ಬೆಳಗಾವಿ: ನಗರದಲ್ಲಿರುವ ಪಶು ಆಸ್ಪತ್ರೆಗೆ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯೆ ಡಾ.ಸೋನಾಲಿ ಸರ್ನೋಬತ್ ಮತ್ತು ಶಿವಾನಂದ ಡಂಬಳ ಅನಿರೀಕ್ಷಿತವಾಗಿ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಅವಲೋಕಿಸಿದರು. ಆಸ್ಪತ್ರೆಯ ಅವ್ಯವಸ್ಥೆ ನೋಡಿ ಅಸಮಾಧಾನ ವ್ಯಕ್ತಪಡಿಸಿದರು. ಆಸ್ಪತ್ರೆಯ ಅಸ್ವಚ್ಛತೆ, ಆಪರೇಶನ್ ಥೇಟರ್ ಕೊರತೆ, ಆಪರೇಶನ್‍ಗೆ ಒಳಗಾಗಿ ಚೇತರಿಸಿಕೊಳ್ಳದ ಪ್ರಾಣಿಗಳು ಅನಾರೋಗ್ಯಕರ ವಾತಾವರಣ ಇವೆಲ್ಲವುಗಳ ಮಾಹಿತಿ ಸಂಗ್ರಹಿಸಿ ಮಾಲಿನ್ಯ ರಹಿತ ಸ್ವಚ್ಛ ವಾತಾವರಣ ಕಲ್ಪಿಸಬೇಕು, ವೆಂಟಿಲೇಟರ್‍ಗಳನ್ನು ಇರಿಸಿಕೊಳ್ಳಬೇಕು. ನೀರಿನ ಸೌಲಭ್ಯ ಮಾಡಿಕೊಳ್ಳಬೇಕು ಎಂದು ಸಂಬಂಧಿಸಿದ ಪಶು ಮಾರಾಟ ಅಂಗಡಿಕಾರರಿಗೆ ಸೂಚಿಸಿ ಸ್ಮಾರ್ಟ್ ಸಿಟಿಗೆ ಒಂದು ಸುಸಜ್ಜಿತ ಪಶು ಆಸ್ಪತ್ರೆ ಬೇಕಿದೆ ಅದರ ಬಗ್ಗೆ ಚರ್ಚಿಸಲಾಗುವುದು ಎಂದು ಡಾ.ಸೋನಾಲಿ ಹೇಳಿದರು