ಇಂದು ಮಹಾನ್ ಮಾನವತಾವಾದಿ ಡಾ. ಬಿ.ಆರ್ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ
- 15 Jan 2024 , 8:47 AM
- Delhi
- 571
ಡಿ.06 ಈ ದಿನ ಮಹಾನ್ ಮಾನವತಾವಾದಿ ಡಾ. ಬಿ.ಆರ್ ಅಂಬೇಡ್ಕರ್ ಅವರು ಮಹಾ ಪರಿನಿರ್ವಾಣ ದಿನ ದೇಶದ ಏಳಿಗೆಗಾಗಿ ಅವರು ಕೊಟ್ಟ ಕೊಡುಗೆ ಅನನ್ಯ. ಪ್ರಪಂಚ ಕಂಡ ಬುದ್ಧಿವಂತ ಸಾಂವಿಧಾನಿಕ ತಜ್ಞರಾಗಿದ್ದರು, ಅವರು ಸುಮಾರು 60 ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿದ್ದವರು ಅಂಬೇಡ್ಕರ್ ಅವರನ್ನು "ಭಾರತದಸಂವಿಧಾನದಪಿತಾಮಹ" ಎಂದು ಗುರುತಿಸಲಾಗಿದೆ.


ಪ್ರತಿಭಾವಂತ ಅರ್ಥಶಾಸ್ತ್ರಜ್ಞರಾಗಿರುವ ಅವರು ಮಹಿಳಾ ಸಮಾನತೆ, ಸ್ವಾತಂತ್ರಕ್ಕಾಗಿ ಶ್ರಮಿಸಿದವರು. ದೇಶಕ್ಕೆ ಸಶಕ್ತ ಸಂವಿಧಾನ ನೀಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೂರ್ತ ರೂಪ ನೀಡಿದವರು. ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ, ನಿಯಮಗಳ ಅನುಷ್ಠಾನಕಾರ, ಸಮಾನತೆಯ ಹರಿಕಾರ, ಮೀಸಲಾತಿ ನೀಡಿಕೆಯ ಮಹಾತಪಸ್ವಿ ಎಂಬಂತೆ ವರ್ಣಿಸುವುದು, ವಿಶ್ಲೇಷಿಸುವುದು, ವಿಮರ್ಶಿಸುವುದು ಉಂಟು.


ಅದರಲ್ಲೂ, ನವೆಂಬರ್ 26ರ ಸಂವಿಧಾನ ದಿನಾಚರಣೆ ದಿವಸ ರಾಷ್ಟ್ರವ್ಯಾಪಿ ಅಂಬೇಡ್ಕರ್ ಅವರನ್ನು ಕಾನೂನಿನ ಕಣ್ಣಿನಿಂದ ನೋಡುವುದು ಸಹಜ ಪ್ರಕ್ರಿಯೆ ವಿಶ್ವದಲ್ಲೇ ಮಾದರಿಯಾದ ಭಾರತದ ಸಂವಿಧಾನ ಸಮಾನತೆ, ಭಾತೃತ್ವ ಸೌಹಾರ್ದತೆಯನ್ನು ಸಾರುತ್ತದೆ. ಅದೇ ರೀತಿ ಏಪ್ರಿಲ್ 14 ಮತ್ತು ಡಿಸೆಂಬರ್ 6ರಂದು ವಿಶೇಷವಾಗಿ ಅಂಬೇಡ್ಕರರ ಸ್ಮರಣೆ ದೇಶದುದ್ದಗಲದ ಜೊತೆಜೊತೆಗೆ ದೇಶದ ಗಡಿ ಮಿರಿ ಹರಿದಾಡುತ್ತದೆ.

