬಾಯಿ ಬಾಯಿ ಬಡೆದುಕೊಂಡವರೆ ಈಗ ಬಡವರ ಪಾಲಿನ ಸಾರಾಯಿ ಬೆಲೆ ಗಗನಕ್ಕೆ ಏರಿಸಿದ್ದು ಸಮಂಜಸವೇ ಎನ್ನುವಂತಾಗಿದೆ ಈಗಿನ  ದಿನಮಾನಗಳು. 

ಇದೇ ವರ್ಷದ ಎಪ್ರಿಲ್ ತಿಂಗಳಲ್ಲಿ 180 ಮಿ.ಲೀ ಟೆಟ್ರಾ ಪ್ಯಾಕೇಟ ಸರಾಯಿ ಬೆಲೆ ರೂ. 110 ಇರುವಂತಹದ್ದು ಗ್ಯಾರಂಟಿ ಯೋಜನೆಗಳು ಜಾರಿಯಾದಾಗಿನಿಂದ ಎಂಟು ತಿಂಗಳಲ್ಲಿ ಮೂರು ಬಾರಿ ಬೆಲೆ ಏರಿಕೆ ಕಂಡಿದೆ. 110 ರೂ. ಮುಖಬೆಲೆಯ ಸಾರಾಯಿಗೆ ಇಂದು ಸರಿ ಸುಮಾರು ರೂ. 200 ತೆರಬೇಕಾಗಿದೆ. ಅಲ್ಲದೆ ಮೊನ್ನೆಯ ಬಜೆಟನಲ್ಲಿ ಮತ್ತೆ 20% ಪ್ರತಿಶತ ಅಬಕಾರಿ ತೆರಿಗೆ ಏರಿಸಿದ ಸರ್ಕಾರ ರೂ.200 ರಿಂದ 240 ರೂಗೆ ಮಾರಾಟ ಮಾಡಲು ಹೊರಟಿರುವದು ಯಾವ ನ್ಯಾಯ. 

ಸಾರಾಯಿ ಬೆಲೆ ಹೆಚ್ಚಿದಂತೆ ರಾಜ್ಯದ ಗಡಿಯಲ್ಲಿರುವ ಮದ್ಯ ಪ್ರಿಯರು  ಹೊರರಾಜ್ಯದ ಅಬಕಾರಿ ಖಜಾನೆ ತುಂಬಿಸುವತ್ತ ಗಮನ ಹರಿಸುತ್ತಿದ್ದಾರೆ. 

ಕರ್ನಾಟಕದ 180 ಮಿ.ಲೀ ಸಾರಾಯಿ ಬೆಲೆ ರೂ. 240 ಆದರೆ ಪಕ್ಕದ ಮಹಾರಾಷ್ಟ್ರದಲ್ಲಿ ಅದೇ ಸರಾಯಿಗೆ ಕೇವಲ 120 ರಿಂದ 150 ಅಷ್ಟೇ. ಇದರಿಂದ ದಿನಗೂಲಿಗೆ ದುಡಿಯುವ ಕಾರ್ಮಿಕ ಗಳಿಸುವ 300 ರೂಗಳಲ್ಲಿ ನೂರು ರೂಪಾಯಿಯ ಸರಾಯಿ ಕುಡಿದು ಮಿಕ್ಕಿದ ಹಣ ಮನೆಗೆ ಕೊಡುತ್ತಿದ್ದ ಆದರೆ ಇಂದಿನ ಪರಿಸ್ಥಿತಿ ಮಾತ್ರ ವಿಭಿನ್ನ. ಬಂದ 300 ರೂ ದಲ್ಲಿ 240 ರೂಪಾಯಿ ಸರಾಯಿ ಕುಡಿದರೆ ಮನೆಗೆ ಏನು ತಾನೆ ಕೊಟ್ಟಾನು? 

ಗ್ಯಾರಂಟಿಗಳ ಲೆಕ್ಕದಲ್ಲಿ ಬಡವನ ಮಧ್ಯವನ್ನು ಕಿತ್ತುಕೊಳ್ಳುತ್ತಿರುವ ಸರ್ಕಾರ ಇತ್ತ ಕಡೆ ಗಮನ ಕೊಡಲಿ. 

ಇಲ್ಲವಾದಲ್ಲಿ ಆದಾಯ ಕೊಡುವ ಇಲಾಖೆಯ ಖಜಾನೆ ಖಾಲಿ ಆಗುವದಂತು ಖಚಿತ.

ಸರ್ಕಾರಕ್ಕೆ ಆರ್ಥಿಕ ಸ್ತಂಭವಾಗಿ ಸಹಾಯ ಮಾಡುವವನೇ ಮದ್ಯಪಾನಿ. ಮತ್ತೊಬ್ಬರಿಗೆ ನೀಡಲು ಅವನಿಂದ ಕಿತ್ತಕೊಂಡು,

ಬೆಲೆ ಹೆಚ್ಚಳ ಮಾಡಿದಾಗ ಆತ ಮದ್ಯಪಾನ ತ್ಯಜಿಸಿದರೆ ಸರ್ಕಾರ ನಡೆಯುವುದಾದರೂ ಹೇಗೆ ಎನ್ನುವ ಪ್ರಶ್ನೆ ಎಲ್ಲರಿಗೂ ಮೂಡುವಂತದು.

ವರದಿ  : ರವಿಕಿರಣ್   ಯಾತಗೇರಿ 

Read All News