ಮಾಜಿ ಸಿಎಂ ಕುಮಾರಸ್ವಾಮಿ ಮಾತಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು

ಬೆಳಗಾವಿ: ಸಿದ್ದರಾಮಯ್ಯ ಪ್ರೀಪ್ಲ್ಯಾನ್ ಮಾಡಿ ನನ್ನ ಹೆಸರು ಹಾಳು ಮಾಡಿದ್ರೂ ಎಂಬ ಕುಮಾರಸ್ವಾಮಿ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು. ಶನಿವಾರ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಕುಟುಂಬ ಕಣ್ಣೀರು ಹಾಕುವುದು ಹೊಸತೇನಲ್ಲ, ಒಳ್ಳೆಯದಕ್ಕೂ ಹಾಕ್ತಾರೆ, ಕೆಟ್ಟದಕ್ಕೂ ಹಾಕ್ತಾರೆ ಅದಕ್ಕೆ ಬೆಲೆ ಇಲ್ಲ. ಕಣ್ಣೀರ ಹಾಕುವುದು ದೇವೆಗೌಡ ಮನೆಯವರ ಸಂಸ್ಕೃತಿ. ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ರಾಜಕೀಯದ ಅನೂಕುಲಕ್ಕೆ ತಕ್ಕಂತೆ ಹೇಳ್ತಾರೆ. ಜೆಡಿಎಸ್ ರಾಜ್ಯದಲ್ಲಿ ಗೆದಿದ್ದು ಕೇವಲ 37 ಸ್ಥಾನ ಕಾಂಗ್ರೆಸ್ ಗೆದಿದ್ದು 80 ಸ್ಥಾನ ಕಾಂಗ್ರೇಸ್ ಶಾಸಕರು ಬೆಂಬಲ ನೀಡಿದ್ದಕ್ಕೆ ಅವರು ಸಿಎಂ ಆಗಿದ್ದು, ಕುಮಾರಸ್ವಾಮಿ ಸಮ್ಮಿಶ್ರ ಸರಕಾರದ ಅವಧಿಯಲ್ಲಿ 12 ತಿಂಗಳು ಅಧಿಕಾರ ನಡೆಸಿದ್ದಾರೆ. ಆದರೆ ಇವರು ಆಡಳಿತ ನಡೆಸಿದ್ದು ವೆಸ್ಟರ್ನ್ ಹೊಟೇಲ್ ನಿಂದ ಯಾವ ಶಾಸಕ, ಸಚಿವರ ಕೈಗೂ ಸಿಗಲಿಲ್ಲ ಆಸಾಮಿ.

promotions

ಸಾವಿರಾರು ಕೋಟಿ ಅನುದಾನ ಅವರು ತಮ್ಮ ಮನೆಯಿಂದ ಕೊಟ್ರಾ ? ಸಮ್ಮಿಶ್ರ ಪಥನವಾಗಲೆಂದು ನಾನು ಅಮೇರಿಕಾಗೆ ಹೋದೆ ಎಂದು ಕುಮಾರಸ್ವಾಮಿಯ ಆರೋಪವನ್ನು ಯಾರು ಯಾಕೆ ಅದನ್ನು ಪ್ರಶ್ನೆ ಮಾಡುವುದಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮಾತಿಗೆ ಮಾಜಿ ಸಿಎಂ ತಿರುಗೇಟು ನೀಡಿದರು.

promotions

Read More Articles