ಸಿಎಂ ಬದಲಾವಣೆ ಬಗ್ಗೆ ಕೇಳಬೇಡಿ ಪ್ಲೀಸ್ ! ಸಚಿವ ಸತೀಶ ಜಾರಕಿಕೊಳಿ

ಹುಕ್ಕೇರಿ : ರಾಜ್ಯದಲ್ಲಿ ಯಾವುದೇ ಸಿಎಂ ಕೂಗು ಕೇಳುವ ಪ್ರಶ್ನೆ ಇಲ್ಲ.ಈಗಾಗಲೇ ಸಿಎಂ ಇದ್ದಾರೆ ಅವರನ್ನ ಇಳಿಸುವವರು ಯಾರು? ಎಂದು ಸಚಿವ ಸತೀಶ್ ಹಾರಕಿಹೊಳಿ ಹೇಳಿದರು. 

Your Image Ad
Your Image Ad

ಹುಕ್ಕೇರಿ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪದೇ ಪದೇ ಸಿಎಂ ಬದಲಾವಣೆ ವಿಚಾರ ಚರ್ಚೆ ಮಾಡುವ ಅವಶ್ಯಕತೆಯಿಲ್ಲ.

Your Image Ad

ಸರ್ಕಾರದ ಮುಂದೆ ಸಾಕಷ್ಟು ಸಮಸ್ಯೆಗಳಿವೆ ಬಗೆ ಹರಿಸಲು ಸಮಯ ಬೇಕಿದೆ.ದೇಶದಲ್ಲಿ ಬಹಳಷ್ಟು ಜನರ ಮೇಲೆ ಪ್ರಕರಣಗಳು ಇದ್ದರೂ ಸಿಎಂ, ಸಚಿವರು ಇದ್ದಾರೆ.

ಕೋರ್ಟ್ ಅನುಮತಿ ನೀಡಿದರೂ ರಾಜೀನಾಮೆ ನೀಡಬೇಕೆಂದು ಕಾನೂನಿನಲ್ಲಿ ಹೇಳಿಲ್ಲ ಎಂದರು. 

ರಾಹುಲ್ ಗಾಂಧಿ ಅವರ ಭೇಟಿಗೆ ಬೇರೆ ಕೆಲಸಕ್ಕೆ ಹೋಗಿದ್ದೆ.ಸಿಎಂ ಆಗಿ ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ.ಸಿಎಂ ಬದಲಾವಣೆ ಬಗ್ಗೆ ಕೇಳಬೇಡಿ ಪ್ಲೀಸ್ ಎಂದು ಮನವಿ ಮಾಡಿದರು. 

ಜನ ನಮ್ಮನ್ನ ನೋಡಿ ಉಗಳುತ್ತಾರೆ ಬರೇ ಬರೇ ಸಿಎಂ ಎಂದರೇ ಇವರಗೇನೂ ಕೆಲಸ ಇಲ್ಲ ಎಂದು ಜನ ಉಗಿಯುತ್ತಾರೆ.

ಸಿಎಂ ಆಗಬೇಕು ಎನ್ನುವ ಅಭಿಯಾನ ನಾವು ಆರಂಭಿಸಿಲ್ಲ ಎಂದರು.

Read More Articles