ದುರಂಧರ ಮಳೆಗೆ ಬೆಚ್ಚಿದ ಬೈಲಹೊಂಗಲ! ನೀರಿನ ಹೊರಹರಿವಿಗಾಗಿ ಪ್ರಾಣ ಒತ್ತೆ ಇಟ್ಟ ಯುವಕ

ಬೈಲಹೊಂಗಲ : ಇಂದು ಸಂಜೆ ಸುರಿದ ಬಾರಿ ಮಳೆಗೆ ಬೈಲಹೊಂಗಲ ನಗರ ಸಂಪೂರ್ಣವಾಗಿ ಸ್ಥಬ್ಧವಾಗಿದ್ದು ಎಲ್ಲಿ ನೋಡಿದರಲ್ಲಿ ನೀರು. 

promotions

ಸಂಜೆ ಸರಿಸುಮಾರು 3.30 ಕ್ಕೆ ಶುರುವಾದ ಮಳೆ ನಗರದ ಹಲವೆಡೆ ಆಘಾತವನ್ನು ಸೃಷ್ಟಿ ಮಾಡಿರುವದಂತೂ ಸತ್ಯ. 

promotions

ಮಳೆಯ ಆರ್ಭಟ ನೋಡಿದರೆ, ಜಿಲ್ಲೆಯ ಎಲ್ಲ ಮಳೆ ನಮ್ಮೂರಿಗೆ ಬಂದಂತೆ ಭಾಸವಾಗುತ್ತದೆ. ನಗರಸಭೆಯ ಕೂಗಳತೆಯ ಸಮೀಪವಿರುವ ಇಂಚಲ್ ಕ್ರಾಸ್ ಬಳಿ ಮಳೆಯ ಆವಾಂತರಕ್ಕೆ ಉಕ್ಕಿ ಹರಿಯುತ್ತಿರುವ ಗಟಾರಿನಲ್ಲಿ ವಾಹನಗಳು, ಮೀನಿನಂತೆ ತೇಲಿಕೊಂಡು ಹೋಗುವ ಸ್ಥಿತಿ, ಅಲ್ಲದೆ ಪಟ್ಟಣದ ಪ್ರತಿಯೊಂದು ಏರಿಯಾದಲ್ಲೂ ಎಲ್ಲಿ ನೋಡಿದರಲ್ಲಿ ಮಳೆಯ ನೀರು, 

ಇಂತಹ ಮಳೆಯನ್ನೇ ಕಾಣದಿರುವ GeN Z ಯುವಕರ ಮುಖದಲ್ಲಿ ಮಂದಹಾಸ ಮೂಡಿದ್ದು, ಆದರೆ ನಗರದ ರೈತಾಪಿ ವರ್ಗದ ಜನ ವಾಸಿಸುವ ಕುಲಕರ್ಣಿ ಗಲ್ಲಿ, ಪಾಟೀಲ ಗಲ್ಲಿ ಮತ್ತಿತರ ಕಡೆಗೆ ಮಳೆಯ ನೀರು ಹೋರಹೋಗದೆ ಮನೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಧಾನ್ಯ ನಾಶ ಪಡಿಸಿದೆ.  

ಸಂಜೆ ಸುರಿದ ಮಳೆಯ ಪ್ರತಿಫಲವಾಗಿ ರೈತ ತಾನೂ ಕಷ್ಟಪಟ್ಟು ಜಮೀನುದಲ್ಲಿ ಬೆಳೆದ ಬೆಳೆ, ಕಣ್ಣಮುಂದೆನೆ ನಾಶವಾಗುತ್ತಿರುವದನ್ನು ಗಮನಿಸಿದ ಯುವಕನೋರ್ವ ಮಳೆ, ನೀರಿನ ರಭಸ ಲೆಕ್ಕಿಸದೆ ಕುಲಕರ್ಣಿ ಗಲ್ಲಿಯ ವಿದ್ಯುತ ಕಂಬಕ್ಕೆ ಒರಗಿ, ದುರಂಧರ ಮಳೆಯನ್ನು ಲೆಕ್ಕಿಸದೆ ಪ್ರತಿಭಟನೆ ನಡೆಸುತ್ತಿದ್ದ ಸನ್ನಿವೇಶ ಮನಕುಲಕುವಂತಿತ್ತು. 

ಮೇಲೆ ಸುರಿಯುತ್ತಿರುವ ಧಾರಾಕಾರ ಮಳೆ, ಬೆನ್ನ ಹಿಂದೆ ವಿದ್ಯುತ ಕಂಬ ಎರಡನ್ನು ಲೆಕ್ಕಿಸದೆ ಪ್ರತಿಭಟನೆ ನಡೆಸುತ್ತಿರುವ ಯುವಕನ ಧೈರ್ಯ ಮೆಚ್ಚುವಂತದ್ದು ಆದರೂ ಕೂಡಾ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸ ಬೇಕಾಗಿರುವದು ತಾಲೂಕಾ ಆಡಳಿತದ ಜವಾಬ್ದಾರಿ. 

ಆದಷ್ಟು ಬೇಗನೆ ಮಳೆ ನೀರು ಹೊರ ಹೋಗಲು ಅವಶ್ಯವಿರುವ ಮಾರ್ಗ, ಉಪಾಯ ಹುಡುಕಿ ಸಾರ್ವಜನಿಕ ಜೀವನಕ್ಕೆ ತೊಂದರೆಯಾಗದಂತೆ ಕ್ರಮ ಕೈಕೊಳ್ಳಲು ನಗರದ ಜನತೆಯ ಆಶಯ.

ವರದಿಗಾರ : ರವಿಕಿರಣ್ ಯಾತಗೇರಿ 

Read More Articles