ಬಿಜೆಪಿ ಇತಿಹಾಸ ತಿರುಚಿ ಜನರ ದಿಕ್ಕು ತಪ್ಪಿಸುತ್ತಿದೆ; ಕೆಪಿಸಿಸಿ ಕಾರ್ಯಾಧ್ಯಕ್ಷ ಜಾರಕಿಹೊಳಿ ವಾಗ್ದಾಳಿ
- 15 Jan 2024 , 2:00 AM
- Belagavi
- 177
ಬೆಳಗಾವಿ: ಇತಿಹಾಸದಲ್ಲಿ ಬಹಳಷ್ಟು ಘಟನೆಗಳು ನಡೆದಿವೆ. ಬಿಜೆಪಿ ಪಕ್ಷವು ದೇಶದ ಇತಿಹಾಸವನ್ನು ತಿರುಚುವ ಮೂಲಕ ಜನರನ್ನು ದಾರಿ ತಪ್ಪಿ ಸುತ್ತಿದೆ. ದೇಶದಲ್ಲಿರುವ ಪ್ರತಿಯೊಂದು ಸಮುದಾಯವು ಸಮಾನತೆ ಹಾಗೂ ಪ್ರೀತಿಯಿಂದ ಬಾಳುತ್ತಿದೆ. ಆದರೆ ಬಿಜೆಪಿಯು ಜಾತಿ ಜಾತಿಗಳ ಮಧ್ಯೆ ಜಗಳ ಹಚ್ಚಿ ದೇಶದಲ್ಲಿನ ಶಾಂತಿ ಕದಡಲು ಮುಂದಾಗಿದೆ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗೋಕಾಕನ ತಮ್ಮ ಹಿಲ್ ಗಾರ್ಡನ್ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಎಂದರೆ ದೇಶಭಕ್ತರು ಎಂಬಂತೆ ಜನರನ್ನು ಬಿಜೆಪಿಯವರು ದಿಕ್ಕುತಪ್ಪಿಸುತ್ತಿದ್ದಾರೆ. ಸ್ವಾತ್ಯಂತ್ರ ಹೋರಟದಲ್ಲಿ ಪಾಲ್ಗೋಂಡು ದೇಶಕ್ಕೆ ಸ್ವಾತ್ಯಂತ್ರ ತಂದವರು ನಿಜವಾದ ದೇಶಭಕ್ತರು. ಬ್ರಿಟಿಷರನ್ನು ಕ್ಷಮೆ ಕೇಳಿದವರು ದೇಶಭಕ್ತರಾಗಲು ಹೇಗೆ ಸಾಧ್ಯ ಎಂದು ಅವರು ಹೇಳಿದರು.


ನಿಜವಾದ ದೇಶ ಭಕ್ತರು ಯಾರು ಮತ್ತು ನಕಲಿ ದೇಶ ಭಕ್ತರು ಯಾರು ಎಂದು ತೀರ್ಮಾನ ಮಾಡುವಂತಹ ಕಾಲ ಬಂದೆ ಬರುತ್ತದೆ. ಜನ ಸೇವೆ ಮಾಡುವುದು ಬಿಜೆಪಿಯವರಿಗೆ ಬೇಕಾಗಿಲ್ಲ ಕೇವಲ ಧರ್ಮ, ಜಾತಿಗಳ ಮಧ್ಯೆ ಜಗಳ ಹಚ್ಚಿ ವೋಟು ಪಡೆಯುವುದು ಅವರ ಉದ್ದೇಶವಾಗಿದೆ ಎಂದು ವಾಗ್ದಾಳಿ ನಡೆಸಿದರು.










