ಪಕ್ಷ ನಿಷ್ಠೆಗೆ ಮನೆ ಹಾಕಿದ ಬಿಜೆಪಿ ಹೈಕಮಾಂಡ್, ಕಡಾಡಿಗೆ ಒಲಿದು ಬಂತು ಅದೃಷ್ಟ

ಬೆಳಗಾವಿ: ಬಿಜೆಪಿ ಪಕ್ಷದ ರಾಜಕಾರಣ ದಿನಕ್ಕೊಂದರಂತೆ ತಿರುವು ಪಡೆಯುತ್ತಿದೆ ಈ ಸಲ ರಾಜ್ಯಸಭಾ ಸ್ಥಾನಕ್ಕೆ ಎರಡು ಹೆಸರುಗಳು ಕೇಳಿ ಬರುತ್ತಿತ್ತು ಆದರ ರಾಜ್ಯಸಭಾ ಚುನಾವಣೆಗೆ ಮತ್ತೊಂದು ತಿರುವು ಸಿಕ್ಕಂತೆ ಯಾಗಿದೆ ಕರ್ನಾಟಕದ ಆಡಳಿತಾರೂಢ ಬಿಜೆಪಿ ಜೂನ್ 19 ನಡೆಯಲಿರುವ ಚುನಾವಣೆಗೆ ಎರಡು ಹೆಸರುಗಳನ್ನು ಪ್ರಕಟಿಸಲಾಗಿತ್ತು ಸತತ ಮೂರು ಭಾರಿ ರಾಜ್ಯಸಭೆಗೆ ಆಯ್ಕೆ ಯಾಗಿದ್ದ ಪ್ರಭಾಕರ ಕೋರೆ ಹಾಗೂ ಮಾಜಿ ಸಂಸದ ರಮೇಶ ಕತ್ತಿ ಗೆ ಟಿಕಟ್ ಸಿಗುತ್ತವೆ ಎಂದು ಹೇಳಲಾಗುತ್ತಿತ್ತು ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಈರಣ್ಣಾ ಕಡಾಡಿ ಹಾಗೂ ಅಶೋಕ ಗಸ್ತಿ ಯವರಿಗೆ ಟಿಕೇಟ್ ಒಲಿದು ಬಂದಿದೆ. ಆರ್.ಎಸ್.ಎಸ್ ನಲ್ಲಿ ಗುರುತಿಸಿಕೊಂಡಿರುವ ಅವರು ಜಿಲ್ಲಾ ಪಂಚಾಯತ ಅದ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ ಇವರು ಈ ಹಿಂದೆ ವಿಧಾನ ಪರಿಷತ್ತ ಸ್ಥಾನಕ್ಕೆ ಪೈಪೋಟಿ ನಡೆಸಿದ್ದರು. ಆದರೆ ಸದ್ಯ ರಾಜ್ಯಸಭಾ ಸ್ಥಾನಕ್ಕೆ ಟಿಕೆಟ್ ಒಲಿದು ಬಂದಿದೆ. ಈರಣ್ಣಾ ಕಡಾಡಿಯವರಿಗೆ ಆರ್ ಎಸ್ ಎಸ್ ಬೆಂಬಲದಿಂದ ಟಿಕೆಟ್ ಸಿಕ್ಕಿರಬಹುದು ಎನ್ನಲಾಗುತ್ತಿದೆ. ದೇವರಾಜ ಅರಸು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ, ರಾಯಚೂರು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶೋಕ ಗಸ್ತಿ ಅವರಿಗೂ ರಾಜ್ಯಸಭೆ ಟಿಕೆಟ್ ಸಾಮನ್ಯರಿಗೆ ಟಿಕೆಟ್ ಸಿಕ್ಕಿರುವದು ವಿಶೇಷ. ರಾಜ್ಯ ಕೋರ್‌ ಕಮಿಟಿಯು ಕಳುಹಿಸಿದ್ದ ಪ್ರಸ್ತಾವನೆಯನ್ನು ತಿರಸ್ಕರಿಸಿ ಅಚ್ಚರಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಬೆಳಗಾವಿ ಪ್ರಬಲ ನಾಯಕರಾದ ಪ್ರಭಾಕರ್ ಕೋರೆ ಹಾಗೂ ಮಾಜಿ ಸಂಸದ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿಗೆ ಟಿಕೆಟ್ ಸ್ಥಾನ ಕೈತಪ್ಪಿದೆ

promotions

Read More Articles