ಕನ್ನಡಪರ ಹೋರಾಟಗಾರ ತಾಳೂರಕರ್ ಅಂಗಡಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
- 14 Jan 2024 , 11:31 PM
- Belagavi
- 103
ಬೆಳಗಾವಿ: ಮಹಾನಗರ ಪಾಲಿಕೆ ಮುಂಭಾಗ ಕನ್ನಡ ಧ್ವಜ ಸ್ತಂಭ ಸ್ಥಾಪನೆಗೆ ಮುಂದಾಳತ್ವ ವಹಿಸಿದ್ದ ಕನ್ನಡಪರ ಹೋರಾಟಗಾರ ಶ್ರೀನಿವಾಸ್ ತಾಳೂರಕರ್ ಅವರ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಶಹಪುರದಲ್ಲಿ ನಡೆದಿದೆ. ಹೌದು, ಮಹಾನಗರ ಪಾಲಿಕೆ ಮುಂಭಾಗ ಕನ್ನಡ ಧ್ವಜ ಸ್ತಂಭ ಸ್ಥಾಪನೆ ಮಾಡಿದ ಹಿನ್ನಲೆ ಅದನ್ನು ತೆರವು ಗೊಳಿಸುವುಂತೆ ಎಂಇಎಸ್ ಡಿ.30 ರವರೆಗೆ ಗಡವು ನೀಡಿತ್ತು.

ಆದರೆ ಅಂತಹ ಕಾರ್ಯ ಸಾಧ್ಯವಾಗದೆ ಇದ್ದಾಗ ಕೆಲವು ಕಿಡಿಗಳು ಕನ್ನಡಪರ ಹೋರಾಟಗಾರ ಶ್ರೀನಿವಾಸ್ ತಾಳೂರಕರ್ ಅವರ ಅಂಗಡಿಗೆ ತಡರಾತ್ರಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಸಕಾಲದಲ್ಲಿ ಸಾರ್ವಜನಿಕರು ಇದನ್ನು ನೋಡಿ ಮಾಹಿತಿ ನೀಡಿದ್ದರಿಂದ ಮುಂದೆ ನಡೆಯುವ ಬಾರಿ ಅನಾಹುತ ತಪ್ಪಿದೆ.

ಈ ಘಟನೆ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂತಹ ಘಟನೆಯನ್ನು ನೋಡಿದಾಗ ಕನ್ನಡ ನೆಲದಲ್ಲಿ ಕನ್ನಡ ಹೋರಾಟಗಾರನಿಗೆ ರಕ್ಷಣೆ ಇಲ್ಲ ಎಂಬ ಪ್ರಶ್ನೆ ಜನರಲ್ಲಿ ಮೂಡುತ್ತಿದೆ.










