ಈ ಸರ್ಕಾರ ಜನರ ಸಮಸ್ಯೆಗೆ ಕ್ಯಾರೇ ಅನ್ನುತ್ತಿಲ್ಲ; ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಾಗ್ಧಾಳಿ

ಬೆಳಗಾವಿ: ಈ ಸರ್ಕಾರ ಬಂದಮೇಲೆ ಬೆಂಗಳೂರು, ವಿಧಾನಸೌಧ, ಕೃಷ್ಣ, ಕಚೇರಿ ಬಿಟ್ಟು ಎಲ್ಲೂ ಈಚೆಗೆ ಬರಲೇ ಇಲ್ಲ ಎಂದು ಸರ್ಕಾರದ ವಿರದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. ಶನಿವಾರ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಭಾಗದಲ್ಲಿ ವಿಧಾನಸೌಧ ಯಾಕೆ ಕಟ್ಟಿದ್ದು ಈ ಭಾಗದ ಜನರಿಗೆ ನ್ಯಾಯವನ್ನು ಒದಗಿಸಿಕೊಡಬೇಕಂತ, ಈ ಭಾಗದ ಜನರು ಮಳೆಯಿಂದ ಮುಳಗಿದರು ಇವತ್ತಿಗೂ ಕೂಡ ಪರಿಹಾರ ಕೊಡುದಕ್ಕೆ ಆಗಲಿಲ್ಲ. ಮನೆ ಜಮೀನು, ಆಸ್ತಿ-ಪಾಸ್ತಿ, ಉದ್ಯೋಗ ಎಲ್ಲವನ್ನು ಕಳೆದುಕೊಂಡಿದ್ದಾರೆ. ಹೋದ ಸಲ ಅಧಿವೇಶನ ಆಗಲಿಲ್ಲ ಈ ಸಲ ಶಾರ್ಟ ಅಧಿವೇಶನ ಕರೆದಿದ್ದಾರೆ ಈ ಸಲವಾದರು ಎಲ್ಲರೂ ಕೂಡಿಕೊಂಡು ಮಾಡಬೇಕಿತ್ತು. ಆದರೆ ಅದನ್ನು ಬಿಟ್ಟು ಇಲೆಕ್ಷನ್ ಇರುವ ಕಾರಣ ಶೃಂಗಾರ, ಮತ್ತೊಂದು ಅಂತ ಅವರ ಪಾರ್ಟಿಗೊಸ್ಕರ ಮಾಡ್ತಾಯಿದ್ದಾರೆ. ಇವರು ಪಾಲಿಟಿಕ್ಸ್ , ರಾಜಕಾರಣ ಬಿಟ್ರೆ ರಾಜ್ಯದ ಜನತೆಗೆ ಯಾರಿಗೆ ಅನ್ಯಾಯ ಆಗಿದೆ ಅವರಿಗೆ ನ್ಯಾಯ ಕೊಡಿಸಬೇಕು ಅಂತಿಲ್ಲ ಜೊತೆಗೆ ಕೋವಿಡ್ ಸಂದರ್ಭದಲ್ಲಿ ಅವರ ಮಾತನ್ನಾಡಿದ್ದ ಹಾಗೆ ವೃತ್ತಿಯನ್ನು ಉಳಿಸಿಕೊಂಡು ಬಂದವರಿಗೆ ಎನ ಪರಿಹಾರಕೋಡಬೇಕಾಗಿತ್ತು ಅದನ್ನು ಕೂಡ ಕೊಡಲಿಲ್ಲ. ಬೆಳಗಾವಿಯಲ್ಲಿ ನಾವೇ ಸುವರ್ಣಸೌಧ ಕಟ್ಟಿಸಿದ್ದು ಎಂದು ಮಾತನಾಡುತ್ತಿರುವ ಇವರು ಎತಕ್ಕಾಗಿ ಕಟ್ಟಿಸಿದ್ರು. ಜನರ ಸಮಸ್ಯೆಗೆ ಸ್ಪಂದಿಸದವರು ಎತಕ್ಕೆ ಅಧಿಕಾರದಲ್ಲಿ ಇರಬೇಕು, ಈ ಭಾಗದ ದೊಡ್ಡ ದೊಡ್ಡ ನಾಯಕರೆಲ್ಲ ಅನ್ಯಾಯ ಆಗತಿದೆ ಎನ್ನುವರು ಶಾಸಕರು, ಮಂತ್ರಿಗಳು ಏತಕ್ಕೆ ಧ್ವನಿ ಎತ್ತತ್ತಾಯಿಲ್ಲ. ಇದನ್ನು ಮುಖ್ಯಮಂತ್ರಿಗಳಿಗೆ ಕೇಳಲಿಕ್ಕೆ ಇಚ್ಚೆಪಡ್ತೀನಿ ಎಂದರು. ಇನ್ನು ಗೋ ಹತ್ಯ ನಿಷೇದ ಕಾಯ್ದೆ ವಿಚಾರವಾಗಿ ಮಾತನಾಡಿದ ಅವರು, ಈ ಕಾಯ್ದೆ ಯಾವುದೋ ಒಂದು ಸಮಾಜ

promotions

ಗಮನದಲ್ಲಿ ಇಟ್ಟುಕೊಂಡು ಮಾಡ್ತಾಯಿದ್ದಾರೆ ಆದರೆ ಎಲ್ಲಾ ವರ್ಗದ ರೈತರು ವ್ಯವಸಾಯದ ಜೊತೆಗೆ ದನಕರುಗಳನ್ನು ಸಾಕಿರುತ್ತಾರೆ ಅವುಗಳಿಗೆ ವಯಸ್ಸಾದ ಮೇಲೆ ಏನ್ ಮಾಡ್ತಾರೆ ಅವ್ರು, ಸರ್ಕಾರ ಅವುಗಳಿಗೆ ಹಣ ಕೋಡ್ತಾರಾ ? ಅವ್ರೇನೆ ಮಾಡಿದರು ಕಾನೂನಿಗೆ ವಿರುದ್ಧವಾಗಿ ಮಾಡ್ತಾಯಿದ್ದರೆ ಎಂದು ಸರ್ಕಾರದ ವಿರದ್ಧ ಗುಡುಗಿದರು. ಇನ್ನೂ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಬಂದಾಗ ಅವರ ಪಾರ್ಟಿ ಅವರ ಅಭಿಪ್ರಾಯ ನಾವೇಕೆ ಮಾತಾಡಬೇಕು ಅವರವರ ಚಿಂತನೆ, ಪಕ್ಷಗಳನ್ನ ಒಟ್ಟಾಗಿ ಸೇರಿ ತೀರ್ಮಾನ ಮಾಡಿದ್ದೇವು ಎಂದರು.

promotions

Read More Articles