ರಾಮಮಂದಿರಕ್ಕೆ ಭಕ್ತಿಪೂರ್ವಕ ನಿಧಿ ಸಮರ್ಪಣೆ

ಹುಕ್ಕೇರಿ: ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ವತಿಯಿಂದ ಶ್ರೀರಾಮ ಮಂದಿರ ನಿರ್ಮಾಣ ನಿಧಿ  ಸಮರ್ಪಣಾ ಅಭಿಯಾನಕ್ಕೆ ಸಂಬಂಧಿಸಿದಂತೆ ಇಂದು ಅವರಗೋಳ ಗ್ರಾಮದಲ್ಲಿ ನಿಧಿ ಸಂಗ್ರಹ ಮಾಡಲಾಯಿತು. ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದಲ್ಲಿ ಚಾಲನೆ ನೀಡಲಾಗಿತ್ತು. ಜಿಲ್ಲೆಯಾದ್ಯಂತ ಎಲ್ಲಾ ಗ್ರಾಪಂ ಕೇಂದ್ರಗಳಲ್ಲಿ ಸಂಕ್ರಾಂತಿ ಉತ್ಸವ ನಂತರ ಮನೆ, ಮನೆಗೆ ಸಂಪರ್ಕ ಅಭಿಯಾನ ಆರಂಭಿಸಿ ಮನೆ ಮನೆಗು ತೆರಳಿ ಕಾರ್ಯಕರ್ತರು ನಿಧಿ ಸಂಗ್ರಹ ಮಾಡಿದರು.

promotions

ಎಲ್ಲವೂಪಾರದರ್ಶಕ: ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಅನ್ನು ಸುಪ್ರೀಂಕೋರ್ಟ್‌ ಆದೇಶದಂತೆ ಸ್ಥಾಪಿಸಲಾಗಿದೆ. ಶ್ರೀಮಂತರು, ಬಡವರೆನ್ನದೇ,ರೂ 10ರಿಂದ ರೂ 2 ಸಾವಿರದವರೆಗೂ ನಗದು ರಸೀದಿ ಮೂಲಕ ನಿಧಿ ಸಂಗ್ರಹಿಸಲಾಯಿತು. ಶ್ರೀ ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದ್ದು.

promotions

ಈ ನಿಟ್ಟಿನಲ್ಲಿ ರಾಮ ಮಂದಿರ ನಮ್ಮಲ್ಲೆರ ಕನಸಾಗಿದೆ. ಆದಷ್ಟು ಬೇಗ ಮಂದಿರ ನಿರ್ಮಾಣಗೊಳ್ಳುವ ಮೂಲಕ ಭಾರತೀಯರ ಬಹು ದಿನಗಳ ಕನಸು ನೇರವೆರಲಿದೆ. ಶ್ರೀ ರಾಮ ಮಂದಿರಕ್ಕೆ ಪ್ರತಿಯೊಬ್ಬ ಹಿಂದುವಿನ ಸೇವೆ ಸಮರ್ಪಣೆಗೊಳ್ಳಬೇಕು. ಪ್ರತಿಯೊಬ್ಬರು ಈ ಅಭಿಯಾನದಲ್ಲಿ ಭಾಗಿಯಾಗಿ ಮಂದಿರ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಿದರು.

Read More Articles