ಶೋಷಿತವರ್ಗ, ನಮ್ಮ ಉಸಿರ ಬಿಸಿ ತಗ್ಗಿದ್ದು ಅಂಬೇಡ್ಕರದಿಂದಲೇ ಎಂಬ ಭಾವವನ್ನು ಇಂದಿಗೂ ಇರಿಸಿಕೊಂಡಿದೆ. ಇಷ್ಟಾಗಿಯೂ ಅಭಿಮಾನ, ಶ್ಲಾಘನೆ ಎಲ್ಲವೂ ಕೂಡ ಅಂಕಿ ಸಂಖ್ಯೆಗಳು, ನಿಯಮಗಳನ್ನು ಅನುಸರಿಸಿಯೇ ಇರುತ್ತವೆ. ಅವರ ಕುರಿತಾದ ಚರ್ಚೆಗಳೆಲ್ಲ ಅಂಬೇಡ್ಕರರು ಕೊಟ್ಟಹಕ್ಕುಗಳ ಬಗ್ಗೆ, ನ್ಯಾಯಿಕ ನಿಯಮಗಳ ಬಗ್ಗೆ, ಪೌರತ್ವದ ಬಗ್ಗೆ ಗಿರಕಿ ಹೊಡೆಯುತ್ತವೆ. ಸಂವಿಧಾನದ ಕರಡು ರಚನೆಯ ಸಂದರ್ಭ ಸದಸ್ಯರ ಅಲಭ್ಯತೆ ಜೊತೆಗೆ, ಅಂಬೇಡ್ಕರರು ವಹಿಸಿದ ಅಪಾರ ಶ್ರಮದ ಕುರಿತು ಚರ್ಚೆಗಳಾಗುತ್ತವೆ.

1947 ರ ಆಗಸ್ಟ್ 15 ರಂದು ಭಾರತದ ಸ್ವಾತಂತ್ರ್ಯದ ನಂತರ, ಕಾಂಗ್ರೆಸ್ ನೇತೃತ್ವದ ಹೊಸ ಸರ್ಕಾರವು ಅಂಬೇಡ್ಕರ್ ಅವರನ್ನು ದೇಶದ ಮೊದಲ ಕಾನೂನು ಮಂತ್ರಿಯಾಗಿ ಸೇವೆ ಸಲ್ಲಿಸಲು ಆಹ್ವಾನಿಸಿತು, ಅದನ್ನು ಅವರು ಒಪ್ಪಿಕೊಂಡರು. ಆಗಸ್ಟ್ 29 ರಂದು ಅವರನ್ನು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು ಮತ್ತು ಭಾರತದ ಹೊಸ ಸಂವಿಧಾನವನ್ನು ಬರೆಯಲು ವಿಧಾನಸಭೆಯಿಂದ ನೇಮಕಗೊಂಡರು.

ಸಂವಿಧಾನ ಸಭೆಗೆ ಮಂಡಿಸಿದ ಅಂಬೇಡ್ಕರ್ ಅವರ ಕೊನೆಯ ಭಾಷಣದಲ್ಲಿ, ಘನತೆ ಮತ್ತು ನಮ್ರತೆಯಿಂದ ಇಷ್ಟು ಕಡಿಮೆ ಸಮಯದಲ್ಲಿ ಇಂತಹ ಸಂಪೂರ್ಣ ಮತ್ತು ವಿವರವಾದ ಸಂವಿಧಾನವನ್ನು ಸಿದ್ಧಪಡಿಸಿದ್ದಕ್ಕಾಗಿ ಅವರು ತಮ್ಮ ಸಹೋದ್ಯೋಗಿಗಳಿಗೆ ಮನ್ನಣೆ ನೀಡಿದರು. ಇದು ನಾಯಕನ ಸಹೋದ್ಯೋಗಿಗಳ ಬಗ್ಗೆ ಪ್ರೀತಿ ಮತ್ತು ನಮ್ರತೆಯ ಸಂಪೂರ್ಣ ಕೃತಜ್ಞತೆಯಾಗಿದೆ ಎಂಬ ಅಂಶವನ್ನು ಇಡೀ ಸಂವಿಧಾನ ಸಭೆಯು ತಿಳಿದಿತ್ತು.

