ಇಲ್ಲಗಳ ನಡುವೆ ಭರವಸೆಯೇ ಬದುಕು

ಬೈಲಹೊಂಗಲ : ಪ್ರಕೃತಿ ನಿಯಮದಂತೆ ಎಲ್ಲರಿಗೂ ಎಲ್ಲವೂ ಬೇಕು, ಆದರೆ ಇಲ್ಲಗಳ ನಡುವೆ ಭರವಸೆ ಒಂದಿದ್ದರೆ ಸಾಕು ಬದುಕು ಸಾಗುವದು. 

promotions

ಉತ್ತರ ಕರ್ನಾಟಕದ ಭಾಗದಾಗ ಒಂದ ಗಾದಿ ಮಾತ ಐತಿ, ಹಲ್ಲ ಇಲ್ದಾಗ ಕಡ್ಲಿ ಐತಿ. ಕಡ್ಲಿ ಇದ್ದಾಗ ಹಲ್ಲ ಇಲ್ಲಂತ ಹಂಗ ಆಗೇತಿ ಈಗೀನ ಜೀವನ.

promotions

ಎಲ್ಲಾ ಇದ್ದು ಜೀವನ ನಡೆಸಾಕ ಕಷ್ಟ ಪಡತಿರತಾರ ಹಂತಾದ್ರಾಗ ಏನೂ ಇಲ್ದವ ಕೂಡಾ ಜೀವನ ನಡೇಸೂದು ನಾವೆಲ್ಲ ನೋಡತೇವಿ.

ಜೀವನ ಸಾಗೂವದು ಕಲಿಸುವ ಪಾಠಗಳ ಮೇಲೆ ಅವಲಂಭಿತ ಇರತದ, ಹೊರತು ಪರರ ಕಲಿಕೆಯ ಮಾತುಗಳ ಮೇಲೆ ಅವಲಂಭಿತ ಇರುವದಿಲ್ಲಾ. ಕಲಿತು ನಡೆದಾವ ಮಾತ್ರ ಸರಿಯಾಗಿ ಇರತಾನ ಇಲ್ಲಂದ್ರ ಆತನ ಬದುಕಿನ್ಯಾಗ ಭರವಸೆ ಒಂದ ದಾರಿಯಾಗಿ ಉಳಿತದ. .

ಕಷ್ಟದ ಹಾದಿ ಸವೆಸಿ ಮುಂದ ಬರಬೇಕ ಅನಕೊಂಡಾವಗ ನೂರಾ ಎಂಟ ತಾಪತ್ರಯ ಬರತಾವ. ಏನೂ ಮಾಡದಿದ್ದಾವ ಅರಾಮಾಗಿ ಜೀವನಾ ನಡಸತಿರತಾನ. ಸ್ವಂತ ಜ್ಞಾನ ಬಳಸಿ ನಡೆದಾವ ಎಂದೆಂದಿಗೂ ಸುಖವಾಗಿ ಇರತಾನ. ಪರರ ಮಾತ ಕೇಳಿ ನಡೆಯುವವ ಎಷ್ಟು ದೂರ ನಡಿತಾನ ಒಮ್ಮೆರೆ ಎಡವಬೇಕ. 

ಅದಕ ಏನೂ ಇಲ್ದವನ ಹತ್ತಿರ ಗೆದ್ದ ಗೆಲ್ಲತೇನ ಅನ್ನೂವ ಹಟ ಮಾತ್ರ ಜೀವಂತ ಉಳದಿರತದ ಅದುವೆ ಇಲ್ಲಗಳ ನಡುವೆ ಭರವಸೆಯೇ ಬದುಕು.

ವರದಿಗಾರ : ರವಿಕಿರಣ್ ಯಾತಗೇರಿ 

Read More Articles