
ಸಂಬಂಧಗಳಿಗೆ ನಿಲುಕದ ಶಬ್ದ ಸ್ನೇಹ ಬಂಧ
- Shivaraj
- 24 Dec 2025 , 12:32 AM
- Bailhongal
- 281
ಬೈಲಹೊಂಗಲ- ಆಟದಲ್ಲಿ ಪಾಠದಲ್ಲಿ ಜೊತೆ ಜೊತೆಯಾಗಿ ಬೆಳೆದು ಊಟದಲ್ಲಿಯೂ ಕೂಡಾ ಹಂಚಿಕೊಂಡು ತಿನ್ನುವ ಪ್ರೀತಿ, ವಿಶ್ವಾಸ ಸ್ನೇಹ ಸಂಬಂಧಗಳಲ್ಲಿ ಮಾತ್ರ ಸಿಗುವ ಅಪರೂಪದ ಅನುಬಂಧ.

ಜೊತೆಯಾಗಿ ಬೆಳೆದು ಕಷ್ಟ ಸುಖದ ದಾರಿಯಲಿ ಸಮನಾಗಿ ನಡೆದು ಸಹದಾರಿ ತೋರಿಸುವ ಮಾರ್ಗದರ್ಶಕ ಸ್ನೇಹಿತನಿರುವಾಗ ಜಗತ್ತಿನಲ್ಲಿ ಬೇರೆ ಒಂದು ಲೋಕದ ಕಡೆಗೆ ಯೋಚನೆ ಮಾಡದೆ ಆತನೆ ಎಲ್ಲಾ ಎಂದು ತಿಳಿಯುವ ಮುಗ್ಧತೆ ಸ್ನೇಹ.

ಸಂಬಂಧಗಳಿಗೆ ಮಿಗಿಲಾದ್ದದ್ದು ಸ್ನೇಹ ಸಂಬಂಧ, ಕೊಂಚ ವ್ಯತ್ಯಾಸವಾದರೂ ಕೂಡಾ ಅರಗಿಸಿಕೊಳ್ಳಲಾರದ ಮನಸ್ಥತಿ. ಚಿಕ್ಕವರಿದ್ದಾಗಿನಿಂದ ದೊಡ್ಡವರಾಗೂವರೆಗೂ ಜೊತೆಯಲ್ಲಿದ್ದು ನಂತರದ ಪರಿಸ್ಥಿತಿಯಲ್ಲಿ ಬೇರೆ ಬೇರೆಯಾಗುವ ಸನ್ನಿವೇಶವಂತೂ ಹೇಳತೀರದು.
ಜೀವನದ ಏಳು ಬೀಳಿನ ಜಂಜಾಟದಲಿ ದಾರಿ ತಪ್ಪಿದರೆ ವಿದ್ಯೆ ಕಲಿಸಿದ ಗುರುವಿನಕ್ಕಿಂತ ಹೆಚ್ಚು ಮುತುವರ್ಜಿ ವಹಿಸಿ ಸಹನೆಯ ಮಾರ್ಗ ತೋರಿಸುವನು ನಿಜವಾದ ಸ್ನೇಹಿತ.
ಕೆಲವೊಂದು ತಪ್ಪು ಗ್ರಹಿಕೆ, ಅಗೋಚರ ಶಕ್ತಿಗಳ ಮಾತಿಗೆ ತುತ್ತಾಗಿ ಸ್ನೇಹ ಸಂಬಂದ ಕಳೆದುಕೊಂಡರೆ ಅದು ಮತ್ತೆ ಪ್ರಾಪ್ತಿಯಾಗುವದು ದುರ್ಲಭ. ಇದ್ದಷ್ಟು ದಿನ ನೆಮ್ಮದಿ ಸುಖ ಸಮೃದ್ದಿ ಕಾಣಲು ಕಳೆದುಕೊಳ್ಳದಿರಿ ಪವಿತ್ರವಾದ ಸ್ನೇಹ ಸಂಬಂಧ.
ಬಡ,ಬಲ್ಲಿದ, ಉಚ್ಚ,ನೀಚ ಜಾತಿ ಬೇಧಭಾವವಿಲ್ಲದ ಪವಿತ್ರ ಬಂಧನ ಈ ಸ್ನೇಹ.. ಕಾಪಾಡಿಕೊಂಡು ಹೋಗುವದು ಅವರ ಇಚ್ಛಾನುಸಾರ ಅವಲಂಬಿತ.
ವರದಿಗಾರ : ರವಿಕಿರಣ್ ಯಾತಗೇರಿ










