ಹುಕ್ಕೇರಿ ಮತಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಆದ್ಯತೆ : ಶಾಸಕ ಉಮೇಶ ಕತ್ತಿ
- 14 Jan 2024 , 11:59 PM
- Belagavi
- 98
ಹುಕ್ಕೇರಿ: ಹುಕ್ಕೇರಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿವಿಧ ಹಳ್ಳಿಗಳಲ್ಲಿ ಸರಕಾರದ ಪ್ರತಿಯೊಂದು ಯೋಜನೆಗಳನ್ನು ಮಂಜೂರು ಪಡೆದು ವಿವಿಧ ಕಾಮಗಾರಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಶಾಸಕ ಉಮೇಶ ಕತ್ತಿ ಹೇಳಿದರು.

ಶನಿವಾರ ದಿ 09 ರಂದು ಜಿಲ್ಲಾ ಪಂಚಾಯತ ಅನುದಾನದಲ್ಲಿ ಮಂಜೂರಾದ 5 ಲಕ್ಷ ರೂ ಗಳ ವೆಚ್ಚದಲ್ಲಿ ಹಿಡಕಲ್ ಡ್ಯಾಮ್ ಸಮೀಪದ ಲೇಬರ್ ಕ್ಯಾಂಪ್ ಗ್ರಾಮದ ಹನುಮಾನ ಗುಡಿಯ ಸಮುದಾಯ ಭವನ, ಶಿಂಧಿಹಟ್ಟಿಯಲ್ಲಿ 12 ಲಕ್ಷ ರೂ ಗಳ ವೆಚ್ಚದಲ್ಲಿ ಲಕ್ಷ್ಮೀ ಗುಡಿಯ ಸಮುದಾಯ ಭವನ, ಹಿಡಕಲ್ ಡ್ಯಾಮಿನಲ್ಲಿ 5 ಲಕ್ಷ ರೂ ಗಳ ವೆಚ್ಚದಲ್ಲಿ ಲಕ್ಷ್ಮೀ ಗುಡಿಯ ಸಮುದಾಯ ಭವನ 2 ಲಕ್ಷ ರೂ ಗಳ ವೆಚ್ಚದಲ್ಲಿ ಸಾರ್ವಜನಿಕ ಸ್ಥಳ ಸಮುದಾಯ ಭವನ ಮತ್ತು ಹೊಸಪೇಟ ಗ್ರಾಮದಲ್ಲಿ 5 ಲಕ್ಷ ರೂ ಗಳ ವೆಚ್ಚದಲ್ಲಿ ತಳದೇಶ್ವರ ಗುಡಿಯ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಹಿರಿಯ ರಾಜಕಾರಣಿ ಬಸವರಾಜ ಮಟಗಾರ, ಕೆ.ದೊರೆಸ್ವಾಮಿ, ಬಿ.ಜೆ.ಪಿ ಹುಕ್ಕೇರಿ ಮಂಡಳದ ಅಧ್ಯಕ್ಷ ರಾಚಯ್ಯ ಹಿರೇಮಠ, ಹುಕ್ಕೇರಿ ಗ್ರಾಮೀಣ ವಿದ್ಯುತ ಸಂಘದ ಅಧ್ಯಕ್ಷ ಕಲಗೌಡಾ ಪಾಟೀಲ, ಹಿಡಕಲ್ ಡ್ಯಾಮ್ ಶ್ರೀ ಸಂಗಮ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಉಪಾಧ್ಯಕ್ಷ ಶಂಕರರಾವ ಬಾಂದುರಗೆ, ಸತ್ತೆಪ್ಪಾ ನಾಯಿಕ, ಹುಕ್ಕೇರಿ ಉಪವಿಭಾಗದ ಪಿ.ಡಬ್ಲೂ.ಡಿ ಸ.ಕಾ.ನಿ ಅಭಿಯಂತ ಎಸ್.ಕೆ ಹುಕ್ಕೇರಿ, ಜಿ.ಪಂ ಹುಕ್ಕೇರಿ ಉಪವಿಭಾಗದ ಎ.ಇ.ಇ ಅಭಿಯಂತ ಅಶೋಕ ಪಟ್ಟಣಶೆಟ್ಟಿ, ಅಭಿಯಂತ ಎಸ್.ಡಿ.ಕಾಂಬಳೆ,
ಪ್ರಗತಿಪರ ರೈತರಾದ ವಿಕೆ.ಹುದ್ದಾರ, ನ್ಯಾಯವಾದಿ ಜಿ.ಎಸ್.ಗವತಿ, ತಾ.ಪಂ ಸದಸ್ಯೆ ಲಕ್ಷ್ಮೀ ಪಂಚನ್ನವರ, ಮಾಜಿ ತಾ.ಪಂ ಸದಸ್ಯ ಸುರೇಂದ್ರ ಶೇರವಿ, ಬಂಡೆಪ್ಪ ಮಾದರ, ಎಲ್.ಎಸ್.ತಳವಾರ, ಶಮಾ ಮುಲ್ತಾನಿ, ಬಸವರಾಜ ಜಿಂಡ್ರಾಳಿ, ವೆಂಕಪ್ಪ ಹೊಸುರ, ಗ್ರಾಮ ಪಂಚಾಯತಿಯ ಸದಸ್ಯರಾದ ಸದಾನಂದ ಮಾಳ್ಯಾಗೋಳ, ಇರ್ಷಾದ ಕಿಲ್ಲೇದಾರ, ಅಶ್ವೀನಿ ಅಜೀತ ಕಾಂಬಳೆ, ಭಾರತಿ ಬಸವಣ್ಣಿ ಬೆಣ್ಣಿ, ಅರ್ಜುನ ನೇಸರಗಿ, ಮಕ್ತುಂ ಹುಸೇನ ಗೋಕಾಕ, ಮತ್ತು ಶಿಂಧಿಹಟ್ಟಿ ಗ್ರಾಮದ ಸಮಸ್ತ ನಾಗರೀಕರು ಉಪಸ್ಥಿತರಿದ್ದರು.










