ಭಗವಾನ ಶ್ರೀ ವಿರಾಟ ವಿಶ್ವಕರ್ಮನ ಬಗ್ಗೆ ತಿಳಿಯಲೇ ಬೇಕಾದ ಮಾಹಿತಿ
- Prasad Kambar
- 15 Jan 2024 , 2:22 AM
- Belagavi
- 836
ಸನಾತನ ಧರ್ಮದ ಭಕ್ತ ಜನರಿಗೆ ವಿಶ್ವಕರ್ಮ ಜಯಂತಿ ಎಂದು ಸರ್ಕಾರದ ವತಿಯಿಂದ ಆಚರಿಸಲ್ಪಡುತ್ತಿರುವ ವಿಶ್ವಕರ್ಮ ಯಜ್ಞ ಹಾಗೂ ಪೂಜಾ ಮಹೋತ್ಸವ ದಿನಾಚರಣೆಯ ಶುಭಾಶಯಗಳು.
ಶ್ಲೋಕ : ಜಾತಂ ಪಂಚಮುಖಾತ್ಸರ್ವೇo, ಬ್ರಹ್ಮಣೋ ವಿಶ್ವಜನ್ಮನ: |
ವೇದೋ ಭವತಿ ವಿಜ್ಞಾನಂ ವಿಶ್ವಕರ್ಮಾ ಜಗದ್ಗುರು || ೧ | ಪಂಚಾನನೋ ದಶಭುಯೋ ವ್ರತಬಂಧ ದೀಕ್ಷೆ:|ಕೇಯೂರಹಾರ ಮಣಿಕುಂಡಲ ಚಂಡ ತೇಜಾ|| ಭಸ್ಮಾ oಕಿತೋ ಮಣಿಮಯಾಸನ ಸಂಸ್ಥಿತೋ ಸೌ | ಸರ್ವೇಶ್ವರೋ ವಸತು ಮೇ ಹೃದಿ ವಿಶ್ವಕರ್ಮಾ ||
ಈ ಸಮಸ್ತ ಚರಾಚರ ಸೃಷ್ಟಿಕರ್ತನಾಗಿಯೂ ರಕ್ಷಕನಾಗಿಯೂ ಇರುವ ಶ್ರೀ ವಿರಾಟ ವಿಶ್ವಕರ್ಮ ಪರಬ್ರಹ್ಮನ ಪಂಚಮುಖನ ದಿಂದಲೇ ಈ ಸರ್ವವೂ ಅಂದರೆ, ಚರಾಚರ ಪ್ರಾಣಿಗಳ ಉದ್ಭವವಾಗಿರುವುರಿಂದಲೂ, ವೇದಗಳೇ ಪ್ರಮಾಣವಾಗಿರುವುದರಿಂದಲೂ, ಶ್ರೀ ವಿರಾಟ ವಿಶ್ವಕರ್ಮನೇ ಜಗದ್ಗುರು ಆಗಿರುತ್ತಾನೆ. ಐದು ಮುಖಗಳಿಂದಲೂ, ಹತ್ತು ಕರಗಳಿಂದಲೂ ವ್ರತವಂದ ದೀಕ್ಷಿತನಾಗಿಯೂ, ಅನೇಕಾನೇಕ ಆಭರಣಗಳಿಂದಲೂ, ಮಣಿಕುಂಡಲ ಕಿರೀಟಗಳಿಂದಲೂ, ಅಪರಿಮಿತ ತೇಜಸ್ವಿನಿಂದಲೂ, ಭಸ್ಮಾಂಕಿತನಾಗಿಯೂ, ಮಣಿಮಯವಾದ ಆಸನದಲ್ಲಿ ಕುಳಿತವನಾಗಿಯೂ, ಸರ್ವಶ್ವರನಾಗಿಯೂ ಇರುವ ಜಗದ್ಗುರುವೇ ಶ್ರೀ ವಿರಾಟ ವಿಶ್ವಕರ್ಮನೇ, ನನ್ನ ಹೃದಯದಲ್ಲಿ ಸದಾ ವಾಸಮಾಡು.
ಶ್ರೀ ವಿರಾಟ ವಿಶ್ವಕರ್ಮ ವಂಶಸ್ಥರಾದ ಪಂಚಾಳ(ವಿಶ್ವಕರ್ಮ)ಬ್ರಾಹ್ಮಣರು, ಸಮಸ್ತ ಸೃಷ್ಟಿಗೂ ಮೊದಲೇ ಇದ್ದರೆಂಬುದು ಸಿದ್ಧಾಂತ ಇದೆ.
