ಬೆಳಗಾವಿ ಬುಡಾ ವಿರುದ್ಧ ರೈತರ ಆಕ್ರೋಶ: ಕಣಬರಗಿ ಸ್ಕೀಮ್ ನಂ. 61 ರ ಅಭಿವೃದ್ದಿ ಟೆಂಡರ್ ವಿಳಂಬಕ್ಕೆ ತೀವ್ರ ವಿರೋಧ

ಬೆಳಗಾವಿ: ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರದ (BUDA) ಸ್ಕೀಮ್ ನಂ. 61 ರ ಪ್ರಮುಖ ಟೆಂಡರ್ ಫೈನಲ್ ಆಗದೆ ವಿಳಂಬವಾಗುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕಣಬರಗಿ ಸ್ಕೀಮ್ ನಂ. 61 ರೈತರು ಇಂದು ಬೆಳಗಾವಿ ಬುಡಾ ಕಚೇರಿಗೆ ಬೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

promotions

19 ವರ್ಷಗಳ ಬಳಿಕವೂ ಅಭಿವೃದ್ದಿ ಕುಂಠಿತ:19 ವರ್ಷಗಳ ಹಿಂದೆ ರೈತರ ಜಮೀನು ಪಡೆದ ಬೆಳಗಾವಿ ಬುಡಾ, ವಾಂಛಿತ ಅಭಿವೃದ್ದಿ ಕಾರ್ಯಗಳನ್ನು ಇನ್ನೂ ಪೂರ್ಣಗೊಳಿಸಿಲ್ಲ. ಈ ಮಧ್ಯೆ, ರೈತರ ಆಕ್ರೋಶವನ್ನು ತಣ್ಣಗೊಳಿಸಲು ಕೇವಲ 20 ಲಕ್ಷ ರೂ. ವೆಚ್ಚದ ಸಣ್ಣ ಟೆಂಡರ್ ಪಾಸ್ ಮಾಡಿ, 10 ದಿನ ಕೆಲಸ ಆರಂಭಿಸಿ, 20 ದಿನಗಳಲ್ಲಿ ಅದನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಇದರಿಂದ ರೈತರ ತಾಳ್ಮೆ ಮೀರಿದ್ದು, ಬುಡಾ ಅಧಿಕಾರಿಗಳ ವಿರುದ್ಧ ಬಿರುಸಿನ ಪ್ರತಿಭಟನೆ ವ್ಯಕ್ತಪಡಿಸಿದರು.

promotions

ಮುಖ್ಯ ಟೆಂಡರ್ ವಿಳಂಬಕ್ಕೆ ಆಕ್ಷೇಪ:ಮುಖ್ಯ ಟೆಂಡರ್ ಪಾಸ್ ಮಾಡದೆ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳನ್ನು ಪ್ರಶ್ನಿಸಿದ ರೈತರು, ಈ ವಿಳಂಬವನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆಯಾ ಎಂಬ ಅನುಮಾನ ವ್ಯಕ್ತಪಡಿಸಿದರು. ರೈತರ ಕೋಪವನ್ನು ಮನಗಂಡ ಅಧಿಕಾರಿಗಳಿಗೆ ತೀವ್ರ ಪ್ರಶ್ನೆಗಳ ಸುರಿಮಳೆ ಕೆಳಲಾಗಿದೆ. ನಿಮ್ಮ ಲಾಭಕ್ಕಾಗಿ ರೈತರ ಭೂಮಿಯ ಅನ್ಯಾಯ ಮಾಡುತ್ತಿದ್ದೀರಾ? ಎಂದು ಪ್ರತಿಭಟನಾಕಾರರು ಅಧಿಕಾರಿಗಳ ಎದುರು ಗುಡುಗಿದರು.

ಬುಡಾ ವಿರುದ್ಧ ಗುಡುಗಿದ ಮಹೇಶ್ ಶಿಗಿಹಳ್ಳಿ:ಈ ಸಂದರ್ಭದಲ್ಲಿ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ ಸಂಘಟನೆಯ ರಾಜ್ಯಾಧ್ಯಕ್ಷ ಮಹೇಶ್ ಎಸ್. ಶಿಗಿಹಳ್ಳಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ರೈತರ ತಾಳ್ಮೆಯನ್ನು ಪರೀಕ್ಷಿಸಲು ಅಧಿಕಾರಿಗಳು ಈ ನಿಲುವು ಅಳವಡಿಸಿಕೊಂಡಿದ್ದಾರೆ. ಈ ತಿಂಗಳೊಳಗೆ ಮೂಲ ಮುಖ್ಯ ಟೆಂಡರ್ ಫೈನಲ್ ಆಗದೆ, ಕಾರ್ಯ ಪ್ರಾರಂಭವಾಗದಿದ್ದರೆ, ರೈತರಿಗೆ NOC ನೀಡಬೇಕು ಹಾಗೂ 19 ವರ್ಷಗಳ ಹಾನಿ ಪರಿಹಾರ ಕೊಡಬೇಕು ಎಂದು ಎಚ್ಚರಿಸಿದರು.

ಬುಡಾ ವಿರುದ್ಧ ಆಕ್ರೋಶ ಭುಗಿಲೆದ್ದ ರೈತರ ಎಚ್ಚರಿಕೆ:ಈ ಬೆಳವಣಿಗೆಯಿಂದ ಬೆಳಗಾವಿ ಜಿಲ್ಲೆಯ ರೈತರು ಬುಡಾ ಎಂದ ತಕ್ಷಣ ಕೋಪಗೊಳ್ಳುವ ಪರಿಸ್ಥಿತಿ ಉಂಟಾಗಿದೆ. ಸರ್ಕಾರ ಹಾಗೂ ಬುಡಾ ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕು, ಇಲ್ಲದಿದ್ದರೆ ರೈತರು ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.

Read More Articles