
ಅನ್ನದಾತರು, ಸರ್ಕಾರದ ನಡುವೆ ನಡೆದಿರುವ ಜಟ್ಟಿ ಕಾಳಗದಲ್ಲಿ ಗೆಲ್ಲುವರು ಯಾರು?
ಬೈಲಹೊಂಗಲ- ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ರೈತರ ಪ್ರತಿಭಟನೆ, ರಾಜ್ಯವ್ಯಾಪಿ ಆವರಿಸಿದ್ದು, ದೇಶವೇ ರಾಜ್ಯದತ್ತ ಗಮನ ಹರಿಸುವ ಸ್ಥಿತಿ ನಿರ್ಮಾಣವಾಗಿದೆ. ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅನ್ನದಾತರು ನಡೆಸುತ್ತಿರುವ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಪ್ರತಿಯೊಂದು ಗ್ರಾಮ, ಶಹರಗಳಿಂದ ಜನರು ಆಗಮಿಸಿ ಬೆಂಬಲ ಸೂಚಿಸುತ್ತಿದ್ದಾರೆ.

ಸರ್ಕಾರಗಳು ಅವರ ದ್ವನಿಗೆ ಸ್ಪಂದಿಸಿ, ಅವರ ಬೇಡಿಕೆಗಳ ಈಡೇರಿಕೆಗಾಗಿ ಶ್ರಮಿಸಬೇಕು. ತಜ್ಞರ ತಂಡ ರಚಿಸುವ ಮೂಲಕ ರೈತರ ಬೇಡಿಕೆಗಳ ಬಗ್ಗೆ ಪರಿಶೀಲನೆಗೆ ಮುಂದಾಗಿ ಅವರಿಗೆ ಆಗುತ್ತಿರುವ ತೊಂದರೆಗಳು, ಅವರ ಬೇಡಿಕೆಗೆ ಅನುಸಾರವಾಗಿ ಬೆಂಬಲ ಬೆಲೆ ಘೋಷಣೆ ಮಾಡಲು ಸಕಲ ವ್ಯವಸ್ಥೆಗೆ ಮುಂದಾದಾಗ ಮಾತ್ರ ಮನೆ, ಮಠ ಮರೆತು ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ಇವರಿಗೆ ನ್ಯಾಯ ದೊರಕಿಸಿ ಕೊಟ್ಟಂತಾಗುತ್ತದೆ.

ಸರ್ಕಾರ ನಡೆಸುವ ವ್ಯಕ್ತಿಗಳು ಇಂತಹ ಬೇಡಿಕೆಗಳಿಗೆ ಮೊದಲ ಆದ್ಯತೆ ನೀಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವತ್ತ ಗಮನ ಹರಿಸಬೇಕು. ಇಲ್ಲವಾದಲ್ಲಿ ಹೋರಾಟ ಉಗ್ರ ರೂಪ ತಾಳಿದರೆ ಸಾರ್ವಜನಿಕ ವಲಯದಲ್ಲೂ ಅಪಸ್ವರ ಮೂಡುವ ಅನಿವಾರ್ಯತೆ ಸರ್ವೆ ಸಾಮಾನ್ಯ ಆಗುತ್ತದೆ. ಆದಷ್ಟು ಬೇಗ ಸರ್ಕಾರಗಳು ಹೋರಾಟಗಾರರ ಬೇಡಿಕೆಗೆ ತಕ್ಕ ಭರವಸೆ ನೀಡಿ ಅವುಗಳ ಈಡೇರಿಕೆಗಾಗಿ ಶ್ರಮಿಸಬೇಕಾಗಿದೆ.
ವರದಿಗಾರ : ರವಿಕಿರಣ ಯಾತಗೇರಿ