ಶ್ಲೋಕ : ಆಸೀತ್ಪುರಾ ಪರಂಬ್ರಹ್ಮ ಸದೈವ ಹಿ ನಿರಂಜನ | ನಿಜೇಚ್ಛಯಾ ಸತಸ್ತಸ್ಯ ದಧೇ ಪಂಚ ಮುಖಸ್ತದಾ || ತತ್ವಂಚಮುಖ ಸಂಯೋಗಾತ್ಪಾನಗಾದಿ ಮಹರ್ಷಯಃ | ಸಂಜಾತಾ ನಿರಹಂಕಾರಾಃ ಸತ್ವಾದಿಗುಣಸಂಯುತಾಃ || ಮನುರ್ಮಯಸ್ತಥಾ ತ್ವಷ್ಟಾ ಶಿಲ್ಪಿ ವಿಶ್ವಜ್ಞ ಏಕವಚನ ಪಂಚೈತೆ ದೇವ ಋಷಯೋ ಸತ್ಯ ಧರ್ಮ ಪರಾಯಣಾಃ || ೩ ||
ಎಂಬಂತೆ ಸಮಸ್ತ ಸೃಷ್ಟಿಗೂ ಮೊದಲು, ನಿರಂಜನರೂಪನಾದ ಪರಬ್ರಹ್ಮನು ತಾನೊಬ್ಬನೇ ಇದ್ದು, ನಿಜೇಚ್ಛೆಯಿಂದ, ಪಂಚಮುಖಗಳು ಮತ್ತು ದಶಭಜಗಳಿಂದ ಬೃಹತ್ ರೂಪನಾಗಿ ಪ್ರಕಾಶನಾದನು. ಈ ಪಂಚಮುಖಗಳೇ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಮತ್ತು ಈಶಾನ ಎಂಬ ಹೆಸರಿನ ಋಷಿಗಳೆಂದು ಕಲೆಯಲ್ಪಟ್ಟರು. ಈ ಪವಿತ್ರ ನಾಮಗಳಿಂದಲೇ, ಶೋಭಿಸುವ ಮುಖಗಳಿಂದಲೇ, ಸಾನಗ ಮಹರ್ಷಿ, ಸನಾತನ ಮಹರ್ಷಿ, ಪ್ರತ್ನಸ ಮಹರ್ಷಿ, ಅಹಭೂನ ಮಹರ್ಷಿ ಮತ್ತು ಸುಪರ್ಣಸ ಮಹರ್ಷಿಗಳೆಂಬ ಪಂಚ-ಮಹರ್ಷಿಗಳೂ, ಮನು, ಮಯ, ತ್ವಷ್ಟ, ಶಿಲ್ಪಿ ಮತ್ತು ವಿಶ್ವಜ್ಞರೆಂಬ ಬ್ರಹ್ಮಋಷಿಗಳೂ ಅವತರಿಸಿದರು. ಇವರೇ ಕ್ರಮವಾಗಿ ಗೋತ್ರ ಮೂಲರೂ ಸೂತ್ರಮೂಲರೂ ಆದರು. ಇವರಗಳಿಗೆ ವಿಶ್ವಕರ್ಮನ ಪಂಚಮುಖಗಳಿಂದ ಹೇಳಲ್ಪಟ್ಟ ವೇದಗಳೇ ಋಗು, ಯಜು, ಸಾಮ, ಅಥರ್ವಣ, ಪ್ರಣವ. ಪಂಚ ಶಾಖೆಗಳು ಸದ್ಯೋಜಾತ, ವಾಯುಜಾತ, ಅಘೋರ, ತತ್ಪುರುಷ, ಈಶಾನವೆ೦ಬ ಪ್ರವರಗಳು ಆದವೆಂದು, ವೇದೋಪನಿಷತ್ತುಗಳು ಹೇಳುವೆ, ಈ ವಿಶ್ವಕರ್ಮ ಬ್ರಾಹ್ಮಣರ ವಂಶವು ಸೃಷ್ಟಿಯ ಆದಿಯಲ್ಲಿಯೇ ಇತ್ತೆಂದು ನಿಖರವಾಗಿ ಪ್ರಸಿದ್ದಯಾಗಿದೆ.
