ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಮುಂದಿನ ಬಾರಿ ಗೆದ್ದರೆ ಹಾರ ಹಾಕೋಣ; ರಮೇಶ್​ ಜಾರಕಿಹೊಳಿ ಸವಾಲ್

ಬೆಳಗಾವಿ: ಕಳೆದ ಬಾರಿ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನತೆ ನನ್ನ ನಂಬಿ ಲಕ್ಷ್ಮೀ ಹೆಬ್ಬಾಳ್ಕರ ಅವರನ್ನು ಗೆಲ್ಲಿಸಿದ್ದರು. ಮುಂದಿನ ಬಾರಿ ಅವ್ರು ಗೆದ್ದರೆ ಅವರಿಗೆ ಹಾರ ಹಾಕೋಣ ಎಂದು ಜಲಸಂಪನ್ಮೂಲ ಸಚಿವ ರಮೇಶ್​ ಜಾರಕಿಹೊಳಿ ಸವಾಲ್ ಹಾಕಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಬಗ್ಗೆ ಮಾತನಾಡದಂತೆ ನನಗೆ ವರಿಷ್ಠರ ವಾರ್ನಿಂಗ್ ಇದೆ . ನಮ್ಮ ಪ್ರಮುಖರ ಸಲಹೆ ಮೇರೆಗೆ ಕಳೆದ 6 ತಿಂಗಳಿಂದ ಶಾಸಕಿ ವಿರುದ್ದ ಒಂದು ಶಬ್ದ ಮಾತನಾಡಿಲ್ಲ.

promotions

2018 ರ ವಿಧಾನಸಭೆ ಚುನಾವಣೆಯಲ್ಲಿ ನನ್ನ ನಂಬಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಗೆ ಜನರು ಮತ ಹಾಕಿದ್ದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಒಂದು ವೇಳೆ ಶಾಸಕಿ ಮರು ಆಯ್ಕೆಯಾದ್ರೆ ಹಾರ ಹಾಕೋಣ ಎಂದು ಅವರ ಹೆಸರು ಪ್ರಸ್ತಾಪಿಸದೆ ಸಾಹುಕಾರ್ ಓಪನ್ ಚಾಲೆಂಜ್ ಹಾಕಿದರು.

promotions

Read More Articles