
ಸ್ನೇಹ ಸಂಬಂಧಗಳಿಗೆ ಮೌಲ್ಯ, ಬೈಲಹೊಂಗಲ ಕಿರಾಚ ಸಂಸ್ಥೆಯ ವಿದ್ಯಾರ್ಥಿಗಳು ಮಾದರಿ
- Shivaraj
- 6 Jan 2026 , 10:58 PM
- Bailhongal
- 131
ಬೈಲಹೊಂಗಲ : ಸ್ನೇಹ ಎಂಬುವದು ಸಿಗಲಾರದ ಬಂಧ- ಅನುಬಂಧ, ಕಳೆದ 20 ವರ್ಷಗಳಿಂದ ಈ ಸಂಬಂಧವನ್ನು ಕಾಪಾಡಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ ಬೈಲಹೊಂಗಲ ಕಿತ್ತೂರು ರಾಣಿ ಚೆನ್ನಮ್ಮ ಶಿಕ್ಷಣ ಸಂಸ್ಥೆಯ ಸನ್ 2004-05 ನೇ ಸಾಲಿನ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿಗಳು ಪದವಿ ಪೂರ್ಣ ಗೊಳಿಸಿ 20 ವರ್ಷಗಳು ಕಳೆದರು ಕೂಡಾ ಆ ಸಾಲಿನ ವಿದ್ಯಾರ್ಥಿಗಳು ಪ್ರತಿವರ್ಷ ಡಿಸೆಂಬರ್ ಅಥವಾ ಜನವರಿಯಲ್ಲಿ ಎಲ್ಲರೂ ಒಟ್ಟಾಗಿ ಕೂಡಿ ತಮ್ಮ ಕಾಲೇಜು ದಿನಗಳ ಮೆಲಕು ಹಾಕುವದು ಮಾತ್ರ ಮರೆತಿಲ್ಲ.

ಇಂದಿನ ಆಧುನಿಕ ಯುಗದ ಸ್ಪರ್ಧಾತ್ಮಕ ಬದುಕಿನಲ್ಲಿ ಜೀವಿಸುತ್ತಿದ್ದರೂ ಕೂಡಾ ತಮ್ಮದೆ ಕೆಲಸ ಕಾರ್ಯಗಳಲ್ಲಿ ಒತ್ತಡದ ಜೀವನವನ್ನು ಸಾಗಿಸುತ್ತಿರುವ ಜನರನ್ನು ನಾವು ನೋಡಿದ್ದೇವೆ ಹಾಗೂ ನೋಡುತ್ತಿದ್ದೇವೆ. ಆದರೆ ಇವರ ಸ್ನೇಹ ಸಂಬಂಧ ಬಲು ಅಪರೂಪ ಇವರು ವರ್ಷಕ್ಕೆ ಒಂದು ಸಾರಿ ಒಂದೇಡೆ ಸೇರಿ ಸ್ನೇಹ ಸಂಬಂಧದ ಮೌಲ್ಯಗಳನ್ನು ಇತರರಿಗೆ ಮಾದರಿಯಾಗುವಂತೆ ನಡೆದುಕೊಳ್ಳುತ್ತಿದ್ದಾರೆ.

ದೇಶದ ಬೇರೆ ರಾಜ್ಯಗಳಲ್ಲಿ, ಹೊರದೇಶಗಳಲ್ಲಿ ಕೂಡಾ ಇರುವ ಈ ಸ್ನೇಹತರ ಬಂಧನಕ್ಕೆ ಯಾವುದೇ ತೊಡಕು ಇಲ್ಲ. ಕಾಲೇಜು ದಿನಗಳಲ್ಲಿ ತಾವು ಆಡಿದ ಮಾತುಗಳು, ಪಾಠಗಳು ಇಂದಿಗೂ ನೆನಪಿಟ್ಟುಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಇಂತಹ ಸ್ನೇಹ ಸಂಬಂಧಗಳು ಅಮರವಾಗಿ ಉಳಿಯಲಿ....
ವರದಿಗಾರ : ರವಿಕಿರಣ್ ಯಾತಗೇರಿ










