ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ಟೆಂಪಲ್ ರನ್ ಶುರು ಮಾಡಿದ ಆರ್.ಶಂಕರ್
- 14 Jan 2024 , 11:55 PM
- Mysuru
- 92
ಕೋಲಾರ/ಮೈಸೂರು: ಬಿ ಎಸ್ ಯಡಿಯೂರಪ್ಪ ಸಂಪುಟದಲ್ಲಿ ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ಆರ್.ಶಂಕರ ಟೆಂಪಲ್ ರನ್ ಮಾಡುತ್ತಿದ್ದಾರೆ. ಸಚಿವರಾಗಿ ಮಠ ಮಾನ್ಯಗಳಿಗೆ ಭೇಟಿ ನೀಡುತ್ತಿದ್ದು. ಮೂರನೇ ಬಾರಿಗೆ ಸಚಿವರಾಗಿ ನೇಮಕವಾದ ಹಿನ್ನೆಲೆಯಲ್ಲಿ ಆರ್.ಶಂಕರ ಕೋಲಾರದ ಕುರುಡುಮಲೆ ಗಣೇಶ ದೇವಸ್ಥಾನಕ್ಕೆ ಕುಟುಂಬ ಸಮೇತ ಬಂದು ಹರಕೆ ತೀರಿಸಿ, ಮೈಸೂರಿನ ನಂಜನಗೂಡಿನ ನಂಜುಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಆಶೀರ್ವಾದ ಪಡೆದಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹರಕೆ ತೀರಿಸಲು ದೇವಸ್ಥಾನಕ್ಕೆ ಬಂದಿದ್ದೇನೆ. ಭಗವಂತನ ಆಶೀರ್ವಾದದಿಂದ ಒಳ್ಳೆಯ ಖಾತೆ ಸಿಗಲಿದೆ. ನಾನು ಯಾವ ಖಾತೆಯನ್ನು ಸಿಎಂ ಬಳಿ ಕೇಳಿಲ್ಲ. ಸಿಎಂ ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುವ ನಾಯಕ ಎಂದು ಆರ್.ಶಂಕರ್ ಹೇಳಿದ್ದಾರೆ.












