ಸಂಕಷ್ಟಕ್ಕೆ ಒಳಗಾದ ನೇಕಾರ, ಸಮಸ್ಯೆಗೆ ಖ್ಯಾರೆ ಅನ್ನದ ಜವಳಿ ಮಂತ್ರಿ ಪಾಟೀಲ್

ಬೆಳಗಾವಿ: ಒಂದೇ ವಾರದಲ್ಲಿ ಮೂರು ಜನ ನೇಕಾರರು ಆತ್ಮಹತ್ಯೆ‌ಯಾದ ಘಟನೆ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಸಾಲದ ಕಿರುಕುಳಕ್ಕೆ ಬೇಸತ್ತು, ಕುಟುಂಬ ಸಾಗಿಸಲಾಗದೆ, ಆತ್ಮಹತ್ಯೆಗೆ ಗಡಿನಾಡಿನ ನೇಕಾರರು ಶರಣಾಗುತ್ತಿದ್ದಾರೆ. ಆದರೆ ಜಿಲ್ಲೆಯ ನೇಕಾರರ ಸಂಕಷ್ಟಕ್ಕೆ ಮಾತ್ರ ಜವಳಿ ಸಚಿವ ಶ್ರೀಮಂತ ಪಾಟೀಲ್ ಖ್ಯಾರೆ ಅನುತ್ತಿಲ್ಲ. ಬೆಳಗಾವಿ ನಗರದ ವಡಗಾಂವ ನಗರದ 38 ವರ್ಷದ ಸುಜಿತ್ ಉಪರಿ, 47 ವರ್ಷದ ಸುವರ್ಣ ಕಾಮ್ಕರ್ ಹಾಗೂ ಹುಕ್ಕೇರಿ ತಾಲೂಕಿನ 60 ವರ್ಷದ ಆನಂದಪುರ ನಿವಾಸಿ ಶಂಕರ ಆತ್ಮಹತ್ಯೆಗೆ ಶರಣಾದ ನೇಕಾರರಾಗಿದ್ದಾರೆ. ಶ್ರೀಮಂತ ಪಾಟೀಲ್ ತವರು ಜಿಲ್ಲೆಯಲ್ಲೇ ನೇಕಾರರು ಸಂಕಷ್ಟಕ್ಕೆ ಒಳಗಾಗಿದ್ದು ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ಸಾಂತ್ವನ ಹೇಳಬೇಕಿದ್ದ ಸಚಿವರು ನಾಪತ್ತೆ ಆಗಿದ್ದಾರೆ. ಜವಳಿ ಸಚಿವರಾಗಿ ಆಯ್ಕೆಯಾದ ಬಳಿಕ ಜಿಲ್ಲೆಯಲ್ಲಿ ಒಂದೇ ಒಂದು ಸಭೆ ಕೂಡ ಮಾಡದ ಸಚಿವ ಪಾಟೀಲ್ ವಿರುದ್ಧ ನೇಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

promotions

Read More Articles