ನಾಳೆ ಆನಿಗೋಳದಲ್ಲಿ ಯೋಗ ದಿನಾಚರಣೆ

ಬೈಲಹೊಂಗಲ :  ಸಮೀಪದ ಆನಿಗೋಳ ಗ್ರಾಮದಲ್ಲಿ ಯೋಗ ದಿನಾಚರಣೆ ನಿಮಿತ್ಯವಾಗಿ ಮಾ ಭಾರತಿ ಸೇವಾ ಫೌಂಡೇಶನ್ (ರಿ) ವತಿಯಿಂದ ಯೋಗ ದಿನಾಚರಣೆಯನ್ನು ಬೆಳಗ್ಗೆ 6.30 ಕ್ಕೆ ಸರ್ಕಾರಿ ಹಿರಿಯ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಸುನೀಲ ಮರಕುಂಬಿ ಹೇಳಿದರು. 

promotions

ಭಾರತೀಯ ಸನಾತನ ಸಂಸ್ಕೃತಿಯ ಪ್ರತೀಕವಾದ ಯೋಗವನ್ನು ಜಗತ್ತಿನ ತುಂಬಾ ಪರಿಚಯಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರು, ಮನುಷ್ಯನಿಗೆ ಆಸ್ತಿ, ಅಂತಸ್ತು ಸಂಪತ್ತು ಎಷ್ಟು ಮುಖ್ಯವೋ ಅದೇರೀತಿ ಆರೋಗ್ಯವೂ ಕೂಡಾ ಅತಿ ಮುಖ್ಯವಾದದ್ದು ಎಂದರು. 

promotions

ನಿತ್ಯ ಯೋಗ ಮಾಡಿದರೆ ಖಾಯಿಲೆ ಮುಕ್ತವಾಗಿ ದೇಹವನ್ನು ಕಾಪಾಡಿಕೊಳ್ಳಬಹುದು ಎಂದರಲ್ಲದೆ ಯೋಗ ದಿನಾಚರಣೆಗೆ ಸರಿಯಾದ ಸಮಯಕ್ಕೆ ಗ್ರಾಮಸ್ಥರು, ಆಸಕ್ತರು ಆಗಮಿಸಿ ಯಶಸ್ವಿಗೊಳಿಸುವಂತೆ ಕೋರಿದರು.

ವರದಿಗಾರ : ರವಿಕಿರಣ್ ಯಾತಗೇರಿ 

Read More Articles