
ಸ್ವಾರ್ಥಿಗಳ ಮದ್ಯದ ಜೀವನ ಇದ್ದರೂ ಸತ್ತಂಗೆ
- Shivaraj
- 24 Dec 2025 , 11:45 PM
- Bailhongal
- 130
ಬೈಲಹೊಂಗಲ : ತನಗಾಗಿ ಬದುಕದ ಜೀವ ಸ್ವಾರ್ಥಕ್ಕಾಗಿ ಬದುಕಿತು ಎನ್ನುವಂತೆ ಇಂದಿನ ಜಾಗತೀಕರಣದಲ್ಲಿ ಒಬ್ಬರು ಮತ್ತೊಬ್ಬರ ಮೇಲೆ ಸವಾರಿ ನಡೆಸಿ ಬದುಕು ನಡೆಸುತ್ತಿರುವದು ಅತ್ಯಂತ ಘೋರ ಸಂಗತಿ.

ಬ್ರಿಟಿಷರ ಕಾಲದಿಂದ ನಡೆದುಕೊಂಡು ಬಂದ ಹಾದಿಯನ್ನು ಮರೆಯುವದು ವಿರಳ ಎಂದು ಸ್ವಾರ್ಥ ಜೀವಿಗಳು ಭಾವಿಸಿದಂತೆ ಕಾಣುತ್ತಿದೆ.

ಪ್ರತಿಯೊಂದು ಹಂತದಲ್ಲಿಯೂ ಸ್ವಾರ್ಥ ತುಂಬಿರುವ ಇಂದಿನ ಜನರ ಮದ್ಯೆ ಬದುಕುವದು ಕಷ್ಟ ಸಾಧ್ಯ ಅನಿಸುವಂತೆ ಜೀವನ ಸಾಗುತ್ತಿದೆ.
ತನಗಾಗದ ಸಾಧನೆ ಮತ್ತೊಬ್ಬರು ಮಾಡಬಾರದು ಎನ್ನುವ ಮನಸ್ಥಿತಿಗೆ ಬಂದು ತಲುಪಿದಂತಹ ಮಾನವನ ಜೀವನ, ಆತನ ತಾನು ಸೇರುವದು ಎಲ್ಲಿ ಅಂತ ಗೊತ್ತಿರದೆ ನಡೆಸುತ್ತಿರುವ ಕೃತ್ಯಗಳು ಈ ಸ್ವಾರ್ಥ ಜೀವನಕ್ಕೆ ಸಾಕ್ಷಿ ಎಂಬಂತೆ ಗೋಚರವಾಗುತ್ತಿವೆ.
ಪರೋಪಕಾರವೇ ನಮ್ಮ ಮೂಲ ಧ್ಯೇಯ ಅಂತ ವರ್ಥಿಸುವ ಜನಗಳ ಮದ್ಯೆ ವಿಷಕಾರಿ ಸ್ವಾರ್ಥ ಭಾವನೆ ತುಂಬಿ ತುಳುಕುತ್ತಿರುವದು, ಪ್ರತಿಯೊಬ್ಬ ಸ್ವಾರ್ಥಿ ಮನಸ್ಸಿನ ಮನುಷ್ಯನನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸುತ್ತಿದೆ ಎಂಬ ಅರಿವಿಲ್ಲದೆ ಪರರ ಕೇಡು ಬಯಸುತ್ತಿರುವ ಎಲ್ಲರೂ ಅವಸಾನದ ಅಂಚಿನಲ್ಲಿ ಬಂದು ನಿಲ್ಲುತ್ತಿದ್ದೇವೆ ಎನ್ನುವದನ್ನು ಮರೆತಂತಿದೆ.
ಉತ್ತರ ಕರ್ನಾಟಕದ ಜವಾರಿ ಮಾತಿನಂತೆ, ಚಲೋದ ಮಾಡಾಕ ಆಗಲಿಲ್ಲ ಅಂದ್ರೂ ಯಾರಿಗೂ ಕೆಟ್ಟದ್ದು ಮಾಡಬಾರದು ಅಂತ ಇರುವ ಮಾತಿಗೆ ಕಟಿಬದ್ದರಾಗಿ ನಡೆದುಕೊಂಡಾಗ ಮಾತ್ರ ತಮ್ಮ ಜೀವನ ಪಾವಿತ್ರತೆ ಕಾಪಾಡಿಕೊಳ್ಳುತ್ತದೆ.
ತಿಳಿದು ನಡೆದವನು ಮನುಜ.
ವರದಿಗಾರ : ರವಿಕಿರಣ್ ಯಾತಗೇರಿ










