KSRTC ಸಂಧಾನ ವಿಫಲ, ಮುಂದುವರೆದ ಪ್ರತಿಭಟನೆ
- 14 Jan 2024 , 9:50 PM
- Belagavi
- 187
ಬೆಳಗಾವಿ: ರಾಜ್ಯಾದ್ಯಂತ ಕಳೆದ ಮೂರು ದಿನಗಳಿಂದ ನಡೆದ ಸಾರಿಗೆ ನೌಕರರ ಮುಷ್ಕರ ಇನ್ನೇನು ಕೊನೆಗೊಂಡಿದೆ ಅನ್ನುವಷ್ಟರಲ್ಲಿ ಮತ್ತೆ ಮುಂದುವರೆದಿದೆ. ಸಾರಿಗೆ ನಿಗಮದ ಯೂನಿಯನ್ ಮುಖಂಡರ ಜೊತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಕಂದಾಯ ಸಚಿವ ಆರ್ ಅಶೋಕ್, ಬಸವರಾಜ್ ಬೊಮ್ಮಾಯಿವರಿದ್ದ ಸಭೆಯಲ್ಲಿ ನಡೆಸಿದ್ದರು,

ಇನ್ನೇನು ಇದು ಸಕ್ಸಸ್ ಆಯ್ತು ಅನ್ನುವಷ್ಟರಲ್ಲಿ ಕೆ ಎಸ್ ಆರ್ ಟಿ ಸಿ ಸಾರಿಗೆ ನೌಕರರು ಹಾಗೂ ಸರ್ಕಾರದ ಮಧ್ಯೆ ಮತ್ತೆ ಗೊಂದಲ ಏರ್ಪಟ್ಟಿದ್ದರಿಂದ ksrtc ರಾಜ್ಯಾಧ್ಯಕ್ಷ ಮುಷ್ಕರ ಮುಂದುವರೆಸುವಂತೆ ನಿರ್ಧಾರ ಕೈಗೊಂಡಿದ್ದು, ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಮತ್ತೆ ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದ್ದಾರೆ.











