ಇಂದು ಕರ್ನಾಟಕ ಬಂದ, ಕುಂದಾನಗರದಲ್ಲಿ ನೀರಸ ಪ್ರತಿಕ್ರಿಯೆ
- 14 Jan 2024 , 9:42 PM
- Belagavi
- 90
ಬೆಳಗಾವಿ: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಖಂಡಿಸಿ ಕನ್ನಡ ಪರ ಸಂಘಟನೆಗಳು ಇಂದು 'ಕರ್ನಾಟಕ ಬಂದ್'ಗೆ ಕರೆ ನೀಡಿವೆ. ಬೆಳಿಗ್ಗೆ ಆರು ಗಂಟೆಯಿಂದಲೇ ಬಂದ್ ಆರಂಭವಾಗಿದ್ದು, ಹಲವಡೆ ಕನ್ನಡಪರ ಕಾರ್ಯಕರ್ತರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ಈಗಾಗಲೇ ನಗರದಲ್ಲಿ ಬಿಜೆಪಿಯ ರಾಜ್ಯ ರಾಜಕಾರಣಿಯ ಸಭೆಯು ಕೂಡ ನಡೆಯುತ್ತಿದ್ದು ಕೇವಲ ಬೆರಳಣಿಕೆಯ ಸಂಘಟನೆ ಮಾತ್ರ ಅಲ್ಲಲ್ಲಿ ಪ್ರತಿಭಟನೆ ನಡೆಸಿವೆ. ಎಂದಿನಂತೆ ಬಸ್ ಸಂಚಾರ, ಹೋಟೆಲ್ ಗಳು, ಟೀ ಅಂಗಡಿಗಳು, ಹೂ ತರಕಾರಿ ಅಂಗಡಿಗಳು, ಆಟೋ ರಿಕ್ಷಾ ಸೇವೆಗೆ ಬಾಧಕವಾಗಿಲ್ಲ. ಬಂದ್ ಗೆ ಜನತೆ ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.











