ಸ್ಮಶಾನವೇ ಘಮ, ಘಮಿಸುತ್ತಿದೆ ಶವಗಳಿಗೆ ಇಟ್ಟ ಹೂವುಗಳಿಂದ, ಊರೇ ನಾರುತ್ತಿದೆ ಕೊಳಕು ಮನಸುಗಳಿಂದ

ಬೈಲಹೊಂಗಲ- ಹುಟ್ಟು,ಸಾವಿನ ಮದ್ಯ ಇರುವ ಈ ಬದುಕು, ಹೂವಿನ ಪರಿಮಳ ಪರರಿಗೆ ಪಸರಿಸುವಂತೆ ಇರಬೇಕೆ ಹೊರತು ಕೊಳಕು ಮನಸಿನ ವ್ಯಕ್ತಿಯ ತರಹ ಸದಾ ಕಲಹ, ಕಲ್ಮಶ ಭಾವನೆಗಳ ಜೊತೆಗೆ ಜೀವನದ ಪಯಣ ಮುಗಿಸುವಂತೆ ಇರಬಾರದು. 

promotions

ತಲೆಬರಹದ ಹಿನ್ನಲೆಯನ್ನು ಬೆನ್ನಟ್ಟಿ ಹೋದಾಗ ಕಾಣಸಿಗುವದು ಮಾತ್ರ ಕೊಳೆತ ಊರಿನ ದುರ್ವಾಸನೆ. ಬದಲಾವಣೆಯ ಬದುಕು ಪ್ರತಿಯೊಬ್ಬರದು ಆಗಬೇಕು, ಆಲೋಚನೆ, ವಿಚಾರ ವಿನಿಮಯ, ಸಂಭಾಷಣೆ ಮುಖ್ಯವಾಗಿರುವ ಈಗಿನ ಸನ್ನಿವೇಶದಲ್ಲಿ ಆಗದೇ ಇರುವ ಮಾತುಗಳು ನಿಷ್ಪ್ರಯೋಜಕ. 

promotions

ಸದಾ ತನ್ನ ತನವನ್ನು ಕೊಂಡಾಡಿಕೊಳ್ಳುವ ಮಾನವ ಕೊನೆಗೆ ಹೋಗುವದು ಹೂವುಗಳ ಸುವಾಸನೆಯ ಬಳಿಯಲ್ಲಿ. ಇದ್ದಷ್ಟು ದಿನ ಪರರಿಗೆ ತನ್ನ ವಿದ್ಯೆ, ಬುದ್ದಿ ದಾನ ಮಾಡಿದಾಗ ಮಾತ್ರ ಊರು ನಾರುವದು ಬಿಡುವದು. 

ಸಕಲರಿಗೆ ಲೇಸನ್ನು ಬಯಸುವ ವ್ಯಕ್ತಿಯ ಬಳಿ ಚಿಂತನೆಗೆ ಜಾಗ ಇರುತ್ತದೆ. ಕೊಳಕು ಮನಸು ಕೇವಲ ಕ್ಷಣಿಕ ಮಾತ್ರ. ಇದನ್ನು ಅರಿತರು ಕೂಡಾ ತನ್ನತನಕ್ಕೆ ಹೆಮ್ಮೆ ಪಡುವ ಮನುಷ್ಯರ ನಡುವೆ ಬಾಳಿ ಬದುಕುವ ಸಂಕಷ್ಟ ಇಂದಿನ ಜಾಯಮಾನದಲ್ಲಿದೆ. 

ಆದಷ್ಟು ಪರರ ಚಿಂತೆಗೆ ಸ್ವಲ್ಪ ಅವಕಾಶ ಕೊಟ್ಟು, ತಮ್ಮ ತನವನ್ನು ಬದಿಗೆ ಇರಿಸಿದಾಗ ಮಾತ್ರ ಕೊಳಕು ಮನಸಿನಿಂದ ಹೊರಬರಲು ಸಾಧ್ಯ‌ 

ತಲೆ ಬರಹವೇ ಹೇಳಿದಂತೆ ಸತ್ತಾಗ ಸ್ಮಶಾನ ಹೂವುಗಳಿಂದ ಘಮ, ಘಮಿಸುವ ಬದಲು ಇದ್ದಾಗ ಘಮ,ಘಮಿಸದರೆ ಜೀವನ ಒಂದು ಸಾರ್ಥಕತೆಗೆ ಮುನ್ನುಡಿಯಾಗುತ್ತದೆ.

ವರದಿ : ರವಿಕಿರಣ್ ಯಾತಗೇರಿ 

Read More Articles