ಬೆಳಗಾವಿಯ ನಾಲ್ವರು ಪತ್ರಕರ್ತರಿಗೆ ಗೌರವ ಸನ್ಮಾನ
- 14 Jan 2024 , 9:33 PM
- Belagavi
- 147
ಬೆಳಗಾವಿ: ಪ್ರತಿ ವರ್ಷ ನೀಡುವಂತೆ ಈ ವರ್ಷವೂ ಕೂಡ ನಗರದ ಗಣಪತಿ ಗಲ್ಲಿಯಲ್ಲಿಯ ಸಾರ್ವಜನಿಕ ವಾಚನಾಲಯವು ಪ್ರತಿಷ್ಠಿತ ಪ್ರಶಸ್ತಿಯನ್ನು ಜ.18 ಸೋಮವಾರ ವಾಚನಾಲಯ ಸಭಾಂಗಣದಲ್ಲಿ ಸಂಜೆ 5.30ಕ್ಕೆ ನಾಲ್ವರು ಪತ್ರಕರ್ತರಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಕನ್ನಡಮ್ಮ ದಿನಪ್ರತಿಕೆಯ ಹಿರಿಯ ವರದಿಗಾರ ರಾಜಶೇಖರಯ್ಯ ಹಿರೇಮಠ, ಮರಾಠಿ ರಣಝೂಂಝಾರ್ ಪತ್ರಿಕೆ ಸಂಪಾದಕ ಮನೋಹರ್ ಕಾಲಕುಂದ್ರಿಕರ್, ಸ್ವತಂತ್ರ ಪ್ರಗತಿಯ ಸಂಪಾದಿಕಿ ಭಬಿತಾ ಪವಾರ, ಬಿಗ್ ನ್ಯೂಸ್ ಸುದ್ದಿವಾಹಿನಿಯ ಭಾಗ್ಯಶ್ರೀ ಸುಣಗಾರ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅವರಿಗೆ ಇದೇ ಸೋಮವಾರ ಸಾಯಂಕಾಲ ನಡೆಯಲಿರುವ ಸಾರ್ವಜನಿಕ ವಾಚನಾಲಯದ ಸಾಥ್`ಪೈ’ ಉಪನ್ಯಾಸ ಮಾಲೆಯ ಸಮಾರಂಭದಲ್ಲಿ ಈ ಎಲ್ಲಾ ಪತ್ರಕರ್ತರಿಗೆ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಗುತ್ತಿದೆ.
ಈ ಸಮಾರಂಭದಲ್ಲಿ ವಾಚನಾಲಯ ಅಧ್ಯಕ್ಷೇ ಸುನಿತಾ ಮೋಹಿತೆ, ಉಪಾಧ್ಯಕ್ಷ ನೇತಾಜಿ ಜಾಧವ, ಪದಾಧಿಕಾರಿಗಳಾದ ರಘುನಾಥ ಭಾಂಗಡಿ, ನ್ಯಾಯವಾದಿ ಐ ಜಿ. ಮುಚ್ಚಂಡಿ ಸೇರಿದಂತೆ ಮೊದಲಾದ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










