ಹಾಲುಮತ ಸಮಾಜದಿಂದ ಕನಕದಾಸರ 533 ನೇ ಜಯಂತಿ ಆಚರಣೆ

ಚಿಕ್ಕೋಡಿ: ಜಾತಿ-ಮತ ಕುಲಗಳನ್ನು ಮೀರಿ ಭಕ್ತಿಮಾರ್ಗದಿಂದ ಭಗವಂತನನ್ನು ಒಲಿಸಿಕೊಂಡು, ದೇವರನ್ನೇ ತನ್ನಡೆ ತಿರುಗುವಂತೆ ಮಾಡಿದ ಮಹಾನ ವಿದ್ವಾಂಸ, ಮಾನವತಾ ವಾದಿ, ದಾಸಶ್ರೇಷ್ಠ ಕವಿ ಕನಕದಾಸರ 533 ನೇ ಜಯಂತಿಯನ್ನು ತಾಲೂಕಿನ ಖಡಕಲಾಟ ಗ್ರಾಮದಲ್ಲಿ ಹಾಲುಮತ ಸಮಾಜ ಮತ್ತು ಯುವ ಘರ್ಜನೆ ಸಂಘದವರ ಸಮ್ಮುಖದಲ್ಲಿ ದಿ. 03 ಗುರುವಾರದಂದು ಸರಳ ರೀತಿಯಲ್ಲಿ ಗ್ರಾಮದ ಗುರುಹಿರಿಯರ ಸಮ್ಮುಖದಲ್ಲಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಂಕರ್ ಅವಡಖಾನ, ಮಹೇಶ್ ಗಾವಡೆ, ಅಜಿತ್ ಕೋಡೆ, ರಾಮ ಕರಿಗಾರ್, ಪ್ರಧಾನಿ ಬೊರಗುಂಡೆ, ರಾಹುಲ್ ಗಾವಡೆ, ವಿಠ್ಠಲ್ ಅವಡಖಾನ, ಮಾಳು ಪೂಜಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

promotions

promotions

Read More Articles