ನಾಳೆ ಬೈಲಹೊಂಗಲ ಬಂದ

ಬೈಲಹೊಂಗಲ : ಅಖಂಡ ಬೆಳಗಾವಿ ಜಿಲ್ಲೆಗೆ ಆಗ್ರಹಿಸಿ, ಜಿಲ್ಲೆಯ ದೊಡ್ಡ ಉಪವಿಭಾಗ ಕೇಂದ್ರವಾದ ಬೈಲಹೊಂಗಲ ತಾಲೂಕನ್ನು ಜಿಲ್ಲೆಯಾಗಿ ಘೋಷಣೆ ಮಾಡಲು ಒತ್ತಾಯಿಸಿ, ಬೈಲಹೊಂಗಲ ಬಂದ ಕರೆಯಲಾಗಿದೆ. 

promotions

ನಾಳೆ ಪಟ್ಟಣದ ಶಾಖಾಮೂರುಸಾವಿರಮಠದಲ್ಲಿ ಹೋರಾಟಗಾರರು ಆಗಮಿಸಿ, ಪ್ರಭುನೀಲಕಂಠ ಸ್ವಾಮಿಜಿಯವರ ನೇತೃತ್ವದಲ್ಲಿ ಬೃಹತ ಪ್ರತಿಭಟನಾ ಮೆರವಣಿಗೆಯ ಮೂಲಕ ಜಿಲ್ಲಾ ವಿಭಜನೆಯ ಹಕ್ಕನ್ನು ಮಂಡಿಸಿ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವರು. 

promotions

ಈಗಾಗಲೆ ವಕೀಲರ ಸಂಘ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ ಮಾಡಿ ಬೆಂಬಲ ಸೂಚಿಸಿದ್ದಾರೆ. 

ಒಟ್ಟಾರೆ ಕಳೆದ 30 ವರ್ಷಗಳ ಕಾಲದಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿರುವ ಇಲ್ಲಿನ ಹೋರಾಟಗಾರರ ಒತ್ತಾಯ ಒಂದೇ ಆಗಿದ್ದು, ಅಖಂಡ ಬೆಳಗಾವಿ ಜಿಲ್ಲೆಯ ವಿಭಜನೆ ಬೇಡ, ಆಡಳಿತಾತ್ಮಕ ಹಿತದೃಷ್ಟಿಯಿಂದ ವಿಭಜನೆ ಅನಿವಾರ್ಯವಾದರೆ ಜಿಲ್ಲೆಯ ದೊಡ್ಡ ಉಪವಿಭಾಗವಾದ ಬೈಲಹೊಂಗಲ ತಾಲೂಕನ್ನು ಜಿಲ್ಲೆಯಾಗಿ ಘೋಷಿಸಬೇಕು ಎನ್ನುವದೆ ಇಲ್ಲಿನ‌ ಜನರ ಒತ್ತಾಯ.

Read More Articles