- ಅಧ್ಯಕ್ಷರು, ಕರಡು ಸಮಿತಿ;
- ಸದಸ್ಯ, ಸಂವಿಧಾನ ಸಭೆಯ ಕಾರ್ಯಗಳ ಸಮಿತಿ.
- ಸದಸ್ಯ, ರಾಷ್ಟ್ರೀಯ ಧ್ವಜ ಮತ್ತು ಎಚ್‌ಒಸಿ ಸಮಿತಿ
- ಸದಸ್ಯ, ಮೂಲಭೂತ ಹಕ್ಕುಗಳ ಉಪಸಮಿತಿ ಸದಸ್ಯ.
- ಅಲ್ಪಸಂಖ್ಯಾತರ ಉಪಸಮಿತ ಸದಸ್ಯ.
- ಸಲಹಾ ಸಮಿತಿ ಸದಸ್ಯ.
- ಕೇಂದ್ರ ಸಂವಿಧಾನ ಸಮಿತಿ ಸದಸ್ಯ.
- ತಿದ್ದುಪಡಿ ಕುರಿತು ಉಪಸಮಿತ ಸದಸ್ಯ.
- ಸುಪ್ರೀಂ ಕೋರ್ಟ್‌ನಲ್ಲಿ ತಾತ್ಕಾಲಿಕ ಸಮಿತಿ ಸದಸ್ಯ.
- ಪೌರತ್ವ ಕುರಿತ ತಾತ್ಕಾಲಿಕ ಸಮಿತಿ ಸದಸ್ಯ.
- ಪೂರ್ವ ಪಂಜಾಬ್ ಮತ್ತು ಪಶ್ಚಿಮ ಬಂಗಾಳದ ಮೇಲೆ ಪರಿಣಾಮ ಬೀರುವ ಅಲ್ಪಸಂಖ್ಯಾತ ಸಮಸ್ಯೆಗಳ ಉಪ ಸಮಿತಿ.

1948 ರಿಂದ ಅಂಬೇಡ್ಕರ್ ಮಧುಮೇಹದಿಂದ ಬಳಲುತ್ತಿದ್ದರು. 4 ಔಷಧಿಗಳ ಅಡ್ಡಪರಿಣಾಮಗಳು ಮತ್ತು ದೃಷ್ಟಿ ಕೊರತೆಯಿಂದಾಗಿ ಅವರು 1954 ರಲ್ಲಿ ಜೂನ್ ನಿಂದ ಅಕ್ಟೋಬರ್ ವರೆಗೆ ಹಾಸಿಗೆ ಹಿಡಿದಿದ್ದರು.
ಅಂಬೇಡ್ಕರ್ ರವರು ಖಾಸಿಗಿ ವಾಹಿನಿಗೆ ನೀಡಿದ ಸಂದರ್ಶನದ ಒಂದು ತುಣುಕು.
ತನ್ನ ಅಂತಿಮ ಹಸ್ತಪ್ರತಿ ಬುದ್ಧ ಮತ್ತು ಅವರ ಧಮ್ಮವನ್ನು ಪೂರ್ಣಗೊಳಿಸಿದ ಮೂರು ದಿನಗಳ ನಂತರ, ಅಂಬೇಡ್ಕರ್ ಅವರು ಡಿಸೆಂಬರ್ 6, 1956 ರಂದು ದೆಹಲಿಯ ತಮ್ಮ ಮನೆಯಲ್ಲಿ ಪರಿನಿರ್ವಾಣ ಹೊಂದಿದರು. ಅವರ ನೆನಪಿಗಾಗಿ ಈ ದಿನ ಮಹಾ ಪರಿನಿರ್ವಾಣ ದಿನವನ್ನಾಗಿ ಆಚರಿಸಲಾಗುತ್ತಿದೆ.