ಪ್ರತಿ ವರ್ಷ ಹಿಂದೂಗಳು ಕನ್ಯಾ ಸಂಕ್ರಾಂತಿಯಂದು ಭಗವಾನ್ ಶ್ರೀ ವಿರಾಟ ವಿಶ್ವಕರ್ಮನನ್ನು ಪೂಜಿಸುತ್ತಾರೆ.
ಇದು ಸಾಮಾನ್ಯವಾಗಿ ಹಿಂದೂ ಕ್ಯಾಲೆಂಡರ್ ಪ್ರಕಾರ ಭಾದ್ರಪದ ಮಾಸದ ಕೊನೆಯ ದಿನವನ್ನು ಸೂಚಿಸುತ್ತದೆ. ಸೆಪ್ಟೆಂಬರ್ 16 ರಿಂದ 18 ರವರೆಗೆ ಇದೆ. ಈ ವರ್ಷ ಶ್ರೀ ವಿರಾಟ ವಿಶ್ವಕರ್ಮ ಪೂಜೆಯನ್ನು ಸೆಪ್ಟೆಂಬರ್ 17 ರಂದು ಆಚರಿಸಲಾಗುತ್ತಿದೆ. ಶ್ರೀವಿರಾಟ ವಿಶ್ವಕರ್ಮನ ಪೂಜೆಯ ಶುಭ ಮುಹೂರ್ತವು ಸೆಪ್ಟೆಂಬರ್ 17 ರಂದು ಬೆಳಿಗ್ಗೆ 7:36 ರಿಂದ ರಾತ್ರಿ 9:38 ರವರೆಗೆ ಇರುತ್ತದೆ.
ಈ ಹಬ್ಬವನ್ನು ಪ್ರಾಥಮಿಕವಾಗಿ ಕಾರ್ಖಾನೆಗಳು ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಅಂಗಡಿ ಮಹಡಿಯಲ್ಲಿ ಆಚರಿಸಲಾಗುತ್ತದೆ. ಪೂಜೆಯ ದಿನವನ್ನು ಇಂಜಿನಿಯರಿಂಗ್ ಮತ್ತು ವಾಸ್ತುಶಿಲ್ಪ ಸಮುದಾಯದಿಂದ ಮಾತ್ರವಲ್ಲದೆ ಕುಶಲಕರ್ಮಿಗಳು, ಯಂತ್ರಶಾಸ್ತ್ರಜ್ಞರು, ವೆಲ್ಡರ್‌ಗಳು, ಕೈಗಾರಿಕಾ ಕಾರ್ಮಿಕರು, ಕಾರ್ಖಾನೆಯ ಕೆಲಸಗಾರರು ಮತ್ತು ಇತರರು ಪೂಜೆಯ ದಿನವನ್ನು ಪೂಜ್ಯ ಸೂಚಕವಾಗಿ ಗುರುತಿಸುತ್ತಾರೆ. ಅವರು ಉತ್ತಮ ಭವಿಷ್ಯ, ಸುರಕ್ಷಿತ ಕೆಲಸದ ಪರಿಸ್ಥಿತಿಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಕ್ಷೇತ್ರಗಳಲ್ಲಿ ಯಶಸ್ಸಿಗಾಗಿ ಪ್ರಾರ್ಥಿಸುತ್ತಾರೆ. ಕಾರ್ಮಿಕರು ವಿವಿಧ ಯಂತ್ರಗಳ ಸುಗಮ ಕಾರ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಭಾರತದ ಅನೇಕ ಭಾಗದಲ್ಲಿ ಶ್ರೀ ವಿರಾಟ ವಿಶ್ವಕರ್ಮ ಪೂಜೆಯನ್ನು ಸೆಪ್ಟೆಂಬರ್ 17 ರಂದು ಆಚರಿಸುತ್ತಾರೆ.
ಶ್ರೀ ವಿರಾಟ ವಿಶ್ವಕರ್ಮ ಪೂಜೆಯ ಶುಭ ದಿನದಂದು, ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹಾರ್ದಿಕ ಶುಭಾಶಯಗಳು ಹಾಗೂ ಶ್ರೀ ವಿರಾಟ ವಿಶ್ವಕರ್ಮ ಪರಬ್ರಹ್ಮನು ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ.