ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರ ವಿವಿಧ ಹಂತಗಳಲ್ಲಿ ಹುದ್ದೆಗಳ ಸೃಷ್ಟಿ: ಸಿ.ಎಸ್. ಷಡಕ್ಷರಿ

ಬೆಳಗಾವಿ: ಸರಕಾರಿ ನೌಕರರ ಭವನ ಬೆಳಗಾವಿ, ಇಲ್ಲಿ ಪ್ರೌಢಶಾಲಾ ಶಿಕ್ಷಕರು ಮುಖ್ಯೋಪಾಧ್ಯಾಯರು ಮತ್ತು ಪಿಯು ಉಪನ್ಯಾಸಕರ ರೊಂದಿಗೆ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಕ್ಷರಿ ಅವರ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

promotions

ಕಾರ್ಯಕ್ರಮದಲ್ಲಿ ಜಗದೀಶ್ ಗೌಡಪ್ಪ ಪಾಟೀಲ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಗಳು ಮತ್ತು ಜಿಲ್ಲಾಧ್ಯಕ್ಷರು ಕರಾಸ ಸಂಘ, ಜಯಕುಮಾರ್ ಹೆಬಳಿ, ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಜಿಲ್ಲಾಧ್ಯಕ್ಷರು ಕ ರಾ ಪ್ರಾ ಶಾ ಶಿ ಸಂಘ. ಶ್ರೀಕಾಂತ್ ಯರಡ್ಡಿ, ರಾಜ್ಯ ಜಂಟಿ ಕಾರ್ಯದರ್ಶಿಗಳು, ಕ ರಾ ಸ ನೌ ಸಂಘ, ಹಾಗೂ ಪದವಿಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಈ ಸಂವಾದ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಶಿಕ್ಷಕರು ಮುಖ್ಯೋಪಾಧ್ಯಯರು ಮತ್ತು ಪಿಯು ಉಪನ್ಯಾಸಕರು ತಮ್ಮ ಹಲವಾರು ಸಮಸ್ಯೆಗಳನ್ನು, ಬೇಡಿಕೆಗಳನ್ನು ಕುರಿತು ಚರ್ಚಿಸಿದರು ಹಾಗೂ ಮನವಿಗಳನ್ನು ರಾಜ್ಯಾಧ್ಯಕ್ಷರಿಗೆ ಸಲ್ಲಿಸಿದರು.

promotions

ಸುಮಾರು ಎರಡು ಗಂಟೆಗಳವರೆಗೆ ನಡೆದ ಸಂವಾದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ರಾಜ್ಯ ಅಧ್ಯಕ್ಷರಾದ ಷಡಕ್ಷರಿ ಯವರಿಗೆ ಎನ್ಪಿಎಸ್ ರದ್ಧತಿಯ ಬಗ್ಗೆ, ಕಡ್ಡಾಯ ವರ್ಗಾವಣೆಯ ಬಗ್ಗೆ ಗ್ರಾಮೀಣ ರಹಿತ ಶಿಕ್ಷಕರ ಸಮಸ್ಯೆ, ಬಗ್ಗೆ ಉಪನ್ಯಾಸಕರ ವೇತನ ತಾರತಮ್ಯದ ಬಗ್ಗೆ, ಪ್ರೌಢಶಾಲಾ ಶಿಕ್ಷಕರ ಪ್ರಭಾರಿ ಮುಖ್ಯ ಶಿಕ್ಷಕರ ಇತರೆ ಸೌಲಭ್ಯಗಳ ಬಗ್ಗೆ, ದೈಹಿಕ ಶಿಕ್ಷಕರ ಬೇಡಿಕೆಗಳ ಬಗ್ಗೆ, 2010 ರ ಜೂನ್ ಮತ್ತು ಜುಲೈ ನಲ್ಲಿ ನೇಮಕಾತಿ ಹೊಂದಿದ ಪ್ರೌಢಶಾಲಾ ಶಿಕ್ಷಕರ ವೇತನ ತಾರತಮ್ಯದ ಬಗ್ಗೆ, ಮೋರಾರ್ಜಿ ಶಾಲಾ ನೌಕರರ ಸಮಸ್ಯೆಗಳ ಬಗ್ಗೆ, 10,15,20,25 ವರ್ಷಗಳ ಕಾಲಮಿತಿ ವೇತನ ಬಡ್ತಿಗಳ ಕುರಿತು ಹಾಗೂ ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರ ಭಡ್ತಿಯ ಕುರಿತು ಹಾಗೂ ವಿವಿಧ ಹಂತದಲ್ಲಿ ಮುಖ್ಯೋಪಾಧ್ಯಾಯರ ಹುದ್ದೆಗಳಿಗೆ ಸಮಾನಾಂತರವಾಗಿ ಬೇರೆ ಹುದ್ದೆ ಸೃಷ್ಟಿಸಿ ಬಡ್ತಿ ನೀಡುವ ಕುರಿತು ಹಲವಾರು ಪ್ರಶ್ನೆ ಗಳನ್ನು ಕೇಳಿದರು.

