ಅಭಿವೃದ್ಧಿಪರ ಮತದಾರರ ತೀರ್ಪು: ಬಸವರಾಜ ಮಟಗಾರ
- 14 Jan 2024 , 10:38 PM
- Belagavi
- 156
ಹುಕ್ಕೇರಿ: ತಾಲೂಕಿನ ಹಿಡಕಲ್ ಡ್ಯಾಮ್ ಸಮೀಪದ ಹೊಸಪೇಟ ಗ್ರಾಮ ಪಂಚಾಯತಿ ಸದಸ್ಯರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮತ್ತೆ ಮತದಾರರು ಚುನವಾಣೆಯಯಲ್ಲಿ ಗೆಲವು ತಂದು ಕೊಟ್ಟಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಹಿರಿಯ ರಾಜಕಾರಣಿ ಬಸವರಾಜ ಮಟಗಾರ ಹೇಳಿದರು.

ಅವರು ಬುದವಾರ ದಿ. ೩೦ ರಂದು ಹಿಡಕಲ್ ಡ್ಯಾಮಿನಲ್ಲಿ ನೂತನವಾಗಿ ಆಯ್ಕೆಯಾದ ಸದಸ್ಯರು ಚುನಾವಣೆಯಲ್ಲಿ ಆಯ್ಕೆಮಾಡಲು ಶ್ರಮಿಸಿದ ಧುರೀಣರಿಗೆ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಸತ್ಕಾರ ಸ್ವಿಕರಿಸಿ ಮಾತನಾಡಿದರು. ಹೊಸಪೇಟ ಗ್ರಾಮ ಪಂಚಾಯತಿ ಬರುವ ವಾರ್ಡಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆನ್ನು ಸದುದ್ದೇಶದಿಂದ ಅವಿರೋಧವಾಗಿ ಸದಸ್ಯರನ್ನು ಆಯ್ಕೆಮಾಡಲು ರಾಜಿ ಸಂಧಾನ ಮಾಡಲು ಪ್ರಯತ್ನಿಸಲಾಯಿತು.

ಆದರೆ, ಕೆಲ ಪಟ್ಟಬದ್ಧ ಹಿತಾಸಕ್ತಿಗಳು ರಾಜಿ ಸಂಧಾನಕ್ಕೆ ನಿರಾಕರಿಸಿದ್ದರಿಂದ ಕೇವಲ ೨ ಜನರನ್ನು ಸದಸ್ಯರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಒಟ್ಟು ೧೨ ಸ್ಥಾನಗಳಲ್ಲಿ ೧೧ ಸ್ಥಾನಗಳು ನಮ್ಮ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ.ಜಾಗೃತ ಮತದಾನರು ದುಷ್ಟ ಶಕ್ತಿಗಳನ್ನು ಸೋಲಿಸಿ ಶಿಷ್ಟರನ್ನು ಆಯ್ಕೆ ಮಾಡಿದ್ದಾರೆ. ಹೊಸದಾಗಿ ಆಯ್ಕೆಯಾಗಿರುವ ಸದಸ್ಯರು ಪಕ್ಷಾತೀತವಾಗಿ ಗ್ರಾಮದ ಅಭಿವೃದ್ದಿ ಕಾರ್ಯಗಳನ್ನು ಮಾಡಬೇಕೆಂದು ಬಸವರಾಜ ಮಟಹಗಾರ ಸಲಹೆ ನೀಡಿದರು. ಮುಖ್ಯ ಅತಿಥಿಗಳಾಗಿ ಕೆ ದೊರೆಸ್ವಾಮಿ,
ಆರ ಕರುಣಾ, ಎನ್ ಎಸ್ ಆಜರೇಕರ, ಎಲ್ ಎಸ್ ತಳವಾರ ಇವರು ಆಗಮಿಸಿದರು. ಹೊಸಪೇಟ ಗ್ರಾಮ ಪಂಚಾಯತಿ ವಾರ್ಡ ನಂ. ೧ ರಿಂದ ಅರ್ಜುನ ಬಿ ನೇಸರಗಿ, ಮೊಹ್ಮದಹುಸೇನ ಗೋಕಾಕ, ಸುಮಿತ್ರಾ ಆರ್ ಬಾಗೇವಾಡಿ, ವಾರ್ಡ ನಂ. ೪ ರಿಂದ ಅಶ್ವಿನಿ ಎ ಕಾಂಬಳೆ, ವಾರ್ಡ ನಂ. ೫ ರಿಂದ ನಾರಾಯಣ ಖಣಗಾವಿ, ಇರ್ಷಾದ ಕೆ ಕಿಲ್ಲೇದಾರ, ಸುವರ್ಣಾ ಆರ್ ಮಗದುಮ್ಮ, ವಾರ್ಡ ನಂ. ೬ ರಿಂದ ಸದಾನಂದ ಬಿ ಮಾಳ್ಯಾಗೋಳ (ಅವಿರೋಧ ಆಯ್ಕೆ) ಆರತಿ ಡಿ ಪವಾರ (ಅವಿರೋಧ ಆಯ್ಕೆ) ಮತ್ತು ವಾರ್ಡ ನಂ. ೭ ಭಾರತಿ ಬೆಣ್ಣೆ, ಅವಿನಾಶ ಕುರಣಿ ಇವರು ನೂತನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ
. ಈ ಸಮಾರಂಭದಲ್ಲಿ ಎ ಬಿ ನಿರ್ವಾಣಿ, ಶಬ್ಭಿರ ದಳವಾಯಿ, ರಾಜು ಗಳಾಟೆ, ಲಗಮಣ್ಣಾ ಗುರವಿ, ಸಿದ್ದಪ್ಪಾ ರಾಮಗಾನಟ್ಟಿ, ಸಂತೋಷ ನಾಯಿಕ, ಮೀರಾಸಾಬ ಮುಲ್ತಾನಿ, ಶಮಾ ಮುಲ್ತಾನಿ, ವೆಂಗಾಪ್ಪಾ ಹೊಸೂರ, ಮಂಜು ತಿಪ್ಪಣ್ಣಾ ಬಂಡಿವಡ್ಡರ, ಲಕ್ಷ್ಮಣ ಗಡಕರಿ, ಸಿದ್ದು ಗಡಕರಿ, ಚಂದು ಮುದಕಪ್ಪ ಬಂಡಿವಡ್ಡರ, ಮಲ್ಲೇಶ ದ್ಯಾಮಣ್ಣಾ ಬಂಡಿವಡ್ಡರ, ರಾಜು ದೊಡಮನಿ, ಮಲ್ಲು ದಾದಾಗೊಳ, ಸಂತೋಷ ದೇಸೂರಕರ ಮತ್ತು ಎಮ್ ಬಿ ಕಮತೆ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.










