ಜನರ ಜೀವದೊಂದಿಗೆ ಆಟವಾಡುತ್ತಿದೆ ಹೆಸ್ಕಾಂ ಇಲಾಖೆ

ಬೆಳಗಾವಿ: ಜನರ ಜೀವದೊಂದಿಗೆ ಆಟವಾಡುವ ಹೆಸ್ಕಾಂ ಇಲಾಖೆಯ ದಿವ್ಯ ನಿರ್ಲಕ್ಷದಿಂದ ಬೆಳಗಾವಿ ತಾಲೂಕಿನ ಅಲಾರವಾಡ ಗ್ರಾಮದಲ್ಲಿರುವ ವಿದ್ಯುತ್ ಟ್ರಾನ್ಸಫಾರ್ಮರ್ ಅವಾಂತರದಿಂದ ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ ಎಂದು ಜನರು ಹೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಒಂದು ನಿರ್ದಿಷ್ಟ ಜಾಗ ನೋಡಿ ಗಟ್ಟಿ ನೆಲದಲ್ಲಿ ನಿಲ್ಲಿಸ ಬೇಕಾಗಿದ್ದ ಟ್ರಾನ್ಸಪರ್ಮರನ್ನು ಅಧಿಕಾರಿಗಳ ನಿರ್ಲಕ್ಷತನದಿಂದ ಗಟ್ಟಿ ಇರದ ನೆಲದಲ್ಲಿ ನಿಲ್ಲಿಸಿದ್ದಾರೆ ಇದರಿಂದ ಇಂದು ಅಥವಾ ನಾಳೆ ಬೀಳುವ ಹಂತದಲ್ಲಿ ಆ ಟ್ರಾನ್ಸಪರ್ಮರ ಇದೆ ಪಕ್ಕದಲ್ಲಿಯೇ ಶೌಚಾಲಯ ವಿರುವದರಿಂದ ವಿದ್ಯಾರ್ಥಿಗಳು ತಮ್ಮ ಜೀವ ಅಂಗೈಯಲ್ಲಿ ಹಿಡಿದು ಅಂಜಿಕೊಂಡೇ ಅದನ್ನು ದಾಟಿ ಹೋಗುವ ಪರಿಸ್ಥಿತಿ ಉಲ್ಬಣಗೊಂಡಿದೆ. ಮೊನ್ನೆ ತಾನೆ ವಿದ್ಯುತ್ ಶಾರ್ಟ ಸರ್ಕ್ಯೂಟನಿಂದ ಒಬ್ಬ ಹೆಸ್ಕಾಂ ಸಿಬ್ಬಂದಿಯು ಮರಣ ಹೊಂದಿದ್ದಾನೆ ಇದರ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಹೇಳಿದರು ಪ್ರಯೋಜನ ಆಗಿಲ್ಲ ಎಂದು ಹೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

promotions

Read More Articles