ಬಾಂಗ್ಲಾ ಮಹಿಳೆ ಕೊಲೆ : ಮೂರು ತಂಡಗಳ ರಚನೆ

ಬೆಂಗಳೂರು:ಇತ್ತೀಚೆಗೆ ಬಾಂಗ್ಲಾ ಮೂಲದ ನಜ್ಮಾ ಮಹಿಳೆಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬAಧ ಮೂರು ತಂಡಗಳನ್ನ ರಚಿಸಲಾಗಿದೆ. ಆರೋಪಿಗಳಿಗೆ ಶೋಧ ಕಾರ್ಯ ನಡೆಸಲಾಗಿದೆ ಎಂದು ಕಮೀಷನರ್ ಬಿ.ದಯಾನಂದ್ ಹೇಳಿದರು. 

promotions

ದುಷ್ಕರ್ಮಿಗಳ ಪತ್ತೆಗೆ ಈಗಾಗಲೇ ಪೊಲೀಸರು 3 ತಂಡ ರಚಿಸಿದ್ದು, ಒಂದೊoದು ತಂಡಕ್ಕೂ ಪ್ರತ್ಯೇಕ ಕೆಲಸ ವಹಿಸಲಾಗಿದೆ. ಒಂದು ತಂಡ ಘಟನಾ ಸ್ಥಳದ ಸುತ್ತಮುತ್ತಲ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸುತ್ತಿದೆ. ಮತ್ತೋಂದು ತಂಡ ಮೊಬೈಲ್ ಕರೆಗಳ ವಿವರ (ಸಿಡಿಆರ್) ಸಂಗ್ರಹಿಸಿ ವಿಶ್ಲೇಷಣೆಯಲ್ಲಿ ತೊಡಗಿದೆ. ಮೂರನೇ ತಂಡವು ಹತ್ಯೆಯಾದ ಮಹಿಳೆ ಕುಟುಂಬದ ಸದಸ್ಯರು, ಪರಿಚಿತರು, ಸ್ನೇಹಿತರ, ಸಂಬAಧಿಕರ ಮಾಹಿತಿ ಸಂಗ್ರಹಿಸಿ ವಿಚಾರಣೆ ನಡೆಸುತ್ತಿದೆ. ಒಬ್ಬ ವ್ಯಕ್ತಿಯ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

promotions

ಬಾಂಗ್ಲಾದೇಶ ಮೂಲದ ನಜ್ಮಾ ಮತ್ತು ಸುಮನ್ ದಂಪತಿ ತಮ್ಮ ಮೂವರು ಮಕ್ಕಳೊಂದಿಗೆ ಕೊತ್ತನೂರಿನ ಕೃಷ್ಣಪ್ಪ ಲೇಔಟ್‌ನ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಸುಮನ್ ಬಿಬಿಎಂಪಿ ಕಸದಯಾರ್ಡ್ನಲ್ಲಿ ಕಸ ಬೇರ್ಪಡಿಸುವ ಕೆಲಸ ಮಾಡುತ್ತಾನೆ. ನಜ್ಮಾ ಕಲ್ಕೆರೆಯ ಡಿಎಸ್ ಆರ್ ಅಪಾರ್ಟ್ಮೆಂಟ್‌ನಲ್ಲಿ ಮನೆಗೆಲಸ ಮಾಡುತ್ತಿದ್ದರು. ಗುರುವಾರ ಬೆಳಗ್ಗೆ ಅಪಾರ್ಟ್ಮೆಂಟ್‌ನಲ್ಲಿ ಕೆಲಸ ಬಂದಿದ್ದ ನಜ್ಮಾ ಕೆಲಸ ಮುಗಿಸಿ ಸಂಜೆ ಮನೆ ಕಡೆಗೆ ಹೊರಟಿದ್ದರು. ಆದರೆ, ರಾತ್ರಿ ಮನೆಗೆ ಹೋಗದೆ ನಾಪತ್ತೆಯಾಗಿದ್ದರು. 

ಶುಕ್ರವಾರ ಬೆಳಗ್ಗೆ ಕಲ್ಕೆರೆಯ ಕೆರೆ ದಡದ ನಿರ್ಜನಪ್ರದೇಶದಲ್ಲಿ ನಜ್ಮಾ ಮೃತದೇಹ ಪತ್ತೆಯಾಗಿತ್ತು. ನಜ್ಮಾ ಮೂಲತಃ ಬಾಂಗ್ಲಾದೇಶದವರು 6 ವರ್ಷದಿಂದ ಇಲ್ಲಿ ಕೆಲಸ ಮಾಡಿಕೊಂಡಿದ್ದರು. ಪತಿ ಸುಮನ್ ಪಾಸ್ ಪೋರ್ಟ್ ಮೂಲಕ ಬಾಂಗ್ಲಾದಿAದ ಬೆಂಗಳೂರಿಗೆ ಬಂದಿದ್ದ. ಆದರೆ, ನಜ್ಮಾ ಬಳಿ ಯಾವುದೇ ಪಾಸ್‌ಪೋರ್ಟ್ ಇರಲಿಲ್ಲ. ಅಕ್ರಮವಾಗಿ ಬಂದಿರುವ ಸಾಧ್ಯತೆಗಳಿವೆ.

Read More Articles