ಪಾಲಿಕೆ ಮಾಜಿ ಸದಸ್ಯ ಶಾಂತಾ ಉಪ್ಪಾರ ಮೇಲೆ‌ ಕ್ರಮಕ್ಕೆ ಆಪ್ ಒತ್ತಾಯ

  • 14 Jan 2024 , 10:58 PM
  • Belagavi
  • 151

ಬೆಳಗಾವಿ: ಹಾಲುಮತದ ಸಮಾಜದ ಜಾಗೆಯನ್ನು ದುರುಪಯೋಗ ‌ಪಡೆಸಿಕೊಳ್ಳುತ್ತಿರುವ ಶಾಂತಾ ಉಪ್ಪಾರ ಕುಟುಂಬ ಮೇಲೆ‌ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬುಧವಾರ ಆಮ್ ಆದ್ಮಿ ಪಾರ್ಟಿ ಯುವ ಸಂಘಟನೆ ಪ್ರತಿಭಟನೆ ನಡೆಸಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಪಾಲಿಕೆ ಮಾಜಿ ಸದಸ್ಯ ಶಾಂತಾ ಉಪ್ಪಾರ ಅವರಿಗೆ ಪಾಲಿಕೆಯಿಂದ ಹಾಲುಮತದ ಸಮಾಜದ ಕಾರ್ಯಕ್ರಮಕ್ಕೆ ಸಹಾಯವಾಗುವನಿಟ್ಟಿನಲ್ಲಿ ನೀಡಿದ ಜಾಗೆಯಲ್ಲಿ ಕಾಂಪ್ಲೆಕ್ಸ್ ನಿರ್ಮಾಣ ಮಾಡಿ ವೈಯಕ್ತಿಕ ಲಾಭ ಮಾಡಿಕೊಂಡು ಹಾಲುಮತದ ಸಮಾಜಕ್ಕೆ ಹಾಗೂ ಪಾಲಿಕೆಗೆ ವಂಚಿಸಿದ್ದಾರೆ ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಹಾಲುಮತ ಸಮಾಜದ ಅಭಿವೃದ್ಧಿಗಾಗಿ ಬೆಳಗಾವಿ ಮಹಾನಗರ ಪಾಲಿಕೆಯಿಂದ ಮಾಜಿ ಪಾಲಿಕೆಯ ಸದಸ್ಯೆ ಶಾಂತಾ ಉಪ್ಪಾರ ಅವರು ತಮ್ಮ ಪ್ರಭಾವ ಬೆಳೆಸಿ ಜಮೀನು ಪಡೆದುಕೊಂಡಿದ್ದರು. ಆ ಜಮೀನಿನಲ್ಲಿ ಕಾಂಪ್ಲೆಕ್ಸ್ ನಿರ್ಮಾಣ ಮಾಡಿಕೊಂಡು ಮಳಿಗೆಯಿಂದ ಬಾಡಿಗೆ ಪಡೆಯುತ್ತಿದ್ದಾರೆ ಎಂದು ದೂರಿದರು.

ಇದು ಪಾಲಿಕೆಯ ಆದಾಯಕ್ಕೂ ತೊಂದರೆಯಾಗುತ್ತದೆ ಕೂಡಲೇ ಅವರ ಮೇಲೆ ಕ್ರಮ ಕೈಗೊಂಡು ಆ ಜಾಗೆಯ ಕಟ್ಟಡವನ್ನು ಹಾಲುಮತದ ಸಮಾಜದ ಅಭಿವೃದ್ಧಿ ಹಾಗೂ ಕಾರ್ಯಚಟುವಟಿಕೆ ನಡೆಸಲು ಅನಕೂಲ ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ಆಮ್ ಆದ್ಮಿ ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Read All News