ಜಪಾನದ ಟೋಕಿಯೋದಲ್ಲಿ ಕನ್ನಡದ ಕಲರವ

ಬೈಲಹೊಂಗಲ:  ದೂರದ ಜಪಾನಿನಲ್ಲಿ ಕರ್ನಾಟಕದ ಮಹಿಳೆಯರು ಸೇರಿಕೊಂಡು ಬರುವ ಮಾರ್ಚ ತಿಂಗಳಿನಲ್ಲಿ ನಡೆಯುವ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿಶಿಷ್ಟವಾದ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಿದ್ದಾರೆ. 

promotions

ಇದೇ ಮೊದಲ ಬಾರಿಗೆ ಅತೀ ಉತ್ಸಾಹ, ವಿಜೃಂಭನೆಯಿಂದ ಕನ್ನಡ ಬಳಗದ ಸ್ನೇಹಿತೆರೆಲ್ಲ ಕೂಡಿಕೊಂಡು, ವಿಶೇಷವಾಗಿ ಆಚರಿಸಲು ಮುಂದಾಗಿದ್ದಾರೆ. ಪರದೇಶದಲ್ಲಿ ಕನ್ನಡದ ಕಂಪನು ಸೂಸುವ ಕೆಲಸದಲ್ಲಿ ಮಗ್ನ ಆಗಿರುವ ಇವರಿಗೆ ಕನ್ನಡ ನಾಡಿನಿಂದ ಶುಭ ಹಾರೈಕೆಗಳು. 

promotions

ತಮ್ಮ ಯಶಸ್ಸಿನ ಪಯಣ ಸದಾ ಹೀಗೆ ಇರಲಿ.

ಸದರಿ ಆಯೋಜಿತ ಕಾರ್ಯಕ್ರಮದಲ್ಲಿ ಕೆಲವೊಂದು ವಿಶೇಷವಾದ ವಿಚಾರಗಳ ಪ್ರಸ್ತಾವನೆ ಇರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ವನಿತೆ ಜೀವ ಕೊಡುವ ದೇವತೆ

*ಪ್ರಪ್ರಪ್ರಥಮ ಬಾರಿಗೆ ಟೋಕಿಯೋ ಕನ್ನಡ ಬಳಗ ವತಿಯಿಂದ ಮಹಿಳಾ ದಿನಾಚರಣೆಯ ಸಮಾರಂಭ* ಆಯೋಜಿಸಲಾಗಿದ್ದು, 

ನಮ್ಮೆಲ್ಲಾ ಕನ್ನಡದ ವನಿತತೆಯರು ಈ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿ.

ದಿನಾಂಕ - 1ನೇಯ ಮಾರ್ಚ್ 2026. 

ಸಮಯ- ಸಂಜೆ 5 ರಿಂದ 9 ಗಂಟೆಯ ವರೆಗೆ. 

 ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳು 

ಸಂತೋಷದ ವಾತಾವರಣದಲ್ಲಿ ಮೋಜಿನ ಚಟುವಟಿಕೆಗಳ ಜೊತೆಗೆ ಆಟೋಟಗಳು, 

 ಪರಸ್ಪರ ಸ್ನೇಹಪರವಾದ ಸಂಪರ್ಕಗಳು

 ಸಂತೋಷದ ಕ್ಷಣಗಳ ಹಂಚಿಕೆ, ನಗು ಮತ್ತು ಒಗ್ಗಟ್ಟು ಸೇರಿದಂತೆ  ವಿಶ್ರಾಂತಿ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 

ಈ ಕಾರ್ಯಕ್ರಮವು ಕನ್ನಡ ನಾಡಿನ ಅದ್ಭುತ ಮಹಿಳೆಯರನ್ನು ಭೇಟಿ ಮಾಡಲು, ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು, ಸ್ನೇಹವನ್ನು ಬೆಳೆಸಲು ಮತ್ತು ಪ್ರೀತಿ ಮತ್ತು ಸಕಾರಾತ್ಮಕ ಭಾವನೆಯನ್ನು ವ್ಯಕ್ತಪಡಿಸಲು ಒಂದು ಸುವರ್ಣಾವಕಾಶ .

 ಆಸಕ್ತಿ ಇದೆಯೇ?

ಹಾಗಿದ್ದರೇ ಕೂಡಲೇ ನೋಂದಾಯಿಸಿ! (ತಮ್ಮದೊಂದು ನೋಂದಣಿಯು ಎಲ್ಲರಲ್ಲಿಯೂ ಖುಷಿಯನ್ನು ಹಂಚಿಕೊಳ್ಳುವ ಜೊತೆಗೆ ಒಂದು ಅದ್ಭುತ ಮತ್ತು ಸುಗಮವಾದ ಕಾರ್ಯಕ್ರಮವನ್ನು ಆಯೋಜಿಸಲು ನಮಗೆ ಸಹಾಯ ಮಾಡುತ್ತದೆ).

 ಮುಖದಲ್ಲಿ ನಗು. ಸಂಪರ್ಕ ಸಾಧನೆ . ಸ್ತ್ರೀಯತ್ವವನ್ನು ಆಚರಿಸಲು ಇದೊಂದು ಅದ್ಭುತ ವೇದಿಕೆ.

ವರದಿಗಾರ : ರವಿಕಿರಣ್ ಯಾತಗೇರಿ 

Read More Articles