ಬೆಳಗಾವಿಯಲ್ಲಿ ಗೃಹ ಸಚಿವರು ಹೇಳಿದಾದ್ರು ಏನು ಗೊತ್ತಾ ?
- 14 Jan 2024 , 11:03 PM
- Belagavi
- 114
ಬೆಳಗಾವಿ : ನಗರದಲ್ಲಿ ಈಗಾಗಲೇ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆ ಗಾಂಧಿ ಭವನದಲ್ಲಿ ಶುರುವಾಗಿದ್ದು, ಹಲವಾರು ಮಂತ್ರಿಗಳು, ಸಚಿವರು, ಶಾಸಕರು, ಕಾರ್ಯಕರ್ತರು ಭಾಗಿಯಾಗಿದ್ದಾರೆ. ಸಭೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಲವ್ ಜಿಹಾದ್ ನಿಷೇಧ, ಡ್ರಗ್ಸ್ ಪ್ರಕರಣದಲ್ಲಿ ಚಾರ್ಜ್ ಶೀಟ್ ಹಾಕುವ ಕುರಿತು ವಿಷಯ ಮಂಡನೆಯ ಬಗ್ಗೆ ಚರ್ಚೆ ಆರಂಭವಾಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಕೆಲವು ಕನ್ನಡ ಸಂಘಟನೆಗಳು ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದಾರೆ. ಇನ್ನು ಕೆಲವು ಸಂಘಟನೆಗಳು ಬಂದ್ ಗೆ ಬೆಂಬಲ ಕೊಟ್ಟಿಲ್ಲ, ನಿರೀಕ್ಷೆಯಂತೆ ರಾಜ್ಯದ ಜನರು ಬಂದ್ ಕರೆಗೆ ಸಹಕಾರ ಕೊಟ್ಟಿಲ್ಲ, ಸಾಮಾನ್ಯವಾಗಿ ಎಲ್ಲ ಜಿಲ್ಲೆಗಳಲ್ಲಿ ಜನ ಜೀವನ, ಬಸ್ ಸಂಚಾರ ಯತಾಸ್ಥಿತಿಯಲ್ಲಿದೆ. ಕೆಲವೆಡೆ ಒತ್ತಾಯಪೂರ್ವಕವಾಗಿ ಬಂದ ಮಾಡುತ್ತಿರುವವರ ವಿರುದ್ಧ ಪೊಲೀಸರಿಗೆ ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ. ಮರಾಠಿ ಬೇರೆ, ಮರಾಠಾ ಬೇರೆ ಅನ್ನೋದರ ಬಗ್ಗೆ ಅರ್ಥ ಮಾಡಿಕೊಳ್ಳಬೇಕು ಎಂದರು. ಇನ್ನೂ ನ್ಯೂ ಇಯರ್ ಸೆಲೆಬ್ರೇಷನ್ ಬಗ್ಗೆ ಇನ್ನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುತ್ತೇವೆ ಹಿಂದಿನ ಭಾರಿ ಕಾಂಗ್ರೆಸ್ ಪಕ್ಷದ ಗವರ್ನರ್ ಅದಕ್ಕೆ ಅವಕಾಶ ನೀಡಿಲ್ಲ

ಬೆಳಗಾವಿಯಲ್ಲಿ ಗೃಹ ಸಚಿವರು ಹೇಳಿದಾದ್ರು ಏನು ಗೊತ್ತಾ ? pic.twitter.com/brTB2ulukN

ಈ ಭಾರಿ ಅದನ್ನು ಜಾರಿಗೆ ತರುವ ಗುರಿ ಹೊಂದಿದ್ದೇವೆ. ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಬಾರದು ಎಂಬ ಉದ್ದೇಶ ಲವ್ ಜಿಹಾದ್ ನಿಷೇಧದ ಬಗ್ಗೆಯೂ ಕಾಯಿದೆ ಜಾರಿಗೆ ತರುತೇವೆ. ಡ್ರಗ್ಸ್ ಪ್ರಕರಣದಲ್ಲಿ ಚಾರ್ಜ್ ಶೀಟ್ ಹಾಕಿದ್ದೇವೆ. ಕಳೆದ 10 ವರ್ಷದಲ್ಲಿ ಎಷ್ಟು ಡ್ರಗ್ ಸಿಜ್ ಆಗಿದೆ ಅಷ್ಟು ಕೇವಲ 10 ತಿಂಗಳಲ್ಲಿ ಡ್ರಗ್ಸ್ ಸಿಜ್ ಮಾಡಿದ್ದೇವೆ. ಡ್ರಗ್ಸ್ ವಿರುದ್ಧ ಸಮರ ಮುಂದುವರೆಯಲಿದೆ ಹೊಸ ಹೊಸ ವಿಧಾನದಲ್ಲಿ ಕೊರಿಯರ್, ಡಾರ್ಕ್ ನೆಟ್ ಮೂಲಕ ಡ್ರಗ್ ಬರುತಿದೆ ಅದರ ವಿರುದ್ಧವು ಕ್ರಮ ಕೈಗೊಂಡಿದ್ದು ಅದರಲ್ಲಿ ಶಾಮಿಲ್ ಆದ ಅಧಿಕಾರಿಗಳ ಮೇಲೆ ಈಗಾಗಲೇ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.










