
ಖರೀದಿಸಲಾಗದ ಏಕೈಕ ವಸ್ತು ! ನೆಮ್ಮದಿ
- Shivaraj
- 10 Jan 2026 , 11:52 PM
- Bailhongal
- 85
ಬೈಲಹೊಂಗಲ : ಮನುಷ್ಯ ಹುಟ್ಟಿ ಸಾಧನೆ ಮಾಡಿ ಏನೇ ಸಾಧಿಸಿದರೂ ಕೂಡಾ ಬಡವ, ಶ್ರೀಮಂತ ಅಂತಾ ಭೇದ ಮಾಡೂವ ಇಂದಿನ ಯುಗದಲ್ಲಿ, ಇಬ್ಬರೂ ಹುಡುಕುವದು ನೆಮ್ಮದಿ ಮಾತ್ರ.

ಶ್ರೀಮಂತನಿಗೆ ಹೆಚ್ಚಿನ ನೆಮ್ಮದಿ, ಬಡವನಿಗೆ ಕಡಿಮೆ ನೆಮ್ಮದಿ ಅಂತ ಏನು ಇರೂದಿಲ್ಲ. ಅವರವರ ಮಾನಸಿಕ ಸ್ಥಿತಿಯ ಮೇಲೆ ಅದ ಅವಲಂಭಿತ ಆಗಿರತದ.

ಬಡವನಿಗೊಂದು ನೆಮ್ಮದಿ, ಶ್ರೀಮಂತಗ ಒಂದ ನೆಮ್ಮದಿ ಅಂತ ಏನೂ ಇರುವದಿಲ್ಲ. ಕೆಲವೊಂದ ಸಾರಿ ನಾವ ವಿಚಾರ ಮಾಡಿ ನೋಡಿದಾಗ, ಬಡವನಿಗೆ ಹೆಚ್ಚಿನ ಕಷ್ಟ ಬಂದಾಗ ಅವ ಅಂತಾನ ಜೀವನದಾಗ ನೆಮ್ಮದಿ ಅನ್ನೂದ ಸಿಗವಾತ ನೋಡ ಅಂತ.
ಅದೇ ತರಹ ಸಾಕಷ್ಟು ಪ್ರಮಾಣದಲ್ಲಿ ಗಳಿಸಿ ಶ್ರೀಮಂತ ಅಂತ ಅನಿಸಿಕೊಂಡಾವನು ಕೂಡಾ ವಿಚಾರ ಮಾಡತಿರತಾನ, ಇಷ್ಟೆಲ್ಲ ಗಳಿಸಿ ಇಟ್ಟೇನಿ ಎದಕ ಉಪಯೋಗ ನೆಮ್ಮದಿನ ಇಲ್ದಂಗ ಆಗೇತಿ ಅಂತ.
ಈ ಎರಡು ಸನ್ನಿವೇಶಗಳ ನೋಡಿದಾಗ ಎಷ್ಟ ದುಡ್ಡ ಇದ್ರೂ, ಇರಲಾರದ ಇದ್ರೂ ಖರೀದಿಸಲಾಗದ ಏಕೈಕ ವಸ್ತು ಅದು ನೆಮ್ಮದಿ.
ಮತ್ತೊಬ್ರದ ಉಸಾಬರಿ ಮಾಡೂದ್ಲೆ ತಮ್ಮಷ್ಟಕ ತಾವ ಇದ್ರ ಸಾಕ ನೆಮ್ಮದಿ ತಾನ ಸಿಗತದ.
ಇಬ್ಬರ ವ್ಯವಹಾರದಾಗ ಮೂರನೇಯ ವ್ಯಕ್ತಿ ಭಾಗವಹಿಸಿ, ಮುಖ್ಯಸ್ಥನಾಗಿ ವ್ಯವಹಾರ ಬಗೆಹರಿಸುವ ಸಂದರ್ಭದಲ್ಲಿ ಇಬ್ಬರನ್ನೂ ಗಮನದಲ್ಲಿಟ್ಟುಕೊಂಡು ಪಂಚಾಯತಿ ಮಾಡಬೇಕಾದ ವಿವೇಚನೆ ಇರಬೇಕು.
ಪರರಿಗೆ ದ್ರೋಹ, ಅನ್ಯಾಯ ಮಾಡದೆ ನಂಬಿದವರಿಗೆ ಅಭಯ ಹಸ್ತ ಚಾಚಿ ಅವರ ಸುಖ ದುಃಖಗಳಲ್ಲಿ ಭಾಗಿ ಆದಾಗ ಮಾತ್ರ ನೆಮ್ಮದಿಯ ಜೀವನ ನಡೆಸಲು ಸಾಧ್ಯ.
ವರದಿಗಾರ : ರವಿಕಿರಣ್ ಯಾತಗೇರಿ










