ಯಶಸ್ವಿಯಾಗಿ ಜರುಗಿದ ಟೋಕಿಯೋ ಕನ್ನಡ ಬಳಗದ ಮಹಿಳಾ ದಿನಾಚರಣೆ

ಬೈಲಹೊಂಗಲ :  ಜಪಾನ‌ದೇಶದ ಟೋಕಿಯೋ ನಗರದಲ್ಲಿ ವಾಸಿಸುವ ಕನ್ನಡಿಗರಿಂದ ಮಾರ್ಚ 1 ರಂದು ಜರುಗಿದ ಮಹಿಳಾ ದಿನಾಚರಣೆ ಅತ್ಯಂತ ವಿಜೃಂಭಣೆಯಿಂದ ನಡೆದಿದ್ದು, ಆಯೋಜಕರು ಹರ್ಷ ವ್ಯಕ್ತಪಡಿಸಿದ್ದಾರೆ.

promotions

ಕಾರ್ಯಕ್ರಮದಲ್ಲಿ ಮನರಂಜನೆ, ಆಟೋಟಗಳಲ್ಲಿ ಕನ್ನಡ ಮಹಿಳೆಯರು ಭಾಗವಹಿಸಿ ಸಂತಸ ಹಂಚಿಕೊಂಡರು.

promotions

ವಿದ್ಯಾ ರಾಘವೇಂದ್ರ ಪ್ರಭು ಸ್ವಾಗತ ಕೋರಿ, ಮಾತನಾಡಿ, ನಗರದ ವಿವಿದೆಡೆ ಇರುವ ನಾವೆಲ್ಲ ಕನ್ನಡಿಗರು ಒಂದೆಡೆ ಸೇರಿ ಇಂತಹ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವದು ಸಂತಸ ತಂದಿದೆ ಎಂದರು. 

ಪ್ರೀತಿ ಕುಲಕರ್ಣಿ, ಕವಿತಾ ಶ್ರಿಗಿರಿ ವಂದನಾಪರ್ಣೆ ಸಲ್ಲಿಸಿ, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು. 

ಟೋಕಿಯೋ ನಗರದಲ್ಲಿ ನಡೆದ ಕಾರ್ಯಕ್ರಮವನ್ನು 

ಶ್ವೇತಾ,ಮಹಾನಂದಾ ಮುಕುಂದ, ಶಿಲ್ಪಾ ಭೂತಿ, ಪ್ರತಿಮಾ ಎಸ್. ಹಾಗೂ ಶೀಲಾ ಗೋಳಗೇರಿ ಆಯೋಜನೆ ಮಾಡಿದ್ದರು. ಸುಮಾರು 50ಕ್ಕೂ ಹೆಚ್ಚು ಕನ್ನಡದ ಮಹಿಳೆಯರು ಭಾಗವಹಿಸಿದ್ದರು.

ವರದಿಗಾರ : ರವಿಕಿರಣ್ ಯಾತಗೇರಿ

Read More Articles