ಶಾಲಾ ಮಕ್ಕಳ ಬೇಸಿಗೆ ರಜೆಗೆ ಕೊಕ್ಕೆ

ಬೆಂಗಳೂರು: ಕೊರೋನಾ ಕಾರಣದಿಂದ ಶಾಲೆ, ಕಾಲೇಜುಗಳು ತಡವಾಗಿ ಆರಂಭವಾಗಿವೆ ಆದರೆ ಈ ಬಾರಿಯ ಬೇಸಿಗೆ ರಜೆಯನ್ನೂ ಬಳಸಿಕೊಂಡು ಮೇ ವರೆಗೆ ತರಗತಿಗಳನ್ನು ನಡೆಸುವ ಇಂಗಿತವನ್ನು ಸಚಿವ ಸುರೇಶ್ ಕುಮಾರ್ ವ್ಯಕ್ತಪಡಿಸಿದ್ದಾರೆ. ಇನ್ನು ನಾಲ್ಕು ತಿಂಗಳು ಉಳಿದಿದ್ದು. ಈ ಸಮಯವನ್ನು ಸಂಪೂರ್ಣವಾಗಿ ಓದಿಗೆ ಮೀಸಲಿಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

promotions

ಜೂನ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿದೆ. ಈಗಾಗಲೇ ಸಾಕಷ್ಟು ಸಮಯವನ್ನು ರಜೆಯಲ್ಲಿ ಕಳೆದಿದ್ದೀರಿ. ಇನ್ನು ಉಳಿದ ಸಮಯ ಓದಿನಲ್ಲೇ ಕಳೆಯಿರಿ ಎಂದು ಸಚಿವ ಸುರೇಶಕುಮಾರ ವಿದ್ಯಾರ್ಥಿಗಳಿಗೆ ಹೇಳಿದ್ದಾರೆ.

promotions

Read More Articles