ಕರ್ನಾಟಕಕ್ಕೆ ಸಿಕ್ಕ ಅಪರೂಪದ ಸಿಎಂ

ಬೈಲಹೊಂಗಲ- ಡಿಕೆ ಶಿವಕುಮಾರ ಅವರು ರಾಜ್ಯದ 25 ನೇಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ರಾಜ್ಯದ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದಾರೆ. 

promotions

ಪ್ರತಿಯೊಂದು ಸನ್ನಿವೇಶ, ಸಂದರ್ಭದ ಅನುಸಾರವಾಗಿ ಹೆಜ್ಜೆ ಇಡುತ್ತಿರುವದು ಮಹತ್ತರ ಸಾಧನೆಯೇ ಸರಿ. ಅಧಿಕಾರದ ಅಮಲಿಗೆ ಸಿಲುಕದೆ ರಾಜ್ಯದ ಜನರ ಆಗುಹೋಗುಗಳ ಬಗ್ಗೆ ಮಾಹಿತಿ ಇರುವ ಇಂತಹ ಮುಖ್ಯಮಂತ್ರಿಗಳು ಅವಶ್ಯಕ. ಅಧಿಕಾರ ಪಡೆದ ದಿನವೇ ಶೈಕ್ಷಣಿಕವಾಗಿ ಕ್ರಾಂತಿಕಾರಿ ಹೆಜ್ಜೆ ಇಟ್ಟ ಇವರ ಕ್ರಮ ಮೆಚ್ಚುವಂತದು. ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಿ ಉದಾರತೆ ಮೆರೆದಿದ್ದಾರೆ. ಅದೇ ರೀತಿ ಸರ್ಕಾರಿ ಶಾಲೆಯಲ್ಲಿ ಒಂದನೇಯ ತರಗತಿಯಿಂದ 12 ನೇಯ ತರಗತಿ ವರೆಗೂ ಕಡ್ಡಾಯ ಮತ್ತು ಉಚಿತ ಶಿಕ್ಷಣ ಯೋಜನೆ ಜಾರಿಗೆ ತಂದು ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಲಿ. ಆರೋಗ್ಯವೇ ಭಾಗ್ಯ ಯೋಜನೆ ಅಡಿಯಲ್ಲಿ ಬಡ, ಮಧ್ಯಮ ವರ್ಗದ ಜನರು ಉಚಿತವಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತೆ ಯೋಜನೆ ಜಾರಿಗೆ ತರಲಿ. 

promotions

ಕುಡಿಯುವ ನೀರು, ಸರಿಯಾದ ರಸ್ತೆ, ಕೈಗೆಟುವ ದರದಲ್ಲಿ ಔಷಧಿಯ ಮಳಿಗೆಗಳುಮುಂತಾದವುಗಳ ಕುರಿತು ಯೋಜನೆ ಹಾಕಿಕೊಂಡಾಗ ಮಾತ್ರ ರಾಜ್ಯ ಸರಿದಾರಿ ಕಾಣುವದು. ಯುವನಿಧಿಯ ಬದಲಾಗಿ ಉದ್ಯೋಗ ಸೃಷ್ಟಿಗೆ ಆದ್ಯತೆ ಮೊದಲಾಗಬೇಕು. ಹಣಕಾಸುಸಚಿವರು ತಾವೇ ಇರುವಾಗ ರೈತಾಪಿ ವರ್ಗದ ಜನರ ಅನೂಕೂಲಕ್ಕಾಗಿ ಏತ ನೀರಾವರಿ ಯೋಜನೆಗಳ ಮೂಲಕ ಸಹಕಾರಿಯಾಗವುದರ ಜೊತೆಗೆ ಸೂಕ್ತ ಬೆಂಬಲ ಬೆಲೆ ಘೋಷಣೆಯಾಗಬೇಕು. 

ಪ್ರತಿಯೊಂದು ಉದ್ಯೋಗಕ್ಕೆ ತರಬೇತಿ ಶಿಬಿರಗಳು ಇರುವಂತೆ ರೈತ ತಾನು ಬೆಳೆಯುವ ಬೆಳೆಗಳಿಗೆ ಕೃಷಿ ವಿಶ್ವವಿದ್ಯಾಲಯಗಳ ಮೂಲಕ ತರಬೇತಿ ಶಿಬಿರಗಳನ್ನು ಆಯೋಜನೆ ಮಾಡಿ, ಕಾಲಕ್ಕನೂಸಾರ ಬೆಳೆಯುವ ಬೆಳೆಗಳಿಗೆ ಲಾಭ ವೃದ್ದಿಸುವ ಯೋಜನೆಗಳಿಗೆ ಮಹತ್ವ ನೀಡಬೇಕು. 

ಸಾಕಷ್ಟು ಯೋಜನೆಗಳ ಅನುಷ್ಠಾನ ಬಾಕಿ ಇರುವಾಗ ಕಾಲಹರಣ ಮಾಡದೇ ಮಾದರಿ ಸಿಎಂ ಆಗಿ, ಲೋಕ ಕಲ್ಯಾಣ ಮಾಡಲೆಂದು ಸಾರ್ವಜನಿಕ ವಲಯದಲ್ಲಿ ಮೂಡುತ್ತಿರುವ ವಿಷಯವಾಗಿದೆ. 

ಪ್ರತಿಯೊಂದು ಹಂತದ ಜನರ ಯೋಚನೆ, ಆಲೋಚನೆ ವಿಷಯ ವಸ್ತುಗಳನ್ನು ಪರಿಗಣನೆಗೆ ತೆಗೆದುಕೊಂಡು ಯೋಜನೆಗಳನ್ನು ರೂಪಿಸಿ ಮಾದರಿ ರಾಜ್ಯ ಮಾಡುವತ್ತ ಗಮನ ಕೊಡಲಿ ಎಂದು ರಾಜ್ಯದ ಜನರ ಆಶಯ. 

ವರದಿಗಾರ : ರವಿಕಿರಣ್ ಯಾತಗೇರಿ 

Read More Articles