ಜ್ಞಾನವಿಕಾಸದ ಸೃಜನಶೀಲ ತರಬೇತಿ ಶಿಬಿರ ಸಮಾರೋಪ

ಧಾರವಾಡ : ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣದ ತೇಗೂರ ವಲಯದ ಕೋಟೂರ ಉಡಚಮ್ಮದೇವಿ ಜ್ಞಾನವಿಕಾಸ ಕೇಂದ್ರ, ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಬಟ್ಟೆಯ ಬ್ಯಾಗ್ ತಯಾರಿ ತರಬೇತಿಯ ಕಾರ್ಯಕ್ರಮದ ಸಮಾರೋಪ ಸಮಾರಂಭ ನೆರವೇರಿತು. 

promotions

 ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಶ ದ್ರಾಕ್ಷಾಯಿಣಿ ಕಳಸಣ್ಣವರ್ ವಹಿಸಿದ್ದರು,

promotions

ಮುಖ್ಯ ಅತಿಥಿಗಳಾಗಿ ಗ್ರಾಪಂ, ಅಧ್ಯಕ್ಷ ಅಧ್ಯಕ್ಷರಾದ ದಿಲಾವರ ನಾಯಕ ಆಗಮಿಸಿ, ಪ್ಲಾಸ್ಟಿಕ್ ಬಳಕೆ, ಮತ್ತು ನಿಷೇಧ ಕುರಿತು ಮಾಹಿತಿ ನೀಡಿದರು. 

 ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಜಾಥಾ ಭಾಗಿಯಾಗಿದ್ದರು. 

ಜ್ಞಾನವಿಕಾಸದ ಸಮನ್ವಯಾಧಿಕಾರಿ ವಿಜಯಲಕ್ಷ್ಮಿ ರಾಯನಾಳ ಪ್ರಾಸ್ತಾವಿಕವಾಗಿ ಮಾತನಾಡಿ, ತರಬೇತಿ ಶಿಬಿರದ ಸದುಪಯೋಗ ಪಡೆದು,ಬಟ್ಟೆ ಬ್ಯಾಗ್ ತಯಾರಿಸುವ ವಿಧಾನವನ್ನು ತಿಳಿಸಿದರು. 

 ಸೇವಾ ಪ್ರತಿನಿಧಿ ಕಾವ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವರದಿಗಾರ : ರವಿಕಿರಣ ಯಾತಗೇರಿ 

Read More Articles