ವಿಷ್ಣು ದಾದಾ ಮೂರ್ತಿ ದ್ವಂಸ ಮಾಡಿದ ಕಿಡಿಗೇಡಿಗಳಿಗೆ ಖಡಕ್ ವಾರ್ನ್ ಮಾಡಿದ ಕಿಚ್ಚ ಸುದೀಪ್

ಬೆಂಗಳೂರು: ಸ್ಯಾಂಡಲ್ ವುಡ್ ನಟ, ಸಾಹಸಸಿಂಹ ಡಾ.ವಿಷ್ಣುವರ್ಧನ ಅವರ ಪ್ರತಿಮೆಯನ್ನು ಯಾರೋ ಕಿಡಿಗೇಡಿಗಳು ಒಡೆದು ಹಾಕಿರುವುದು ಈಗಾಗಲೇ ರಾಜ್ಯಾದ್ಯಂತ ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಸ್ಯಾಂಡಲ್ ವುಡ್ ಹಲವು ಸ್ಟಾರ್ ನಟರು ಕೂಡ ಇಂತಹ ಹೇಯ ಕೃತ್ಯ ಎಸಗಿರುವವರ ವಿರುದ್ಧ ಕಿಡಿ ಕಾರಿದ್ದಾರೆ.

promotions

ಹೌದು, ಕನ್ನಡ ನಾಡಿನ ಹೆಸರಾಂತ ಜನಪ್ರಿಯ ನಟ ವಿಷ್ಣು ದಾದಾ ಅವರ ಪ್ರತಿಮೆಯನ್ನು ಯಾರೋ ಕಿಡಿಗಳು ದ್ವಂಸ ಮಾಡಿದ್ದರಿಂದ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದರ ಕುರಿತು ಕಿಚ್ಚ ಸುದೀಪ ಅಂತ ಕಿಡಿ ಗೆಡಿಗಳಿಗೆ ಖಡಕ್ ಆಗಿ ಎಚ್ಚರಿಕೆ ನೀಡಿದ್ದು ವಿಡಿಯೋ ಮಾಡುವ ಮೂಲಕ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

promotions

ಕಿಡಿಗೇಡಿಗಳು ಸಿಕ್ರೆ ಸಾಕು ಅವರು ಜನ್ಮ ಜಾಲಾಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಮೂರ್ತಿ ಒಡೆದವರು ಸಿಕ್ಕಿಹಾಕಿಕೊಳ್ಳದೆ ಇರುವುದೇ ಒಳ್ಳೆಯದು, ಒಂದು ವೇಳೆ ಸಿಕ್ಕಿದ್ದೇ ಆದಲ್ಲಿ ಆ ಮೂರ್ತಿಗೆ ನೀವು ಮಾಡಿರುವುದಕ್ಕಿಂತ ಹೆಚ್ಚಿನ ಶಾಸ್ತಿ ನಿಮಗೆ ಮಾಡುವುದಂತೂ ಸತ್ಯ. ಹೆಸರು ಗೊತ್ತಾದ ತಕ್ಷಣ ದೇಶ ಬಿಟ್ಟು ಓಡಿ ಹೋಗುವುದೇ ಒಳ್ಳೆಯದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

Read More Articles