ಪ್ರಭಾಕರ ಕೋರೆ ನನ್ನ ತಂದೆಯ ಸಮಾನ ಆದರೆ ರಮೇಶ ಕತ್ತಿ ನನ್ನ ಹಿರಿಯ ಸೋದರ ಇದ್ದಂತೆ ಎಂದ ಈರಣ್ಣಾ ಕಡಾಡಿ

ಬೆಳಗಾವಿ: ರಾಜ್ಯದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಬಿಜೆಪಿ ರಾಜ್ಯ ಸಭಾ ಚುನಾವಣಾ ಅಭ್ಯರ್ಥಿಗೆ ಯಾರು ಎಂಬ ಪ್ರಶ್ನೆಗೆ ಈಗ ತೆರೆ ಬಿದ್ದಿದೆ. ಬಿಜೆಪಿ ಮುಖಂಡ ಜಿಲ್ಲಾ ಪಂಚಾಯತ ಮಾಜಿ ಅದ್ಯಕ್ಷ ಈರಣ್ಣಾ ಕಡಾಡಿ ಅವರಿಗೆ ಟಿಕೆಟ್ ಸಿಕ್ಕಿದ್ದು ಆಶ್ಚರ್ಯಕರ ಬೆಳವಣಿಗೆ ಆಗಿದೆ. ಈ ಬಗ್ಗೆ ಇಂದು ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿರುವ ಈರಣ್ಣ ಕಡಾಡಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರ ಪಕ್ಷವಾಗಿದೆ. ಕಾರ್ಯಕರ್ತರಿಗೆ ಬಲ ತುಂಬುವ ನಿಟ್ಟಿನಲ್ಲಿ ನನಗೆ ಟಿಕೆಟ್ ನೀಡಿರಬಹುದು, ಪ್ರಭಾಕರ ಕೋರೆ ನನ್ನ ತಂದೆಯ ಸಮಾನ ಆದರೆ ರಮೇಶ ಕತ್ತಿ ನನ್ನ ಹಿರಿಯ ಸೋದರ ಇದ್ದಂತೆ. ನಾನು ಇವರ ಹಿಂಬಾಲಕನಾಗಿ ಪಕ್ಷ ಸಂಘಟನೆಯ ಕಲಸ ಮಾಡಿರುವೆ ಅವರ ಅವಶ್ಯಕತೆ ಉತ್ತರ ಕರ್ನಾಟಕಕ್ಕೆ ಬಹಳಷ್ಟು ಇದೆ. ಪ್ರಭಾಕರ್ ಕೋರೆ ಹಾಗೂ ರಮೇಶ ಕತ್ತಿ ಅವರಿಗೆ ಏನು ಹೇಳುವುದಿಲ್ಲ ಅಷ್ಟು ದೊಡ್ಡ ವ್ಯಕ್ತಿ ನಾನಲ್ಲ ಎಂದು ಈರಣ್ಣ ಕಡಾಡಿ ತಿಳಿಸಿದ್ದಾರೆ.

promotions

Read More Articles