ಸಿ.ಎ.ಎಸ್. ಷಡಕ್ಷರಿ ಅವರು ಎಲ್ಲ ಪ್ರಶ್ನೆಗಳನ್ನು ಸಮಾಧಾನದಿಂದ ಆಲಿಸಿ ಉತ್ತರಿಸಿದರು ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರ ವಿವಿಧ ಹಂತದಲ್ಲಿ ಹುದ್ದೆಗಳ ಸೃಷ್ಟಿಯ ಬಗ್ಗೆ ಹಾಗೂ ಬಡ್ತಿ ನೀಡುವ ಕುರಿತು ಗಮನ ಹರಿಸುವುದಾಗಿ ತಿಳಿಸಿದರು, ಕಡ್ಡಾಯ ವರ್ಗಾವಣೆಯಿಂದ ತೊಂದರೆಗೊಳಗಾದ ಶಿಕ್ಷಕರ ಹಿತ ಕಾಪಾಡುವುದಾಗಿ ಭರವಸೆ ನೀಡಿದರು. ಎನ್ ಪಿ ಎಸ್ ರದ್ದು ಪಡಿಸಿ ಒಪಿಎಸ್ ಜಾರಿಗೆ ತರುವುದು ತಮ್ಮ ಮುಖ್ಯಗುರಿ ಗಳಲ್ಲೊಂದು ಎಂದರು.

ಪ್ರೌಢಶಾಲಾ ಶಿಕ್ಷಕರ ಬಡ್ತಿ ಯನ್ನು ಪದವಿ ಪೂರ್ವ ಕಾಲೇಜುಗಳಿಗೆ ಶೀಘ್ರವಾಗಿ ನೀಡುವುದಾಗಿ ತಿಳಿಸಿದರು. ದೈಹಿಕ ಶಿಕ್ಷಣ ಶಿಕ್ಷಕರ ಬೇಡಿಕೆಗಳನ್ನು ಶೀಘ್ರದಲ್ಲಿಯೇ ಈಡೇರಿಸುವುದಾಗಿ ಭರವಸೆ ನೀಡಿದರು. ಮುರಾರ್ಜಿ ಶಾಲಾ ನೌಕರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು. ಹಾಗೆಯೇ ಏಪ್ರಿಲ್ ಒಂದರಿಂದ ಕೆಜಿಐಡಿ ಸಂಪೂರ್ಣ ಡಿಜಿಟಲೀಕರಣ ಆಗುವುದು ಮತ್ತು ಮುಂದಿನ ದಿನಗಳಲ್ಲಿ ಕೇಂದ್ರದ ಸಮಾನ ವೇತನ ನೀಡುವ ಯೋಜನೆ ಜಾರಿಗೆ ಖಚಿತವಾಗಿ ಬರುವುದು ಎಂದು ಭರವಸೆ ನೀಡಿದರು.

ಸಂವಾದ ಕಾರ್ಯಕ್ರಮ ಆಲಿಸಿದ ನೌಕರರೆಲ್ಲರೂ ಸಂತಸಗೊಂಡರು. ಶಶಿಧರ ಗುಂಡ್ಲೂರ ಸ್ವಾಗತಿಸಿದರು, ಜಿ ಆರ್ ಮಂತುರಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಂ ಎಫ್ ಸುಬ್ಬಪುರಮಠ ವಂದಿಸಿದರು.ಕಾರ್ಯಕ್ರಮವನ್ನು ಡಾ. ಗಜಾನಂದ ಸೊಗಲನ್ನವರ ನಿರೂಪಿಸಿದರು.

Read More Articles