ಚಿಕ್ಕೋಡಿ ಪಟ್ಟಣದಲ್ಲಿ ಪುರಸಭೆ ಎದುರುಗಡೆ ಹೊಸ ವ್ಯಾಪಾರ ಮಳಿಗೆಗಳ ಉದ್ಘಾಟನೆ

ಚಿಕ್ಕೋಡಿ:ಪಟ್ಟಣದ ಪುರಸಭೆ ಎದುರುಗಡೆ ₹63 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ 13 ವ್ಯಾಪಾರ ಮಳಿಗೆಗಳ ಸಮುಚ್ಚಯವನ್ನು ಇಂದು ಉದ್ಘಾಟಿಸಲಾಯಿತು. ಈ ಯೋಜನೆ 2 ಕೋಟಿ ರೂಪಾಯಿ ವಿಶೇಷ ಅನುದಾನದಲ್ಲಿ ನಿರ್ಮಾಣವಾದ ಬ್ರಿಡ್ಜ್ ಯೋಜನೆಯ ಭಾಗವಾಗಿದೆ.

promotions

ಉದ್ಘಾಟನಾ ಸಮಾರಂಭವನ್ನು ಎಂಎಲ್ಸಿ ಪ್ರಕಾಶ ಹುಕ್ಕೇರಿ, ಪುರಸಭಾ ಅಧ್ಯಕ್ಷೆ ವೀಣಾ ಕವಟಗಿಮಠ, ಹಾಗೂ ಉಪಾಧ್ಯಕ್ಷ ಇರ್ಫಾನ ಬೆಪಾರಿ ಅವರ ನೇತೃತ್ವದಲ್ಲಿ ರೆಬೆನ್ ಕಟ್ ಮಾಡುವ ಮೂಲಕ ನಡೆಸಲಾಯಿತು. ನಂತರ ವೇದಿಕೆ ಕಾರ್ಯಕ್ರಮವನ್ನು ನಡೆಸಿ ಬಂದಿರುವ ಅತಿಥಿಗಳನ್ನು ಸತ್ಕರಿಸಲಾಯಿತು.

promotions

ಈ ಸಂದರ್ಭದಲ್ಲಿ ಎಂಎಲ್ಸಿ ಪ್ರಕಾಶ ಹುಕ್ಕೇರಿಯವರು ಮಾತನಾಡಿ, ಚಿಕ್ಕೋಡಿ ಪಟ್ಟಣದ ಅಭಿವೃದ್ಧಿ ವಿಚಾರದಲ್ಲಿ ಯಾವತ್ತೂ ರಾಜಕೀಯ ಪ್ರವೇಶಿಸಬಾರದು ಎಂದು ಹೇಳಿ, ಗುರುವಾರಪೇಟೆ ರಸ್ತೆಯ ಅಗಲೀಕರಣಕ್ಕೆ ಅನುದಾನ ಮಂಜೂರು ಆಗಿದ್ದು, ಈ ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಘೋಷಿಸಿದರು. ಬನಶಂಕರಿ ದೇವಸ್ಥಾನದಿಂದ ನಿಪ್ಪಾಣಿ-ಮುದೋಳ ರಸ್ತೆವರೆಗೆ ಹಳ್ಳದ ಮೇಲೆ ಸ್ಲ್ಯಾಪ್ ಹಾಕುವ ಯೋಜನೆಗೆ ಸಹ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

promotions

ಪುರಸಭಾ ಅಧ್ಯಕ್ಷೆ ವೀಣಾ ಜಗದೀಶ ಕವಟಗಿಮಠ ಮಾತನಾಡಿ, ಎಂಎಲ್ಸಿ ಪ್ರಕಾಶ ಹುಕ್ಕೇರಿಯವರು ಚಿಕ್ಕೋಡಿ ಪಟ್ಟಣಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ ಎಂದರು. “ನಾವು ಎಲ್ಲಾ ಸದಸ್ಯರು ಒಗ್ಗೂಡಿ ಕೆಲಸ ಮಾಡುತ್ತೇವೆ” ಎಂದು ಅವರು ಹೇಳಿದರು.

ಈ ಸಮಾರಂಭದಲ್ಲಿ ಎಸಿ ಸುಭಾಷ ಸಂಪಗಾವಿ, ತಹಶಿಲ್ದಾರ ಚಿದಬರಂ ಕುಲಕರ್ಣಿ, ಪುರಸಭೆ ಉಪಾಧ್ಯಕ್ಷ ಇರ್ಫಾನ ಬೆಪಾರಿ, ಸಂಜಯ ಕವಟಗಿಮಠ, ರಾಮಾ ಮಾನೆ, ಅನೀಲ ಮಾನೆ, ಗುಲಾಬುಹುಸೇನ ಬಾಗವಾನ, ಸಾಬೀರ ಜಮಾದಾರ, ಪ್ರವೀಣ ಕಾಂಬಳೆ, ನಾಗರಾಜ ಮೇಧಾರ, ವಿಶ್ವನಾಥ ಕಾಮಗೌಡ, ಸಿದ್ದಪ್ಪ ಡಂಗೇರ, ಬಾಬು ಮಿರ್ಜೆ, ಅಜಯ ಕವಟಗಿಮಠ, ಆದಮ ಗಣೇಶವಾಡಿ, ವಕೀಲರು ಮುದುಸರ ಜಮಾದಾರ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Read More Articles